ದಿಢೀರ್ ಸಿಎಂ ಆದ ದರ್ಶನ್: ನಿಜವಾಯ್ತು ಜ್ಯೋತಿಷಿ ನುಡಿದ ಭವಿಷ್ಯ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ ಹೊರಬಂದ ನಟ ದರ್ಶನ್ ದಿಢೀರ್ ಸಿಎಂ ಆಗಿದ್ದಾರೆ. ಡೆವಿಲ್ ಅಡ್ಡಾದಲ್ಲಿ ಇರುವ ದಾಸನ ಕಟೌಟ್ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿದ್ದ ದರ್ಶನ್ ಜೈಲಿನಿಂದ ಹೊರ ಬಂದಿದ್ದೇ ಬಂದಿದ್ದು ದಾಸನ ಹೊಸ ಅವತಾರ ಶುರುವಾದಂತೆ ಕಾಣಿಸುತ್ತಿದೆ. ಸೊರಗಿದ್ದ ಮುಖದಲ್ಲಿ ಹಳೆಯ ಹೊಳಪು ಬಂದಿದೆ. ಅಷ್ಟೇ ಅಲ್ಲ ಹಿಂದೊಮ್ಮೆ ಜ್ಯೋತಿಷಿಗಳು ದರ್ಶನ್ ಬಗ್ಗೆ ಹೇಳಿದ ಭವಿಷ್ಯ ನಿಜವಾಗುತ್ತಿರುವ ಅನುಮಾನ ಸೃಷ್ಟಿಯಾಗಿದೆ.
ಹೌದು ಚಾಲೆಂಜಿಂಗ್ ಸ್ಟಾರ್ ಅನ್ನೋ ಪಟ್ಟಕ್ಕೆ ತಕ್ಕಂತೆ ಸಖತ್ ಶೈನಿಂಗ್ ಆಗಿದ್ದಾರೆ ದಾಸ. ತಾನಾಯ್ತು ತನ್ನ ಕೆಲಸ ಆಯ್ತು ಅಂತಿರೋ ದರ್ಶನ್ ಮುಖ್ಯಮಂತ್ರಿ ಅವತಾರ ತಾಳಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಅಬ್ಬರಿಸುವುದಕ್ಕೆ ಸಖತ್ ಪೋಸ್ ಕೊಟ್ಟಿದ್ದಾರೆ.

ಜೈಲಿನಿಂದ ಹೊರ ಬಂದ ಮೇಲೆ ಒಂಟಿಯಾಗಿದ್ದ ದರ್ಶನ್ ಈಗ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಸಖತ್ ಬ್ಯೂಸಿ ಆಗಿದ್ದಾರೆ. ಮೊನ್ನೆಯಷ್ಟೇ ರಾಜಸ್ಥಾನದಲ್ಲಿ ಡೆವಿಲ್ ಶೂಟಿಂಗ್ ಮುಗಿಸಿಕೊಂಡು ಬಂದ ತಂಡ ಸದ್ಯಕ್ಕೆ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ. ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್ ಅನ್ನು ರಾಜಧಾನಿ ಬೆಂಗಳೂರಿನಲ್ಲೇ ಶೂಟ್ ಮಾಡಲಾಗುತ್ತಿದೆ. ಇದೇ ಹೊತ್ತಲ್ಲಿ ಈಗ ಡೆವಿಲ್ ಸಿನಿಮಾದ ಹೊಸ ಫೋಟೋ ರಿವೀಲ್ ಆಗಿದೆ.
ಫೋಟೋದಲ್ಲಿ ದರ್ಶನ್ ಹಿಂದೆಂದು ಕಾಣದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ದಾಸ ಅಖಾಡಕ್ಕೆ ಇಳಿದಿದ್ದಾರೆ. ಲೀಕ್ ಆಗಿರುವ ಫೋಟೋದಲ್ಲಿ ದರ್ಶನ್ ಸಿಎಂ ಆಗಿ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ಸ್ಪಾಟ್‌ನಲ್ಲಿ 'ಕರುನಾಡ ಪ್ರಜಾ ಪಕ್ಷ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಧನುಷ್ ರಾಜಶೇಖರ್' ಎಂದು ಕಟೌಟ್ ಹಾಕಿಸಿದ್ದಾರೆ. ಈ ಕಟೌಟ್‌ನಲ್ಲಿ ದರ್ಶನ್ ಕೂ ಮುಗಿದು ನಿಂತಿರುವ ದೃಶ್ಯ ಕಂಡು ಬಂದಿದೆ.
ಮಖ್ಯಮಂತ್ರಿ ಪಟ್ಟದ ಜೊತೆಗೆ ದರ್ಶನ್ ಕೈ ಮುಗಿದು ಪೋಸ್ ಕೊಟ್ಟಿದ್ದು ಸಖತ್ ವೈರಲ್ ಆಗುತ್ತಿದೆ. ಅಲ್ಲಿಗೆ ಡೆವಿಲ್ ಸಿನಿಮಾದಲ್ಲಿ ಸಖತ್ ಇಂಟ್ರಸ್ಟಿಂಗ್ ಫ್ಯಾಕ್ಟ್‌ಗಳು ಇವೆ ಅನ್ನೋದು ಪಕ್ಕಾ ಆಗಿದೆ. ಇಷ್ಟು ದಿನ ಡೆವಿಲ್ ಅಂದರೆ ಪಾತಕ ಲೋಕದ ರಕ್ತ ಚರಿತ್ರೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೀಗ ದರ್ಶನ್ ಸಿಎಂ ಗೆಟಪ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಡೆವಿಲ್ ಸಿನಿಮಾ ಬಗ್ಗೆ ಮತ್ತಷ್ಟು ಕೂತೂಹಲ ಹೆಚ್ಚಿಸಿದೆ.

ನಿಜವಾಯ್ತು ಜ್ಯೋತಿಷಿ ನುಡಿದ ಭವಿಷ್ಯ
ದರ್ಶನ್ ಜೈಲಿನಲ್ಲಿ ಇದ್ದಾಗ ಹತ್ತಾರು ಸುದ್ದಿಗಳು ಹರಿದಾಡಿದ್ದವು. ಜೈಲಿನಿಂದ ದರ್ಶನ್ ಹೊರಬರುತ್ತಿದ್ದಂತೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ, ಆ ಪಕ್ಷಕ್ಕೆ ಸೇರಿಕೊಳ್ತಾರೆ ಈ ಪಕ್ಷಕ್ಕೆ ಸೇರಿಕೊಳ್ತಾರೆ ಅಂತಾನೇ ಸುದ್ದಿ ಆಗಿದ್ವು. ಅಷ್ಟೇ ಅಲ್ಲ ಮೈಸೂರಿನ ಅರ್ಜುನ್ ಗುರೂಜಿ ಕೂಡ ದರ್ಶನ್‌ರ ರಾಜಕೀಯ ಭವಿಷ್ಯ ನುಡಿದಿದ್ದರು. ದರ್ಶನ್‌ಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಇದೆ ಎಂದು ಹೇಳಿದ್ದರು.
ಇದೀಗ ದರ್ಶನ್ ಅವರು ಪೋಸ್ಟ್ ಡೆವಿಲ್ ಸಿನಿಮಾದಲ್ಲಿ ಸಿಎಂ ಅವತಾರ ತಾಳಿದ್ದಾರೆ. ಹೀಗಾಗಿ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ಇದು ಮುನ್ಸೂಚನೆನಾ ಅಂತನೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದರಿಂದ ಕಾಟೇರಾ ಸಿನಿಮಾವೇ ಕೊನೆಯಾಗಿತ್ತು. ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಇದೀಗ ದರ್ಶನ್ ಅವರ ಡೆವಿಲ್ ಸಿನಿಮಾ ಕಟೌಟ್ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಕುತೂಹಲವನ್ನು ಮೂಡಿಸಿದೆ.












Click it and Unblock the Notifications