Darshan Thoogudeepa: ಇಂದು 10.30ಕ್ಕೆ ದರ್ಶನ್‌ ಜಾಮೀನು ವಿಚಾರಣೆ: ಟಿವಿ ಬಿಟ್ಟು ಕದಲದ ಫ್ಯಾನ್ಸ್!

ಇಂದು ಬೆಳಿಗ್ಗೆ 10.30ಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ವಿಚಾರಣೆ ನಡೆಯಲಿದ್ದು ಅಭಿಮಾನಿಗಳು ಸಾಕಷ್ಟು ಕುತೂಹಲಕಾರಿಯಾಗಿದ್ದಾರೆ. ಅನಾರೋಗ್ಯದ ಕಾರಣ ದರ್ಶನ್‌ಗೆ ಇಂದು ಮಧ್ಯಂತರ ಜಾಮೀನು ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ತಮ್ಮ ನೆಚ್ಚಿನ ನಟ ದರ್ಶನ್ ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇದರಿಂದಾಗಿ ಅದೆಷ್ಟೋ ಜನ ದರ್ಶನ್ ಫ್ಯಾನ್ಸ್ ಟಿವಿ ಬಿಟ್ಟು ಕದಲುತ್ತಿಲ್ಲ.

ಹೌದು.... ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ದರ್ಶನ್‌ಗೆ ಜಾಮೀನು ನೀಡಲು ಸೆಷನ್ಸ್ ಕೋರ್ಟ್‌ ತಿರಸ್ಕರಿಸಿತ್ತು. ಬಳಿಕ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಇಂದು ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಹೀಗಾಗಿ ದರ್ಶನ್‌ಗೆ ಬಿಡುಗಡೆ ಭಾಗ್ಯ ಸಿಗುತ್ತಾ ಎನ್ನುವ ಕುತೂಹಲ ಮೂಡಿದೆ.

Darshan Thoogudeepa s bail hearing Today Fans who don t leave TV

ದೀಪಾವಳಿಗೆ ದರ್ಶನ್ ಆಗಮನ...!

ಅಕ್ಟೋಬರ್ 31 ರಂದು ದೀಪವಾಳಿ ಹಬ್ಬವನ್ನು ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಣೆಗೆ ಸಿದ್ದತೆಗಳು ನಡೆದಿವೆ. ಈ ಹಬ್ಬಕ್ಕೆ ದರ್ಶನ್ ಜೈಲಿನಿಂದ ಹೊರಬರುತ್ತಾರೆ ಎನ್ನುವ ನಂಬಿಕೆ ಅಭಿಮಾನಿಗಳಿಗೆ ಇದೆ. ಇದರಿಂದಾಗಿ ದರ್ಶನ್ ಫ್ಯಾನ್ಸ್ ಟಿವಿ ಬಿಟ್ಟು ಕದಲುತ್ತಿಲ್ಲ. ದರ್ಶನ್ ಇಂದು ಜೈಲಿನಿಂದ ಹೊರ ಬಂದರೆ ಅದ್ದೂರಿಯಾಗಿ ಸ್ವಾಗತ ಕೋರಲು ರೆಡಿಯಾಗಿ ಕುಳಿತಿದ್ದಾರೆ ದಾಸನ ಅಭಿಮಾನಿಗಳು. ಪಟಾಕಿ ಸಿಡಿಸಿ, ಬೃಹತ್ ಗಾತ್ರದ ಹೂವಿನ ಹಾರ ಹಾಕಿ, ಸಿಹಿ ಹಂಚಿ ತಮ್ಮ ನೆಚ್ಚಿನ ನಟನನ್ನು ಸ್ವಾಗತಿಸಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.

ದರ್ಶನ್‌ನನ್ನು ಬೆಂಗಳೂರಿಗೆ ಕರೆತರಲಿದೆ ಇದೇ ಹೆಲಿಕ್ಯಾಪ್ಟರ್..

ಹೌದು... ಇಂದು ದರ್ಶನ್ ಜೈಲಿನಿಂದ ಹೊರಬಂದರೆ ಅವರನ್ನು ಬೆಂಗಳೂರಿಗೆ ಹೆಲಿಕಾಪ್ಟರ್‌ ಮೂಲಕ ಕರೆತರಲು ಅಭಿಮಾನಿಗಳು ಯೋಚಿಸಿದ್ದಾರೆ. ಇದಕ್ಕಾಗಿ ಹೆಲಿಕಾಪ್ಟರ್‌ ಕೂಡ ಬುಕ್ ಮಾಡಲಾಗಿದೆ ಎನ್ನುವ ಸುದ್ದಿಗಳು ಇವೆ. ಬೆಂಗಳೂರಿನಲ್ಲಿ ಬಾಡಿಗೆಗೆ ಸಿಗುವ ಹೆಲಿಕಾಪ್ಟರ್‌ಗಳನ್ನು ಪಡೆದು ದರ್ಶನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಜಕ್ಕೂರ್‌ ಏರೋಡ್ರೋಮ್, ಬಳ್ಳಾರಿ ರೋಡ್‌ನಲ್ಲಿರುವ ಡೆಕ್ಕನ್ ಚಾರ್ಟರ್ಸ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್‌ ಡೆಕ್ಕನ್ ಸಿಂಪ್ಲಿಫ್ಲೈ ಕಂಪನಿಯೊಂದು ಸರ್ಕಾರಿ ಫ್ಲೈಯಿಂಗ್ ಕ್ಲಬ್‌ನಲ್ಲಿ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ನೀಡುತ್ತದೆ. ಇಲ್ಲಿ ಹೆಲಿಕಾಪ್ಟರ್ ಹಾಗೂ ಜೆಟ್‌ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು. ಇಲ್ಲೇ ದರ್ಶನ್‌ ಕರೆತರಲು ಹೆಲಿಕಾಪ್ಟರ್ ಬುಕ್ ಆಗಿದೆ ಎನ್ನಲಾಗುತ್ತಿದೆ.

ಕೆಡಕಿನಿಂದ ಒಳಿತನ ಕಡೆಗೆ ತರುವ ಹಬ್ಬ ದೀಪಾವಳಿ

ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಜೈಲಿನಿಂದ ಹೊರ ಕರೆತರಲು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಆದರೆ ಇಂದು ದರ್ಶನ್‌ ಅನಾರೋಗ್ಯ ಕಾರಣ ಜೈಲಿನಿಂದ ಹೊರಬರುವ ಸಾಧ್ಯತೆ ಇದೆ. ಅಂದುಕೊಂಡಂತೆ ಆದರೆ ದರ್ಶನ್ ಮನೆಯಲ್ಲಿ ಈ ಬಾರಿ ದೀಪಾವಳಿ ಹಬ್ಬ ಸಖತ್ ಜೋರಾಗಿ ನಡೆಯಲಿದೆ.

ದರ್ಶನ್ ಜೈಲಿನಿಂದ ಹೊರ ಬಂದರೆ ಮನೆಯಲ್ಲಿ ಪೂಜೆ, ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಕಾರ್ಯಗಳಲ್ಲಿ ದರ್ಶನ್ ಭಾಗವಹಿಸುವ ಸಾಧ್ಯತೆ ಇದೆ. ಕೆಡಕಿನಿಂದ ಒಳಿತನ ಕಡೆಗೆ ಸಾಗುವ ಸಂಕೇತವಾಗಿ ಆಚರಿಸುವ ಈ ದೀಪಾವಳಿ ದರ್ಶನ್ ಬಾಳಲ್ಲ ಹೊಸ ಜೀವನ ಆರಂಭಿಸುವ ನಿರೀಕ್ಷೆ ಪತ್ನಿಗಿದೆ. ಹೀಗಾಗಿ ಅವರನ್ನು ಬಿಡಿಸಿಕೊಂಡು ಬರಲು ವಿಜಯಲಕ್ಷ್ಮಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ.

ಒಟ್ಟಿನಲ್ಲಿ ಈ ದೀಪಾವಳಿ ಹಬ್ಬಕ್ಕೆ ದರ್ಶನ್ ಬಿಡುಗಡೆಯಾಗಿ ಬಂದೇ ಬರುತ್ತಾರೆನ್ನುವ ಅಪಾರ ನಂಬಿಕೆ ಅಭಿಮಾನಿಗಳಲ್ಲಿ ಇದೆ. ಆದರೆ ಕೋರ್ಟ್ ತೀರ್ಪು ಏನಾಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+