Darshan Thoogudeep: ದರ್ಶನ್ ತೂಗುದೀಪ್ ಜೈಲಿನಿಂದ ಬಿಡುಗಡೆ ಆಗುವ ದಿನ ಕುದುರೆ ಏರಿ ಅಬ್ಬರದಿಂದ ಎಂಟ್ರಿ?

ದರ್ಶನ್ ತೂಗುದೀಪ್ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗುವ ದಿನವು ಇನ್ನೇನು ಹತ್ತಿರ ಬರುತ್ತಿದೆ. ಹೀಗಾಗಿ ನಾವೆಲ್ಲಾ ಅಬ್ಬರದ ತಯಾರಿ ಮಾಡಿಕೊಳ್ಳಬೇಕು ಅಂತಾ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಹೀಗಿದ್ದಾಗಲೇ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ನೇರವಾಗಿ, ಕುದುರೆ ಹತ್ತಿಸಿಕೊಂಡು ಅವರ ಮನೆ ತನಕ ಕುದುರೆ ಸವಾರಿಯಲ್ಲಿ ಕರೆತರಲು ಅಬ್ಬರದ ತಯಾರಿ ಸಾಗಿದೆಯಂತೆ! ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ತಿಳಿಯೋಣ ಬನ್ನಿ.

ಹೌದು, ಕಳೆದ ಬಾರಿ ಅಂದ್ರೆ 2011 ರಲ್ಲಿ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ನಟ ದರ್ಶನ್ ಅವರು ರಿಲೀಸ್ ಆಗಿ ಹೊರಗೆ ಬಂದಾಗ ಕೂಡ ಅದ್ಧೂರಿ ಸ್ವಾಗತ ಸಿಕ್ಕಿತ್ತು. ಹೀಗೆ ದರ್ಶನ್ ತೂಗುದೀಪ್ ಅವರು ಬಿಡುಗಡೆ ಆಗಿ ಹೊರಗೆ ಬಂದ ಸಮಯದಲ್ಲಿ, ಕುದುರೆ ಸವಾರಿ ಕೂಡ ಮಾಡಿದ್ದರು. ಹೀಗಾಗಿ ಈ ಬಾರಿ ಕೂಡ ನಟ ದರ್ಶನ್ ಅವರನ್ನ ಬೃಹತ್ ಸಂಭ್ರಮ & ಸಡಗರದ ಮೂಲಕ ಅದ್ಧೂರಿಯಾಗಿ ಪರಪ್ಪನ ಅಗ್ರಹಾರ ಜೈಲಿಂದ ಕರೆದುಕೊಂಡು ಬರಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆಗೆ ಕೂಡ ವೇದಿಕೆ ಸಿದ್ಧವಾಗಿದೆ.

Darshan Thoogudeepa Will Come Like This From Parappana Agrahara

ಸಿನಿಮಾ ಇಂಡಸ್ಟ್ರಿಯಲ್ಲಿ ಸಾಮ್ರಾಜ್ಯ!

ದರ್ಶನ್ ತೂಗುದೀಪ್ ಅವರು 25 ವರ್ಷದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿದ್ದರು. ದರ್ಶನ್ ತೂಗುದೀಪ್ ಅವರ ಹೆಸರು ಕೇಳಿದ್ರೆ ಬಾಲಿವುಡ್ ಟು ಟಾಲಿವುಡ್, ಕಾಲಿವುಡ್ ಟು ಮಾಲಿವುಡ್ ನಟರು ಒಂದು ಕ್ಷಣ ಯೋಚನೆ ಮಾಡುತ್ತಿದ್ರು. ಯಾಕಂದ್ರೆ ನಮ್ಮ ಕನ್ನಡದ ನಟ ದರ್ಶನ್ ತೂಗುದೀಪ್ ಸಿನಿಮಾಗಳು ಆ ಮಟ್ಟಿಗೆ ಹವಾ ಕೂಡ ಇಟ್ಟಿದ್ದವು.

ನಟ ದರ್ಶನ್ ಅವರ ಸಿನಿಮಾದ ಎದುರು ಪರಭಾಷೆ ಸಿನಿಮಾ ರಿಲೀಸ್ ಮಾಡಲು ಪರಭಾಷಿಕರು ಅತ್ತ ಇತ್ತ ಯೋಚಿಸುವ ಸ್ಥಿತಿ ಇತ್ತು. ಹೀಗಿದ್ದಾಗಲೇ ನಡೆಯಬಾರದ ದುರಂತ ಒಂದು ಇದೀಗ ನಡೆದು ಹೋಗಿದೆ. ಆದರೂ ಮುಂದೆ ಅದೆಲ್ಲವೂ ಸರಿ ಹೋಗಲಿದ್ದು, ನಟ ದರ್ಶನ್ ಅವರು ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ ಎಂಬುದು ಅವರ ಅಭಿಮಾನಿಗಳ ಆಶಯ.

ಚಾರ್ಜ್ ಶೀಟ್ ಸಲ್ಲಿಕೆ ಯಾವಾಗ?

ಒಟ್ನಲ್ಲಿ ದರ್ಶನ್ ತೂಗುದೀಪ್ ಅವರು ಇನ್ನೂ ಜಾಮೀನು ಪಡೆಯಲು ಆಗುತ್ತಿಲ್ಲ. ಯಾಕೆ ಅಂದ್ರೆ ನಟ ದರ್ಶನ್ ತೂಗುದೀಪ್ ಅವರ ವಿರುದ್ಧ ಪೊಲೀಸರು ಇನ್ನೂ ಚಾರ್ಜ್ ಶೀಟ್‌ನ ಸಲ್ಲಿಕೆ ಮಾಡಿಲ್ಲ. ಹೀಗಾಗಿ ಚಾರ್ಜ್ ಶೀಟ್‌ನ ಸಲ್ಲಿಕೆ ಮಾಡುವವರೆಗೂ ಬೇಲ್ ಪಡೆಯೋಕೆ ಸಾಧ್ಯ ಇಲ್ಲ. ಹೀಗಾಗಿ ಪೊಲೀಸರು ರೇಣುಕಾಸ್ವಾಮಿ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಯಾವಾಗ ಮಾಡ್ತಾರೆ? ಆ ನಂತರ ನಟ ದರ್ಶನ್ ಅವರಿಗೆ ಬೇಲ್ ಯಾವಾಗ ಸಿಗಲಿದೆ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+