Darshan Thoogudeepa: ರೇಣುಕಾಸ್ವಾಮಿ ಕೊಲೆ ಆರೋಪದ ನಂತರ ದರ್ಶನ್ ತೂಗುದೀಪ್ ದೇಶ ಬಿಟ್ಟು ಹೋಗಲು..

ದರ್ಶನ್ ತೂಗುದೀಪ್ ಇದೀಗ ಜೈಲು ಸೇರಿ ಪರದಾಡುವಂತೆ ಆಗಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿಗೆ, ಟಾರ್ಚರ್ ನೀಡಿದ ಫೋಟೋಸ್ ಕೂಡ ಈಗ ಫುಲ್ ವೈರಲ್ ಆಗುತ್ತಿವೆ. ಪರಿಸ್ಥಿತಿ ಹೀಗಿದ್ದಾಗಲೇ ಮತ್ತೊಂದು ಆಘಾತ ನೀಡುವ ಸುದ್ದಿಯು ದರ್ಶನ್ ತೂಗುದೀಪ್ ಅಭಿಮಾನಿಗಳಿಗೆ ಸಿಕ್ಕಿದೆ. ಹಾಗಾದ್ರೆ ಏನಾಗುತ್ತಿದೆ ದರ್ಶನ್‌ರ ಬಾಳಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪದ ನಂತರ ದರ್ಶನ್ ತೂಗುದೀಪ್ ದೇಶ ಬಿಟ್ಟು ಹೋಗಲು..

ದರ್ಶನ್ ತೂಗುದೀಪ್ ಅವರ ಹೆಸರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಇಡೀ ಇಂಡಿಯಾದಲ್ಲಿ ಫೇಮಸ್ ಆಗಿದೆ. ಯಾಕಂದ್ರೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿ, ಪರಭಾಷೆ ಪ್ರೇಕ್ಷಕರನ್ನೂ ಗಳಿಸಿದ ಕೀರ್ತಿ ದರ್ಶನ್ ಅವರಿಗೆ ಸಲ್ಲುತ್ತದೆ. ಕಳೆದ 25 ವರ್ಷಗಳಿಂದ ಕೂಡ ದರ್ಶನ್ ತೂಗುದೀಪ್ ಅವರು ಒಂದು ದೊಡ್ಡ ಬ್ರಾಂಡ್ ಆಗಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಮಾತು. ಹೀಗಿದ್ದಾಗ ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಎಂಬಾತನ ಕೊಲೆ ಮಾಡಿದೆ ಎಂಬ ಭಾರಿ ಗಂಭೀರ ಆರೋಪ ಕೇಳಿಬಂದಿದೆ. ಸ್ಥಿತಿ ಹೀಗಿದ್ದಾಗಲೆ ರೇಣುಕಾಸ್ವಾಮಿ ಕೊಲೆ ಆರೋಪ ಬಳಿಕ ದರ್ಶನ್ ತೂಗುದೀಪ್ ದೇಶ ಬಿಟ್ಟು ಹೋಗಲು... ಬನ್ನಿ ಮುಂದೆ ತಿಳಿಯೋಣ.

Darshan Thoogudeepa Now Not Able To Go Foreign After Renukaswamy Incident

ದರ್ಶನ್ ತೂಗುದೀಪ್ ದೇಶ ಬಿಟ್ಟು...

ನಿಮಗೆಲ್ಲಾ ಗೊತ್ತಿರುವಂತೆ ನಟ ದರ್ಶನ್ ತೂಗುದೀಪ್ ಅವರ ಪ್ರತಿ ಸಿನಿಮಾದಲ್ಲೂ ಒಂದಲ್ಲ ಒಂದು ಸೀನ್ ಫಾರಿನ್ ಅಂದ್ರೆ ವಿದೇಶದಲ್ಲಿ ಶೂಟಿಂಗ್ ಆಗಿರುತ್ತಿತ್ತು. ಹೀಗಿದ್ದಾಗ ದರ್ಶನ್ ತೂಗುದೀಪ್ ಅವರು ಇದೀಗ ಕೊಲೆ ಆರೋಪಿ ಆಗಿ ಜೈಲು ಸೇರಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ದರ್ಶನ್ ತೂಗುದೀಪ್ ಅವರು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದರು ಕೂಡ, ವಿದೇಶಕ್ಕೆ ಹೋಗಲು ಆಗಲ್ಲ. ಹಾಗಾದ್ರೆ ದರ್ಶನ್ ತೂಗುದೀಪ್ ಅವರ ಫಾರಿನ್ ಶೂಟಿಂಗ್ ಕಥೆ ಏನು?

ಸೆಟ್ ಹಾಕಿ ಶೂಟ್ ಮಾಡಬೇಕು!

ಕೊಲೆ ಆರೋಪಿಗಳಿಗೆ ಅಥವಾ ಕೊಲೆ ಆರೋಪ ಹೊತ್ತ ಯಾವುದೇ ವ್ಯಕ್ತಿಗೆ ದೇಶವನ್ನ ಬಿಟ್ಟು ಹೋಗಲು ಅವಕಾಶ ನೀಡುವುದಿಲ್ಲ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ ಎಂಬ ಹಿನ್ನೆಲೆ ಅವಕಾಶ ಸಿಗುವುದಿಲ್ಲ. ಹೀಗಾಗಿ ನಟ ದರ್ಶನ್ ಅವರು ಜಾಮೀನು ಅಂದ್ರೆ ಬೇಲ್ ಪಡೆದು ಇದೀಗ ಹೊರಗೆ ಬಂದರು ಕೂಡ ವಿದೇಶಕ್ಕೆ ಹೋಗಿ ಶೂಟಿಂಗ್ ಮಾಡಲು ಸಾಧ್ಯವೇ ಇಲ್ಲ ಎನ್ನಬಹುದು. ಆದರೆ ವಿದೇಶದ ವಾತಾವರಣ ಸೃಷ್ಟಿ ಮಾಡಲೇಬೇಕು ಎಂಬ ಅನಿವಾರ್ಯ ಸ್ಥಿತಿ ದರ್ಶನ್ ಅವರ ಸಿನಿಮಾಗಳಿಗೆ ಇದ್ದರೆ, ಆಗ ಸೆಟ್ ಹಾಕಿ ವಿದೇಶದ ರೀತಿಯಲ್ಲೇ ಶೂಟ್ ಮಾಡಬೇಕಿದೆ ಅಷ್ಟೇ!

'ಡೆವಿಲ್' ಸಿನಿಮಾ ನಿಂತೇ ಹೋಯ್ತಾ?

ದರ್ಶನ್ ತೂಗುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ 'ಡೆವಿಲ್' ಆಗಿದ್ದು, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ 'ಡೆವಿಲ್' ಸಿನಿಮಾ ಮಾಡಲಾಗುತ್ತಿದೆ. ಹೀಗೆ ದರ್ಶನ್ ತೂಗುದೀಪ್ ಅವರು ಕೂಡ ಡೆವಿಲ್ ಸಿನಿಮಾ 2024ರ ಡಿಸೆಂಬರ್ ಒಳಗಾಗಿ, ರಿಲೀಸ್ ಮಾಡಲು ಸಿದ್ಧತೆಯನ್ನ ನಡೆಸಿದ್ದರು ಎನ್ನಲಾಗಿತ್ತು. ಈ ಸಮಯದಲ್ಲೇ ರೇಣುಕಾ ಸ್ವಾಮಿ ಕೊಲೆ ಮಾಡಿರುವ ಆರೊಪದ ಮೇಲೆ ದರ್ಶನ್ ತೂಗುದೀಪ್ & ಗ್ಯಾಂಗ್ ಅರೆಸ್ಟ್ ಕೂಡ ಆಗಿದೆ.

'ಡೆವಿಲ್' ಸಿನಿಮಾ ಶೂಟಿಂಗ್ ನಿಂತು ಹೋಗಿದ್ದು, ಸಿನಿಮಾ ರಿಲೀಸ್ ಆಗುವುದೇ ಇಲ್ಲ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ 'ಡೆವಿಲ್' ಸಿನಿಮಾ ನಿರ್ಮಾಪಕರು ಮಾತ್ರ ಎಷ್ಟೇ ವರ್ಷ ಕಳೆದರೂ ಈ ಸಿನಿಮಾ ಹಾಗೇ ಇರುತ್ತದೆ ಎಂದಿದ್ದಾರೆ. ಹೀಗಾಗಿ ನಮ್ಮ ಬಾಸ್ ಹೊರಗೆ ಬರಲಿ ತೋರಿಸುತ್ತೀವಿ ಅಂತಾ ಈ ಸಮಯದಲ್ಲಿ ದರ್ಶನ್ ಅವರ ಅಭಿಮಾನಿಗಳು ಕಮೆಂಟ್ ಹಾಕಿ ವಿರೋಧಿಗಳಿಗೆ ಚಾಲೆಂಜ್ ಹಾಕುತ್ತಿದ್ದಾರೆ. ಹೀಗಾಗಿ ಕನ್ನಡ ಸಿನಿಮಾ ರಂಗದಲ್ಲೇ ಸಂಚಲನ ಇದೀಗ ಸೃಷ್ಟಿಯಾಗಿದೆ.

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+