Darshan Thoogudeepa: ದರ್ಶನ್‌ ಕೈಯಲ್ಲೀಗ ಇಷ್ಟೊಂದು ಸಿನಿಮಾ: ಯಾವುದಕ್ಕೆ ಮೊದಲ ಆದ್ಯತೆ?

ಮನುಷ್ಯ ಕೆಳಗೆ ಬೀಳುತ್ತಿದ್ದಂತೆ ಕೆಲವರು ಅವರ ಭವಿಷ್ಯ ಮುಗಿತು ಅಂತಲೇ ಭಾವಿಸಿಬಿಡುತ್ತಾರೆ. ಇದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಹೊರತಾಗಿಲ್ಲ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರುತ್ತಿದ್ದ ಹಾಗೆ ಡಿ-ಬಾಸ್ ಹವಾಗೆ ಬ್ರೇಕ್ ಬಿತ್ತು. ಯಾರು ಬಂದರೂ ಕೂಡ ದರ್ಶನ್‌ ಅನ್ನು ಕಾಪಾಡಲು ಆಗಲ್ಲ, ಈ ಇಂಡಸ್ಟ್ರಿಯಲ್ಲಿ ದಾಸ ತಲೆ ಎತ್ತೋದು ಕಷ್ಟ, ತುಂಬಾ ಮೆರೆದು ಬಿಟ್ರು ಅದಕ್ಕೆ ಭಗವಂತ ಆಕಾಶಕ್ಕೆ ಕರೆದುಕೊಂಡು ಹೋಗಿ ರಪ್ ಅಂತ ಕೆಳಗೆ ಎಸೆದುಬಿಟ್ಟ ಅಂತೆಲ್ಲಾ ಕೆಲವರು ಮತನಾಡಿದರೂ. ಆದರೀಗ ದರ್ಶನ್ ಕೈಯಲ್ಲಿ ಇರೋ ಸಿನಿಮಾಗಳ ಪಟ್ಟಿ ಕೇಳಿದರೆ ನೀವೆಲ್ಲಾ ಅಚ್ಚರಿಯಾಗೋದು ಗ್ಯಾರಂಟಿ.

ಹೌದು.. ತಮ್ಮನ್ನು ಆಡಿಕೊಂಡವರ ಮುಂದೆಯೇ ದರ್ಶನ್ ಮತ್ತೆ ಸೆಟೆದು ನಿಂತಿದ್ದಾರೆ. ಹೊಸ ಚರಿತ್ರೆ ಸೃಷ್ಟಿಸೋಕೆ ತಮಗೆ ತಾವೇ ಚಾಲೆಂಜ್ ಹಾಕಿಕೊಂಡಿದ್ದಾರೆ. ಮತ್ತೆ ಸುಂಟರಗಾಳಿಯಂತೆ ನುಗ್ಗಿ ಬರೋದಕ್ಕೆ ರೆಡಿಯಾಗುತ್ತಿದ್ದಾರೆ. ದರ್ಶನ್ ಈ ಬಾರಿ ತಮ್ಮ 48ನೇ ಹುಟ್ಟುಹಬ್ಬವನ್ನು ತುಂಬಾ ಸೈಲೆಂಟ್ ಆಗಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳ ಮುಂದೆ ಕಾಣಿಸಿಕೊಂಡು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ರು ದಾಸ. ಆದರೂ ಅಭಿಮಾನಿಗಳು ಮಾತ್ರ ತಾವಿದ್ದ ಕಡೆಗಳಲ್ಲೇ ದರ್ಶನ್‌ಗೆ ಒಳ್ಳೆಯದಾಗಲಿ ಅಂತ ದೇವಸ್ಥಾನಗಳಲ್ಲಿ ಪೂಜಿ ಮಾಡಿಸಿ, ಕೆಲ ಕಡೆ ಬ್ಯಾನರ್‌ಗಳನ್ನು ಕಟ್ಟಿ, ತಮ್ಮದೇ ರೀತಿಯಲ್ಲಿ ದರ್ಶನ್ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

darshan thoogudeepa now has eight films in his hands which film will be released first

ಅಭಿಮಾನಿಗಳಿಗೆ ಖುಷಿ ಕೊಟ್ಟ ದಾಸ

ಇನ್ನೂ ದರ್ಶನ್ ಕೂಡ ತಮಗಾಗಿ ಕಾದು ಕುಳಿತ ಅಭಿಮಾನಿಗಳಿಗಾಗಿಯೇ ಡೆವಿಲ್ ಸಿನಿಮಾ ಟೀಸರ್ ಬಿಟ್ಟಿದ್ದಾರೆ. ಈ ಟೀಸರ್ ನೋಡಿದ ಪ್ರತಿಯೊಬ್ಬ ಅಭಿಮಾನಿಗಳು ದರ್ಶನ್ ಮಾಸ್ ಲುಕ್‌ಗೆ ಫಿದಾ ಆಗಿದ್ದಾರೆ. ಈ ಟೀಸರ್‌ನಲ್ಲಿ ದರ್ಶನ್ ತಮ್ಮ ದಶಾವತರವನ್ನು ತೋರಿಸಿದ್ದಾರೆ.

ದರ್ಶನ್ ಜೈಲಿಗೆ ಹೋಗಿ ಬಂದ ಬಳಿಕ ಬಹಳಷ್ಟು ಮಂದಿ ದರ್ಶನ್ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟೇ ಅಲ್ಲ ದರ್ಶನ್ ಇಂಡಸ್ಟ್ರಿಯಲ್ಲಿ ಬಿದ್ದು ಹೋಗಿದ್ದಾರೆ. ದರ್ಶನ್ ಇನ್ಮುಂದೆ ತಲೆ ಎತ್ತೋದು ಆಗಲ್ಲ ಅಂತೆಲ್ಲಾ ಮಾತನಾಡಿಕೊಂಡಿದ್ದರು. ಯಾವ ಪ್ರಡ್ಯೂಸರ್‌ಗಳು ಕೂಡ ಇನ್ಮುಂದೆ ದರ್ಶನ್ ಮೇಲೆ ಹಣ ಹಾಕುವುದಿಲ್ಲ ಅಂತ ಗುಲ್ಲು ಹಬ್ಬಿಸಿದ್ದರು.

ಇನ್ನೂ ಕೆಲವರಂತೂ ದರ್ಶನ್‌ ಮೇಲೆ ಹಾಕಿದ ಹಣ ಹೋಯ್ತಲ್ಲ ಅಂತನೂ ಆತಂಕಗೊಂಡರು. ಆದರೆ ದರ್ಶನ್ ಪತ್ನಿ, ಸಹೋದರ, ತಾಯಿ, ತರುಣ್, ರಕ್ಷಿತಾ ಪ್ರೇಮ್ ಹೀಗೆ ಕೆಲವೇ ಕೆಲ ಮಂದಿ ಮಾತ್ರ ದರ್ಶನ್ ಪರ ನಿಂತುಕೊಂಡರು. ಆದರೀಗ ದರ್ಶನ್ ಮತ್ತೆ ಅಖಾಡಕ್ಕೆ ಇಳಿಯಬೇಕು. ದರ್ಶನ್ ಮತ್ತೆ ಸಿನಿಮಾ ಮಾಡಬೇಕು ಅಂತ ಪರದಾಡಿದ್ದು ಮಾತ್ರ ದರ್ಶನ್ ಪತ್ನಿ ವಿಜಯಲಕ್ಷ್ಮಿ.

ದರ್ಶನ್‌ ಕೈಯಲ್ಲೀಗ ಎಂಟು ಸಿನಿಮಾ

ಬಿದ್ದೇ ಹೋಯ್ತು ದರ್ಶನ್ ಮಾರ್ಕೇಟ್ ಅನ್ನೋರಿಗೆ ಉತ್ತರವಾಗಿ ದರ್ಶನ್ ಮುಂದೆ ಈಗ ಎಂಟು ಸಿನಿಮಾಗಳು ಇವೆ. ಜೊತೆಗೆ ಈ ಎಲ್ಲಾ ಸಿನಿಮಾಗಳಿಗೆ ಯಾವ ರೀತಿ ತಯಾರಿ ನಡೆಸುತ್ತಿದ್ದಾರೆ ಅನ್ನೋದಕ್ಕೆ ಒಂದು ಝಲಕ್ ಟೀಸರ್ ಬಿಟ್ಟಿದ್ದಾರೆ ದರ್ಶನ್. ಹೀಗಾಗಿ ಅಸಲಿ ಆಟ ಈಗ ಶುರುವಾಗಿದೆ. ಕೇವಲ ಡೆವಿಲ್ ಟೀಸರ್ ಮೂಲಕ ದರ್ಶನ್ ಮಾರ್ಕೇಟ್ ಮುಗಿತು ಅಂದವರಿಗೆ ಟಕ್ಕರ್ ಕೊಟ್ಟಿದ್ದಾರೆ ದರ್ಶನ್.

ಈ ಮೂಲಕ ತಮ್ಮ ಕರೀಯರ್‌ ಅಂತ್ಯ ಕಂಡವರಿಗೆ ಸವಾಲು ಹಾಕಿದ್ದಾರೆ. ಇದು ಕೇವಲ ಟೀಸರ್ ಮುಂದಿದೆ ಅಸಲಿ ಆಟ ಅನ್ನೋದನ್ನು ಪರೋಕ್ಷವಾಗಿ ದಾಸ ಹೇಳಿದಂತಿದೆ. ಡಿ ಕಂಪನಿ ಸಾಮ್ಯಾಜ್ಯ ಮುಗಿದಿಲ್ಲ ಅನ್ನೋದನ್ನ ದಾಸ ಈ ಟೀಸರ್‌ ಮೂಲಕ ತೋರಿಸಿದ್ದಾರೆ. ಸದ್ಯ ಡೆವಿಲ್ ಸಿನಿಮಾ ಪೂರ್ಣಗೊಳಿಸಲು ದಾಸ ನಿರತರಾಗಿದ್ದಾರೆ. ಇದಾದ ಬಳಿಕ ಒಂದೊಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಡೆವಿಲ್ ಸಿನಿಮಾದ ಜೊತೆಗೆ ಅತ್ತ ಪ್ರೇಮ್ ನಿರ್ದೇಶನದ ಸಿನಿಮಾದ ಚಿಕ್ಕ ಟೀಸರ್‌ ಕೂಡ ರಿಲೀಸ್ ಮಾಡಲಾಗಿದೆ. ಇದು ಅಭಿಮಾನಿಗಳಿಗೆ ಡಬಲ್ ಗಿಫ್ಟ್ ಕೊಟ್ಟಂತೆ ಇದೆ. ಟೀಸರ್ ಹೀಗಾದರೆ ಇನ್ನೂ ದರ್ಶನ್ ಸಿನಿಮಾಗಳು ಯಾವ ರೀತಿ ಹವಾ ಸೃಷ್ಟಿ ಮಾಡಲಿವೆ ಅನ್ನೋದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+