Darshan Thoogudeepa: ನನಗೆ ಸರ್ಜರಿ ಅಗತ್ಯವೇ ಇಲ್ಲವೆಂದ ಡಿ-ಬಾಸ್- ಕಳ್ಳಾಟವಾಡಿ ಹೊರಬಂದ್ರಾ ದರ್ಶನ್?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು ಬೆನ್ನುನೋವಿಗೆ ಸರ್ಜರಿ ಮಾಡಿಸಿಕೊಳ್ಳುವ ಕಾರಣ ನೀಡಿ ಮಧ್ಯಂತರ ಜಾಮೀನನ್ನು ಪಡೆದಿದ್ದಾರೆ. ಆದರೀಗ ತಾವು ಸರ್ಜರಿ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ದಾಸ ಹೇಳಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ಇದ್ದ ದರ್ಶನ್ ಅವರು ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ಪರೀಕ್ಷಿಸಿದ ವೈದ್ಯರು ಅವರಿಗೆ ಸರ್ಜರಿ ಮಾಡಲೇಬೇಕು ಇಲ್ಲವಾದಲ್ಲಿ ಅವರಿಗೆ ಲಕ್ವ ಹೊಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಕೋರ್ಟ್ ದರ್ಶನ್ ಅವರಿಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ಬಳ್ಳಾರಿ ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಅವರಿಗೆ ಫಿಸಿಯೋಥೆರಫಿ ನೀಡಲಾಗುತ್ತಿದ್ದು ಸರ್ಜರಿ ಮಾತ್ರ ಮಾಡಲಾಗಿಲ್ಲ.

darshan thoogudeepa says I don t need surgery - he is doing acting said people

ಈ ನಡುವೆ ಅವರು ಜಾಮೀನು ಪಡೆಯಲು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆದರೆ ಈವರೆಗೂ ಅವರ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಹೀಗಾಗಿ ದರ್ಶನ್ ಕಳ್ಳಾಟವಾಡುತ್ತಿದ್ದಾರಾ ಎನ್ನುವ ಅನುಮಾನ ಸೃಷ್ಟಿಯಾಗಿದೆ. ಹೌದು... ಕೋರ್ಟ್‌ ನೀಡಿರುವ ಆರು ವಾರಗಳಲ್ಲಿ ದರ್ಶನ್ ನಿಜವಾಗಿಯೂ ಸಮಸ್ಯೆಯನ್ನು ಅನುಭವಿಸುತ್ತಿದ್ದಿದ್ದೇ ಆಗಿದ್ದರೆ ಸರ್ಜರಿ ಮಾಡಿಸಿಕೊಳ್ಳಬೇಕಿತ್ತು. ವೈದ್ಯರು ಹೇಳಿದಂತೆ ಸರ್ಜರಿಗೆ ಒಳಗಾಗಬಹುದಿತ್ತು. ಆದರೆ ದರ್ಶನ್ ಈವರೆಗೂ ಸರ್ಜರಿ ಮಾಡಿಸಿಕೊಳ್ಳುವ ಬಗ್ಗೆ ಮಾತೇ ಆಡಿಲ್ಲ. ಬದಲಿಗೆ ತಮಗೆ ಸರ್ಜರಿ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಈಗ ಆರು ವಾರಗಳಲ್ಲಿ ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಅಷ್ಟೊರೊಳಗೆ ದಾಸನಿಗೆ ಜಾಮೀನು ಸಿಗದೇ ಇದ್ದಲ್ಲಿ ಸರ್ಜರಿ ಮಾಡಿಸಿಕೊಳ್ಳುವ ಚಿಂತನೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇದರಿಂದ ಒಂದಷ್ಟು ದಿನ ಜೈಲಿನಿಂದ ಹೊರಗಿರಬಹುದು ಎನ್ನುವ ಪ್ಲ್ಯಾನ್ ಇದಾಗಿದೆ ಎನ್ನುವ ಡೌಟ್ ಜನರಲ್ಲಿ ಹೆಚ್ಚಾಗಿದೆ.

darshan thoogudeepa says I don t need surgery - he is doing acting said people

ಹಾಗಿದ್ದರೆ ದರ್ಶನ್‌ಗೆ ನಿಜವಾಗಲೂ ಬೆನ್ನು ನೋವಿನ ಸಮಸ್ಯೆ ತೀವ್ರವಾಗಿತ್ತಾ? ಅವರು ಸರ್ಜರಿ ಮಾಡಿಸಿಕೊಳ್ಳಲೇಬೇಕಿತ್ತಾ? ಅಥವಾ ಜೈಲಿನಿಂದ ಹೊರಬರಲು ಸುಳ್ಳು ಕಥೆ ಸೃಷ್ಟಿ ಮಾಡಿದರಾ ಎನ್ನುವ ಅನುಮಾನ ಶುರುವಾಗಿದೆ. ನಿಜವಾಗಲೂ ದರ್ಶನ್ ಸರ್ಜರಿ ಮಾಡಿಸಿಕೊಳ್ಳಲೇಬೇಕಾಗಿತ್ತು ಅಂದರೆ ಇಷ್ಟೊತ್ತಿಗಾಗಲೇ ಮಾಡಿಸಿಕೊಳ್ಳಬೇಕಿತ್ತು. ಆದರೆ ದರ್ಶನ್ ಅವರು ಸರ್ಜರಿ ಮಾಡಿಸಿಕೊಂಡಿಲ್ಲ. ಸರ್ಜರಿ ನೆಪ ಹೇಳದೇ ಇದ್ದರೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಗುತ್ತಿರಲಿಲ್ಲ. ಹೀಗಾಗಿ ಇದೊಂದು ಕುಂಟು ನೆಪವೊಡ್ಡಿ ದರ್ಶನ್ ಜಾಮೀನು ಪಡೆದ್ರಾ ಎನ್ನುವ ಪ್ರಶ್ನೆ ಮೂಡಿದೆ.

ಒಂದು ವೇಳೆ ದರ್ಶನ್‌ ಸರ್ಜರಿ ಮಾಡಿಸಿಕೊಂಡು ಅವರಿಗೆ ಇನ್ನಷ್ಟು ದಿನ ವಿಶ್ರಾಂತಿ ಬೇಕಿದ್ದಲ್ಲಿ ಅದಕ್ಕಾಗಿ ಜಾಮೀನು ಅವಧಿ ವಿಸ್ತರಣೆ ಮಾಡಿಸಿಕೊಂಡಿದ್ದರೆ ಈ ಅನುಮಾನ ಹುಟ್ಟಿಕೊಳ್ತಾಯಿರಲಿಲ್ಲವೆನೋ. ಆದರೆ ದರ್ಶನ್ ಹಾಗೆ ಮಾಡಿಲ್ಲ. ಜೈಲಿನಿಂದ ಹೊರಬರುವಾಗ ಇದ್ದ ಬೆನ್ನುನೋವಿನ ತೀವ್ರತೆ ಈಗ ಎಲ್ಲಿಗೆ ಹೋಯ್ತು? ವೈದ್ಯರು ಸರ್ಜರಿ ಮಾಡಿಸಿಕೊಳ್ಳಲೇಬೇಕು ಎಂದು ಹೇಳಿದ್ದು ಏನಾಯ್ತು? ಇದನ್ನೆಲ್ಲಾ ನೋಡಿದರೆ ಡಿ-ಬಾಸ್ ಜೈಲಿನಿಂದ ಹೊರಬರಲು ಸಿನಿಮಾದಲ್ಲಿ ನಾಟಕವಾಡುವಂತೆ ನಾಟಕ ಆಡಿರಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಸರ್ಜರಿನಾ? ಜೈಲಾ? ಇದರಲ್ಲಿ ಒಂದಂತೂ ದರ್ಶನ್ ಅನುಭವಿಸಲೇ ಬೇಕು. ಸಮಯ ಕೆಟ್ಟರೆ ಸರ್ಜರಿ ಬಳಿಕ ಜೈಲಿಗೂ ಹೋಗಬಹುದು. ಅದೃಷ್ಟ ಚನ್ನಾಗಿ ಇದ್ದರೆ ಜಾಮೀನು ಕೂಡ ಸಿಗಬಹುದು. ಏನಾಗುತ್ತೆ ಅನ್ನೋದು ಮಾತ್ರ ಪ್ರಶ್ನೆಯಾಗೇ ಉಳಿದಿದೆ.

ಸರ್ಜರಿಗೆ ಪ್ಲ್ಯಾನ್ ಮಾಡಿದ ಡಿ-ಬಾಸ್

ದರ್ಶನ್ ಜೈಲಿಗೆ ಹೋಗಲು ಉಳಿದರೋದು ಇನ್ನೂ ಕೇವಲ 11 ದಿನ ಮಾತ್ರ. ಈವರೆಗೂ ಮಾಡಿಸಿಕೊಳ್ಳದ ಸರ್ಜರಿ ಬಗ್ಗೆ ದರ್ಶನ್ ಈಗ ಗಂಭೀರವಾಗಿ ಯೋಚನೆ ಮಾಡುತ್ತಿದ್ದಾರಂತೆ. ಯಾಕೆಂದರೆ ಅವರಿಗೆ ಜಾಮೀನು ಸಿಗುತ್ತಿಲ್ಲ. ಹೀಗಾಗಿ ಜೈಲಿಗೆ ಹೋಗುವುದು ಪಕ್ಕಾ ಆಗಿದೆ. ಜೈಲಿಗೆ ಹೋಗುವುದಕ್ಕಿಂತ ಸರ್ಜರಿ ಮಾಡಿಸಿಕೊಳ್ಳುವುದು ವಾಸಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರಂತೆ ದಾಸ. ಮಧ್ಯಂತರ ಜಾಮೀನು ಅವಧಿ ಮುಗಿಯುತ್ತಿರುವ ಈ ಸಮಯದಲ್ಲಿ ದರ್ಶನ್ ಸರ್ಜರಿ ಮಾಡಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಂದು ವೇಳೆ ಜಾಮೀನು ಸಿಗದೇ ಇದ್ದರೆ, ದರ್ಶನ್ ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಬಹುದು ಎನ್ನಲಾಗುತ್ತಿದೆ. ಈ ಮೂಲಕ ಒಂದಿಷ್ಟು ದಿನ ಜೈಲಿನಿಂದ ಹೊರಗಿರಬಹುದು ಎನ್ನುವ ಯೋಜನೆ ನಡೆಯುತ್ತಿದೆ.

ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್

ಇತ್ತೀಚೆಗೆ ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಪೋಟೋವೊಂದು ವೈರಲ್ ಆಗಿದೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಅವರನ್ನು ವಿಶೇಷ ಕೋಣೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಸಾಕಷ್ಟು ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದ್ದು ಆಪ್ತರನ್ನು ಹೊರತುಪಡಿಸಿ ಬೇರೆ ಯಾರಿಗೂ ಕೂಡ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ. ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್ ಆಗಿದ್ದು ಫ್ಯಾನ್ಸ್ ಅದಕ್ಕೆ ನಾನಾ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ದರ್ಶನ್‌ ಅವರಿಗೆ ಅಧಿಕ ರಕ್ತದೊತ್ತಡ ಇರುವ ಕಾರಣ ದರ್ಶನ್‌ಗೆ ಇನ್ನೂ ಸರ್ಜರಿ ಮಾಡಲಾಗಿಲ್ಲ. ಹೀಗಾಗಿ ದರ್ಶನ್ ಇನ್ನೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. ಈ ನಡುವೆ ಚಿಕಿತ್ಸೆ ಪಡೆಯುತ್ತಿರುವ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+