Darshan Workout: ದರ್ಶನ್ ವರ್ಕೌಟ್ ಮಾಡದೇ ಇದ್ದರೆ ಏನಾಗುತ್ತೆ? ಚಿಂತೆಯಲ್ಲಿ ನಿರ್ಮಾಪಕರು!

ಬೆಂಗಳೂರು ಜುಲೈ 26: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಈಗಾಗಲೇ ಜೈಲಿನಲ್ಲಿ ಇದ್ದಾರೆ. ದರ್ಶನ್ ಜೈಲಿಗೆ ಹೋದ ಬಳಿಕ ಕೆಲ ನಿರ್ಮಾಪಕರಲ್ಲಿ ಒಂದಿಷ್ಟು ಆತಂಕ ಶುರುವಾಗಿದೆ. ಅದರಲ್ಲೂ ಡೆವಿಲ್ ಡೈರೆಕ್ಟರ್‌ಗೆ ದರ್ಶನ್ ಜೈಲುವಾಸದ ಬಗ್ಗೆ ಟೆನ್ಶನ್ ಆರಂಭವಾಗಿದೆ.

ಯಾಕೆಂದರೆ ಈಗಾಗಲೇ ಡೆವಿಲ್ ಸಿನಿಮಾದ ಶೂಟಿಂಗ್ ಶುರುವಾಗಿದೆ. ಸಿನಿಮಾದ ಶೂಟಿಂಗ್ ದರ್ಶನ್ ಇಲ್ಲದೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಎರಡು ತಿಂಗಳಿಂದ ದರ್ಶನ್ ಅವರು ವರ್ಕೌಟ್ ಮಾಡ್ತಾಯಿಲ್ಲ. ಅಲ್ಲದೆ ಅವರಿಗೆ ಊಟ ಸರಿಯಾಗಿ ಸಿಗುತ್ತಿಲ್ಲ. ಅವರ ಫಿಟ್‌ನೆಸ್ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗೆ ದರ್ಶನ್ ತಿಂಗಳುಗಳ ಕಾಲ ವರ್ಕೌಟ್ ಬಿಟ್ಟರೆ ನಂತರ ಹಿಂದೆ ಇದ್ದ ದರ್ಶನ್ ಅವರನ್ನು ನಾವು ನೋಡ್ತೀವಾ ಅನ್ನೋ ಭಯ ನಿರ್ಮಾಪಕರಲ್ಲಿ ಶುರುವಾಗಿದೆ.

Darshan Thoogudeepa What happens if Darshan doesn t do work out Worried producers

ಹಾಗಾದರೆ ದರ್ಶನ್ ಊಟ, ನಿದ್ದೆ, ವರ್ಕೌಟ್ ಬಿಟ್ಟರೆ ಅವರ ಫಿನ್‌ನೆಸ್ ಹಾಳಾಗಿರುತ್ತಾ? ಈ ಬಗ್ಗೆ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಜಿಮ್ ರವಿ ಹೇಳೋದು ಏನು ಎಂದು ತಿಳಿಯೋಣ.

ಜೈಲಿನಲ್ಲಿ ದರ್ಶನ್ ವರ್ಕೌಟ್ ಬಿಟ್ಟರೆ ಏನಾಗುತ್ತದೆ ಎಂದು ಜಿಮ್ ರವಿ ವಿವರಿಸಿದ್ದಾರೆ. ಜಿಮ್ ರವಿ ಹೇಳುವ ಪ್ರಕಾರ, ''ಸಾಮಾನ್ಯವಾಗಿ ಯಾರು ನಿತ್ಯ ವ್ಯಾಯಾಮ ಮಾಡ್ತಾರೋ ಅವರಿಗೆ ಊಟ, ಸ್ನೇಹಿತರು, ಹಣ, ಕೆಲಸ ಇಲ್ಲದೇ ಇದ್ದರೆ ಇರುತ್ತಾರೆ, ಆದರೆ ವ್ಯಾಯಾಮ ಬಿಟ್ಟು ಇರುವುದಿಲ್ಲ. ಯಾವುದೇ ಸೌಲಭ್ಯ ಇಲ್ಲದೇ ಹೋದರೂ ವ್ಯಾಯಾಮ ಅನ್ನೋದು ವ್ಯಕ್ತಿಯನ್ನು ಸುಮ್ಮನಿರಲು ಬಿಡುವುದಿಲ್ಲ. ಅವರ ಒಳ ಮನಸ್ಸು ಅವರನ್ನು ವ್ಯಾಯಾಮ ಮಾಡಲು ಸೂಚಿಸುತ್ತದೆ. ಹೀಗಾಗಿ ದರ್ಶನ್ ಅವರು ಜೈಲಿನಲ್ಲಿ ವ್ಯಾಯಾಮ ಮಾಡುತ್ತಿರಬಹುದು'' ಎಂದು ಹೇಳಿದ್ದಾರೆ.

ವ್ಯಾಯಾಮಕ್ಕೆ ಅಡಿಟ್ ಆಗಿರುವ ದರ್ಶನ್

ದರ್ಶನ್ ಅವರು ವ್ಯಾಯಾಮವನ್ನು ಅಡಿಟ್ ಮಾಡಿಕೊಂಡಿದ್ದಾರೆ. ಅವರು ನಿದ್ದೆ, ಊಟ, ಶೂಟಿಂಗ್, ಹಣ, ಸ್ನೇಹಿತರು ಯಾರೇ ಇಲ್ಲ ಅಂದರೂ ತಡೆದುಕೊಳ್ಳುತ್ತಾರೆ. ಆದರೆ ಅವರು ವ್ಯಾಯಾಮ ಇಲ್ಲ ಅಂದರೆ ತಡೆದುಕೊಳ್ಳುವುದಿಲ್ಲ. ದರ್ಶನ್ ಅವರು ಸುಮಾರು 30 ವರ್ಷದಿಂದ ವ್ಯಾಯಾಮ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಅವರು ವರ್ಕೌಟ್ ಬಿಡುವುದಿಲ್ಲ. ಅದನ್ನು ಬಿಟ್ಟರೆ ಏನೋ ಕಳೆದುಕೊಂಡಂತೆ ಆಗುತ್ತದೆ. ಸಣ್ಣ ಸಮಸ್ಯೆ ಇದ್ದರೆ ದೊಡ್ಡದಾಗಿ ಕಾಣುತ್ತದೆ. ವರ್ಕೌಟ್ ಮಾಡಿ ಬಿಟ್ಟರೆ ಏನೋ ಚೈತನ್ಯ, ಹೊಸ ಉತ್ಸಾಹ ಮನುಷ್ಯನಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ದರ್ಶನ್ ವರ್ಕೌಟ್ ಅನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಜೈಲಿನಲ್ಲೂ ಅವರು ಅದನ್ನು ಮುಂದುವರೆಸಿರುತ್ತಾರೆ ಎಂದು ಜಿಮ್ ರವಿ ಅವರು ಹೇಳಿದರು.

Darshan Thoogudeepa What happens if Darshan doesn t do work out Worried producers

ವ್ಯಾಯಾಮ ಬಿಟ್ಟರೆ ಮಸಲ್ಸ್ ಶೇಪ್ ಕಡಿಮೆ

ಒಂದು ವೇಳೆ ಜಿಮ್ ಸಿಗದೇ ಇದ್ದರೂ ದರ್ಶನ್ ಅವರು ಬಾಡಿ ಅವರನ್ನು ವ್ಯಾಯಾಮ ಮಾಡಲು ಉತ್ತೇಜನ ಕೊಡುತ್ತದೆ. ಯಾಕೆಂದರೆ ಒಂದು ಬಾರಿ ವ್ಯಾಯಾಮಕ್ಕೆ ಒಬ್ಬ ವ್ಯಕ್ತಿ ಅಡಿಟ್ ಆದರೆ, ಕೆಟ್ಟದೆಲ್ಲ ಯೋಚನೆ ಬರುತ್ತದೆ. ದೊಡ್ಡ ಕಷ್ಟ ಇದ್ದರೆ ನಾಶವಾದಂತೆ ಬಾಸವಾಗುತ್ತದೆ. ಹೀಗಾಗಿ ದರ್ಶನ್ ಅವರು ಜೈಲಿನಲ್ಲಿ ವರ್ಕೌಟ್ ಮಾಡುತ್ತಾರೆನ್ನುವ ನಂಬಿಕೆ ಇದೆ. ಜಿಮ್ ಇಲ್ದೇ ಹೋದರೂ ಕಡೆ ಪಕ್ಷ ವಾಕಿಂಗ್, ಪುಶ್‌ಅಪ್, ಸಣ್ಣಪುಟ್ಟ ವ್ಯಾಯಾಮ ಮಾಡುತ್ತಿರುತ್ತಾರೆ ಎಂದು ರವಿ ಹೇಳಿದರು.

ವ್ಯಾಯಾಮ ಬಿಟ್ಟರೆ ಮಸಲ್ಸ್ ಶೇಪ್ ಕಡಿಮೆ ಆಗಬಹುದು. ಆದರೆ ದರ್ಶನ್ ತುಂಬಾ ವರ್ಷಗಳಿಂದ ವ್ಯಾಯಾಮ ಮಾಡಿಕೊಂಡು ಬಂದಿರುವುದರಿಂದ, ಅವರು ಆರು ತಿಂಗಳು ವ್ಯಾಯಾಮ ಮಾಡುವುದು ಬಿಟ್ಟರೆ ಏನೋ ಆಗಲ್ಲ. ಊಟ ಸರಿಯಾಗಿ ಆಗದೆ ತೂಕ ಕಡಿಮೆ ಆಗಬಹುದು ಅಷ್ಟೇ ಬಿಟ್ಟರೆ ಅವರ ದೇಹದಲ್ಲಿ ದೊಡ್ಡ ರೀತಿಯ ಬದಲಾವಣೆ ಕಂಡುಬರುವುದಿಲ್ಲ ಎಂದರು.

ಜೈಲಿನಲ್ಲಿ ಸಿಗುವ ಆಹಾರದಿಂದ ವ್ಯಾಯಾಮ ಮಾಡಲು ಶಕ್ತಿ ಬರುತ್ತಾ?

ಈ ಪ್ರಶ್ನೆಗೆ ಉತ್ತರ ನೀಡಿದ ಜಿಮ್ ರವಿ, ಜಿಮ್ ಹೋಗುವವರು ಮೊಟ್ಟೆ, ಮಾಂಸ ತಿನ್ನಲೇಬೇಕು ಎಂದೇನು ಇಲ್ಲ. ಊಟ ಸರಿಯಾಗಿ ಸಿಗದೇ ಇದ್ದರೆ ಅವರ ದೇಹದ ತೂಕ ಚೂರು ಕಡಿಮೆ ಆಗಬಹುದು. ಆದರೆ ಆರು ತಿಂಗಳು ವರ್ಕೌಟ್ ಮಾಡದೇ ಇದ್ದರೆ ಏನೂ ಕೂಡ ಆಗಲ್ಲ ಎಂದು ಅವರು ಹೇಳಿದರು.

Darshan Thoogudeepa What happens if Darshan doesn t do work out Worried producers

ಜಿಮ್ಮ ಇಲ್ಲದೆ ವ್ಯಾಯಾಮ ಮಾಡುವುದು ಹೇಗೆ?

ಜಿಮ್ ಅಂದರೆ ಕಬ್ಬಿಣ ಲಿಫ್ಟ್ ಮಾಡೋದು ಎಂದಲ್ಲ. ಯಂತ್ರೋಪಕರಣ ಇಲ್ಲದೆ ವ್ಯಾಯಾಮ ಮಾಡಬಹುದು. ದರ್ಶನ್ ಅವರು ಜೈಲಿನಲ್ಲಿ ವ್ಯಾಯಾಮ ಮಾಡ್ತಾಯಿರುತ್ತಾರೆ ಅನ್ನೋ ನಂಬಿಕೆ ನನಗೆ ಇದೆ. ಯಾಕೆಂದರೆ ವ್ಯಾಯಾಮ ಪ್ರತಿ ನಿತ್ಯ ಮಾಡೋರ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತು. ದರ್ಶನ್ ವ್ಯಾಯಾಮ ಬಿಟ್ಟರೂ ವ್ಯಾಯಾಮ ದರ್ಶನ್ ಅವರನ್ನು ಬಿಡಲ್ಲ. ಅವರ ಮನಸ್ಸು ವ್ಯಾಯಾಮ ಮಾಡಲು ಅವರನ್ನು ಉತ್ತೇಜಿಸುತ್ತದೆ. ಹೀಗಾಗಿ ದರ್ಶನ್ ಏನೇ ಬಿಟ್ಟರೂ ವ್ಯಾಯಾಮ ಮಾಡೋದು ಮಾತ್ರ ಬಿಡಲ್ಲ ಎಂದು ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಂಟರಗಾಳಿ ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಹೇಗಿದ್ದರು?

ಸುಂಟರಗಾಳಿ ಸಿನಿಮಾ ಶೂಟಿಂಗ್ ವೇಳೆ ಅವರೊಂದಿಗೆ ನಾನು ಕೆಲಸ ಮಾಡುತ್ತಿದ್ದೆ. ದರ್ಶನ್ ಅವರೊಂದಿಗೆ ಕೋಚ್ ಇರ್ತಾರೆ. ದರ್ಶನ್ ಕಾರಲ್ಲಿ ಡೆಂಬಲ್ಸ್ ಇಟ್ಟುಕೊಂಡಿರುತ್ತಾರೆ. ಬೆಳಿಗ್ಗೆ 5.30ಕ್ಕೆ ಎದ್ದು ವರ್ಕೌಟ್ ಮಾಡ್ತಾರೆ. ನಂತರ ಎಲ್ಲಾ ಕೆಲಸದ ಬಗ್ಗೆ ಗಮನ ಕೊಡುತ್ತಾರೆ. ವ್ಯಾಯಾಮ ಮೊದಲು ನಂತರ ಎಲ್ಲಾ ಕೆಲಸ ಮಾಡ್ತಾಯಿದ್ದರು. ವ್ಯಾಯಾಮವನ್ನು ದರ್ಶನ್ ತುಂಬಾ ಪ್ರೀತಿಸುತ್ತಾರೆ. ಹೀಗಾಗಿ ಅವರು ಅದನ್ನು ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.

ದರ್ಶನ್ ವರ್ಕೌಟ್ ಹೇಗೆ ಮಾಡ್ತಾರೆ?

ರಾಜ್ಯ, ರಾಷ್ಟ್ರ ಪ್ರಶಸ್ತಿ ಪಡೆಯುವ ಮಟ್ಟಕ್ಕೆ ದರ್ಶನ್ ಅವರು ವರ್ಕೌಟ್ ಮಾಡ್ತಾರೆ. ಮೂರು ಗಂಟೆಗೂ ಹೆಚ್ಚು ಕಾಲ ಒಂದು ವಿರಾಮವಿಲ್ಲದೆ ದರ್ಶನ್ ವರ್ಕೌಟ್ ಮಾಡ್ತಾರೆ. ಅವರು ಸ್ವಲ್ಪ ದಿನ ವ್ಯಾಯಾಮ ಬಿಟ್ಟರೆ ಅಂತಹ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ. ಆದರೆ ಅದನ್ನು ಅವರು ಬಿಡುವುದಿಲ್ಲ. ಯಾಕೆಂದರೆ ದರ್ಶನ್ ವ್ಯಾಯಾಮಕ್ಕೆ ಅಡಿಟ್ ಆಗಿದ್ದಾರೆ ಎಂದು ರವಿ ಹೇಳಿದರು.

ಜಿಮ್ ಬಿಟ್ಟರೆ ಏನಾಗುತ್ತೆ?

ಜಿಮ್ ಮಾಡದೇ ಇದ್ದರೆ ದರ್ಶನ್ ಬಾಡಿ ವೇಟ್ ಸ್ವಲ್ಪ ಕಡಿಮೆಯಾಗಬಹುದು. ಆದರೆ ಅವರು ಅಲ್ಲಿನ ಊಟಕ್ಕೆ ಅನುಗುಣವಾಗಿ ವ್ಯಾಯಾಮ ಮಾಡುತ್ತಿರಬಹುದು. ಜೈಲಿನ ಊಟ ಅವರಿಗೆ ನೀಡುವ ಶಕ್ತಿಯ ಆಧಾರದ ಮೇಲೆ ದರ್ಶನ್ ಅವರು ವ್ಯಾಯಾಮ ಮಾಡುತ್ತಿರಬಹುದು.

ದರ್ಶನ್ ನಂಬಿಕೊಂಡ ನಿರ್ಮಾಪಕರಿಗೆ ಕಾಡುತ್ತಿದೆ ಚಿಂತೆ!

ಹಲವಾರು ವರ್ಷಗಳಿಂದ ವ್ಯಾಯಾಮ ಮಾಡುವವರು ಯಾರೇ ಆಗಿದ್ದರೂ ವ್ಯಾಯಾಮ ಮಾಡುವುದನ್ನು ಏಕಾಏಕಿ ಬಿಟ್ಟರೆ, ಆರು ತಿಂಗಳ ಕಾಲ ಏನೂ ಎಫೆಕ್ಟ್ ಆಗಲ್ಲ. ಜಿಮ್ ಹೋಗುವವರು ಹೊಸಬರಾಗಿದ್ದರೆ ಆಗ ಸಮಸ್ಯೆಯಾಗುತ್ತದೆ. ಆದರೆ ದರ್ಶನ್ ತುಂಬಾ ವರ್ಷಗಳಿಂದ ವ್ಯಾಯಾಮ ಮಾಡಿಕೊಂಡು ಬಂದವರು. ದರ್ಶನ್ ಬಾಡಿ ಮೆಂಟೇನ್ ಆಗದೇ ಇರಬಹುದು. ಆದರೆ ದೊಡ್ಡ ವ್ಯತ್ಯಾಸವೇನು ಕಾಣುವುದಿಲ್ಲ ಎಂದಿದ್ದಾರೆ.

ವ್ಯಾಯಾಮ ಮಾಡುವವರು ಫುಡ್ ಏನು ತಗೋಬೇಕು?

ಜಿಮ್ ಗೆ ಹೋಗುವವರು ಮೊಟ್ಟೆ ತಿನ್ಬೇಕು ಅನ್ನೋದಿಲ್ಲ. ಮಟನ್ ಚಿಕನ್ ಇದ್ದರೆ ತಿಂತಾರೆ, ಇಲ್ಲಂದರೆ ಇಲ್ಲ. ಆದರೆ ದರ್ಶನ್ ಅವರೇ ಕೋಚ್ ಆಗಿದ್ದಾರೆ. ಅಲ್ಲಿ ಊಟ ಸಿಕ್ಕಂತೆ ಅವರು ವ್ಯಾಯಾಮ ಮಾಡ್ತಾರೆ. ಚಿಕನ್ ತಿಂದೇ ವ್ಯಾಯಾಮ ಮಾಡಬೇಕು ಅನ್ಣೊ ರೂಲ್ಸ್ ಎಲ್ಲೂ ಇಲ್ಲ. ಏನೂ ಇಲ್ದೆ ವ್ಯಾಯಾಮ ಮಾಡಬಹುದು. ಏನು ಊಟ ಸಿಗುತ್ತೆ ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡ್ತಾರೆ. ಬಾಡಿ ಮೆಂಟೆಂನ್ ಮಾಡ್ತಾರೆ. ವ್ಯಾಯಾಮ ಅಂದರೆ ಅವರಿಗೆ ಇಷ್ಟ ಎಂದು ಜಿಮ್ ರವಿ ಹೇಳಿದ್ದಾರೆ.

ಒಟ್ಟಿನಲ್ಲಿ ಜೈಲಿನಲ್ಲಿ ಇರುವ ದರ್ಶನ್‌ ವ್ಯಾಯಾಮ ಮಾಡ್ತಾರೋ ಇಲ್ವೋ ಯಾರಿಗೂ ಗೊತ್ತಿಲ್ಲ. ಆದರೆ ದರ್ಶನ್ ಅವರ ಬಾಡಿ ಬಗ್ಗೆ ನಿರ್ಮಾಪಕರಿಗೆ ಚಿಂತೆ ಕಾಡುತ್ತಿರುವುದು ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+