Darshan Thoogudeepa: ಸಸ್ಯಾಹಾರಿಗೆ ಮಾಂಸ ತಿನ್ನಿಸಿ ವಿಕೃತಿ ಮೆರೆದ ‘ಡಿ-ಬಾಸ್’ ದರ್ಶನ್ ತೂಗುದೀಪ್?

ದರ್ಶನ್ ತೂಗುದೀಪ್ ಮನುಷ್ಯನೇ ಅಲ್ಲ.. ಅದ್ರಲ್ಲೂ ದರ್ಶನ್ ಕುಡಿದು ನಿಂತುಬಿಟ್ಟ ಅಂದ್ರೆ ಎಲ್ಲರಿಗೂ ಅ.. & ಅ.. ಅಂತಾ ಮಾತನಾಡ್ತಾನೆ, ಕೆಟ್ಟದಾಗಿ ಬೈತಾನೆ ಅನ್ನೋದು ದರ್ಶನ್ ವಿರೋಧಿಗಳ ಆರೋಪ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ & ಅವನ ಕಿರಾತಕರ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದೆ ಎಂಬ ಆರೋಪ ಕೂಡ ಮಾಡಲಾಗುತ್ತಿದೆ. ಇದಿಷ್ಟು ಮಾತ್ರವಲ್ಲ ಸಸ್ಯಾಹಾರಿ ಆಗಿದ್ದ ರೇಣುಕಾಸ್ವಾಮಿಗೆ ಬಲವಂತ ಮಾಡಿ ಬಾಯಿಗೆ ಮಾಂಸ ತುರುಕಿ, ಸೈಕೋ ರೀತಿ ದರ್ಶನ್ ತೂಗುದೀಪ್ ಮಜಾ ತಗೊಂಡಿದ್ದ ಎಂಬ ಆರೋಪವನ್ನು ಇದೀಗ ಮಾಡಲಾಗುತ್ತಿದೆ!

ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈಗಾಗಲೇ, ಬಲವಾದ ಸಾಕ್ಷ್ಯಗಳು ಸಂಗ್ರಹ ಆಗಿವೆ. ಅಲ್ಲದೆ ಈ ಕುರಿತು ಪೊಲೀಸರು ಸಲ್ಲಿಕೆ ಮಾಡಿರುವ ಆರೋಪ ಪಟ್ಟಿ ಅಂದ್ರೆ ಚಾರ್ಜ್ ಶೀಟ್ ಹಲವು ಭಯಾನಕ ಸತ್ಯಗಳನ್ನು ಬಯಲು ಮಾಡಿದೆ. ಇದೇ ಸಮಯದಲ್ಲಿ ಮತ್ತೊಂದು ಭೀಕರ ಸುದ್ದಿ ಹೊರಬಿದ್ದಿದ್ದು, ಬೇಡ ಬೇಡ ಎಂದರೂ ಸಸ್ಯಾಹಾರಿ ವ್ಯಕ್ತಿಗೆ ಮಾಂಸ ತಿನ್ನಿಸಿದ್ದೂ ಅಲ್ಲದೆ ಅಮ್ಮ.. ಅಕ್ಕ.. ಹೆಸರು ಪ್ರಸ್ತಾಪ ಮಾಡಿ ಬಾಯಿಗೆ ಬಂದ ರೀತಿ ಬೈದಿರುವ ಆರೋಪ ಕೂಡ ಇದೀಗ ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿದೆ.

Darshan Thoogudeepa Said This Over Renukaswamy To Eat Food

ಸಸ್ಯಾಹಾರಿಗೆ ಮಾಂಸ ತಿನ್ನಿಸಿದ್ರಾ?

ಹೌದು, ನಟ ದರ್ಶನ್ ತೂಗುದೀಪ್ ಇಷ್ಟು ದಿನ ಕೋಟಿ ಕೋಟಿ ಕನ್ನಡಿಗರ ಪಾಲಿಗೆ ಹೀರೋ ಆಗಿದ್ದರು. ಆದರೆ ಈಗಿನ ಸ್ಥಿತಿ ನೋಡಿದರೆ ದರ್ಶನ್ ತೂಗುದೀಪ್ ಇದೀಗ ಕನ್ನಡಿಗರ ಪಾಲಿಗೆ ವಿಲನ್ ಆಗುತ್ತಿದ್ದಾರೆ. ಯಾಕಂದ್ರೆ ಒಂದು ಕಡೆ ದರ್ಶನ್ ತೂಗುದೀಪ್ ತಮ್ಮ ಅಭಿಮಾನಿಗಳ ಎದುರಲ್ಲಿ ತಲೆ ತಗ್ಗಿಸಿ ಕೊಲೆ ಕೇಸ್‌ನಲ್ಲಿ ಜೈಲು ಸೇರುವಂತೆ ಆಗಿದೆ. ಮತ್ತೊಂದು ಕಡೆ ಈ ನಟ ಇದೀಗ ಸಸ್ಯಾಹಾರಿ ವ್ಯಕ್ತಿಗೆ ಬಲವಂತ ಮಾಡಿ ಮಾಂಸ ತಿನ್ನಿಸಿದ ಆರೋಪವನ್ನ ಈಗ ಎದುರಿಸುತ್ತಿದ್ದಾರೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಅಪಹರಣ ಮಾಡಿಕೊಂಡು ಬಂದು ಪಟ್ಟಣಗೆರೆ ಶೆಡ್ ಒಳಗೆ ಹಲ್ಲೆ ಮಾಡುವ ಸಮಯದಲ್ಲಿ, ಸಸ್ಯಾಹಾರಿ ಆಗಿದ್ದ ರೇಣುಕಾಸ್ವಾಮಿ ಬಾಯಿಗೆ ಬಲವಂತವಾಗಿ ಚಿಕನ್ ಬಿರಿಯಾನಿ ಇಟ್ಟು ತಿನ್ನಿಸಿದ್ದ ದರ್ಶನ್ ತೂಗುದೀಪ್ ಎಂಬ ಆರೋಪ ಮಾಡಲಾಗಿದೆ.

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು.

ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಈಗ, ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ನಟ ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೂ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಜೈಲು ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತೆಲ್ಲಾ ಪೋಸ್ಟ್ ಹಾಕುತ್ತಿದ್ದಾರೆ. ಇದೇ ಮುಂದೆ ದರ್ಶನ್ ತೂಗುದೀಪ್‌ಗೆ ಕಂಟಕ ತರಬಹುದು ಎಂಬ ಕುರಿತು ಇದೀಗ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+