ಸುದೀಪ್ ತಾಯಿ ಸಾವಿನ ಸುದ್ದಿ ಕೇಳಿ ಮನನೊಂದು ಮರುಗಿದ ದರ್ಶನ್ ತೂಗುದೀಪ್
ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳೆಯ & ಒಂದು ಕಾಲದ ದೋಸ್ತಿ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡು ನೋವಿನಲ್ಲಿ ಇದ್ದಾರೆ. ಮತ್ತೊಂದ್ಕಡೆ ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿರುವ ಕಾರಣಕ್ಕೆ ಒದ್ದಾಡುತ್ತಿದ್ದಾರೆ. ಕೋಟಿ ಕೋಟಿ ಅಭಿಮಾನಿಗಳು, ಕಿಚ್ಚ ಸುದೀಪ್ & ದರ್ಶನ್ ತೂಗುದೀಪ್ ಒಂದಾಗಬೇಕು ಅಂತಾ ಕಾಯುತ್ತಿದ್ದಾರೆ. ಹೀಗಿದ್ದಾಗಲೇ ಕಿಚ್ಚ ಸುದೀಪ್ ತಾಯಿ ಬಗ್ಗೆ ದರ್ಶನ್ ತೂಗುದೀಪ್...
ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಸ್ನೇಹ ತುಂಬಾ ಚನ್ನಾಗಿ ಇತ್ತು. ಅದರಲ್ಲೂ ಈ ಇಬ್ಬರ ಸ್ನೇಹ ಕಂಡು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅದೆಷ್ಟು ಜನ ಹೊಟ್ಟೆಕಿಚ್ಚು ಪಟ್ಟು ಮಾತನಾಡಿದ್ದರೋ ಗೊತ್ತಿಲ್ಲ. ಅಷ್ಟರ ಮಟ್ಟಿಗೆ, ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ನಡುವೆ ಪ್ರೀತಿ & ಸ್ನೇಹ ಇತ್ತು. ಎಲ್ಲಿಗೆ ಹೋದರೂ ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಒಟ್ಟಿಗೆ ಹೋಗುತ್ತಿದ್ದರು.

ಹಾಗೇ ದರ್ಶನ್ ತೂಗುದೀಪ್ ಮತ್ತು ಕಿಚ್ಚ ಸುದೀಪ್ ಪರಸ್ಪರ ಸಿನಿಮಾ ಕೂಡ ಮಾಡಬೇಕು, ಹಿಂದಿ ಸಿನಿಮಾ ಶೋಲೆ ರೀಮೇಕ್ ಮಾಡಬೇಕು ಎಂಬ ಮಾತುಗಳು, ಚರ್ಚೆಗಳು ನಡೆದಿದ್ದವು. ಹೀಗಿದ್ದಾಗಲೇ, ಇಬ್ಬರೂ ದೂರವಾಗಿ ಬಿಟ್ಟರು. ಆದರೆ ಈಗ ಕಿಚ್ಚ ಸುದೀಪ್ ಅವರ ತಾಯಿ ನಿಧನರಾಗಿರುವ ಬಗ್ಗೆ, ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ತೂಗುದೀಪ್ ಅವರು ಈ ಮಹತ್ವದ ಮಾತು ಹೇಳಿದ್ದಾರೆ.
ಕಿಚ್ಚ ಸುದೀಪ್ ತಾಯಿ ಬಗ್ಗೆ...
ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಒಟ್ಟಿಗೆ ಇದ್ದಾಗ, ಇಬ್ಬರ ನಡುವೆ ಸ್ನೇಹ ಇದ್ದಾಗ ಒಬ್ಬರ ಮನೆಗೆ ಮತ್ತೊಬ್ಬರು ಹೋಗುತ್ತಿದ್ದರು. ಆಗ ಕಿಚ್ಚ ಸುದೀಪ್ ಅವರ ತಾಯಿ ಮಾಡಿದ್ದ ಅಡುಗೆ ದರ್ಶನ್ ತೂಗುದೀಪ್ ಅವರಿಗೆ ಇಷ್ಟವಾಗುತ್ತಿತ್ತು. ಕರಾವಳಿ ಮೂಲದ ನಂಟು ಇರುವ ಕಿಚ್ಚ ಸುದೀಪ್ ಅವರ ಮನೆಯ ಅಡುಗೆ ಅಂದ್ರೆ ಎಲ್ಲರೂ ಅಮೃತಕ್ಕೆ ಸಮಾನವಾಗಿ ನೋಡ್ತಾರೆ. ಅದರಲ್ಲೂ ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಮನೆಗೆ ಬರುವ ಅತಿಥಿಗಳಿಗೆ ಅಡುಗೆಯನ್ನ ಮಾಡಿ ಬಡಿಸುತ್ತಾರೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರು ಕೂಡ ಕಿಚ್ಚ ಸುದೀಪ್ ಅವರ ಮನೆಯಲ್ಲಿ ಊಟ ಕೂಡ ಮಾಡಿದ್ದರು.
ಕಿಚ್ಚ ಸುದೀಪ್ ಅವರ ತಾಯಿಯನ್ನ ದರ್ಶನ್ ಅವರು ಕೂಡ ಅಮ್ಮಾ ಅಂತಾ ಕರೆಯುತ್ತಿದ್ದರು. ಹೀಗೆ ದರ್ಶನ್ ತೂಗುದೀಪ್ ಅವರಿಗೂ ಸುದೀಪ್ ಅವರ ತಾಯಿ ಅಮ್ಮನ ಸಮಾನ. ಆದರೆ ದಿಢೀರ್ ಕಿಚ್ಚ ಸುದೀಪ್ ಅವರ ತಾಯಿ ನಿಧನರಾದ ಸುದ್ದಿ ಕೇಳಿ ದರ್ಶನ್ ತೂಗುದೀಪ್ ಈಗ ಮರುಗಿದ್ದಾರೆ. ಅಲ್ಲದೆ ಬಳ್ಳಾರಿ ಜೈಲಿನಲ್ಲಿ ಈ ಬಗ್ಗೆ ನೋವು ತೋಡಿಕೊಂಡು, ಕಣ್ಣೀರನ್ನ ಕೂಡ ಹಾಕಿದ್ದಾರಂತೆ ದರ್ಶನ್ ತೂಗುದೀಪ್.












Click it and Unblock the Notifications