Darshan Thoogudeepa: ಜೂನಿಯರ್ ರೇಣುಕಾಸ್ವಾಮಿ ನೋಡೋದಕ್ಕೆ ದರ್ಶನ್ ತೂಗುದೀಪ್‌ಗೆ ಹೆಚ್ಚಾದ ಕಾತರ?

ರೇಣುಕಾಸ್ವಾಮಿ ಹೆಂಡತಿಗೆ ಗಂಡು ಮಗು ಹೆರಿಗೆ ಆಗಿರುವ ಸುದ್ದಿ ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಭಾರತದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಬೆಂಗಳೂರಿನ ಪಟ್ಟಣಗೆರೆಯಲ್ಲಿ ಈ ಮಗುವಿನ ತಂದೆ ರೇಣುಕಾಸ್ವಾಮಿ ಎಂಬ ಚಿತ್ರದುರ್ಗದ ವ್ಯಕ್ತಿಯನ್ನ ಭೀಕರವಾಗಿ ಕೊಲೆ ಮಾಡಿದ್ದು. ಹೀಗೆ ರೇಣುಕಾಸ್ವಾಮಿ ಕೊಲೆಯಾದ 4 ತಿಂಗಳ ನಂತರ ರೇಣುಕಾಸ್ವಾಮಿ ಹೆಂಡತಿಗೆ ಗಂಡು ಮಗು ಆಗಿದ್ದು, ದರ್ಶನ್ ತೂಗುದೀಪ್ ಅವರ ಕಿವಿಗೆ ಈ ಸುದ್ದಿ ಬಿದ್ದ ತಕ್ಷಣ ಏನು ಮಾಡಿದ್ದಾರೆ ಹೇಳಿ ನೋಡೋಣ?

ರೇಣುಕಾಸ್ವಾಮಿಗೆ ಗಂಡು ಮಗು ಹುಟ್ಟಿರುವ ಸುದ್ದಿ ಬಳ್ಳಾರಿ ಜೈಲಿನಲ್ಲಿ ಇರುವ, ದರ್ಶನ್ ತೂಗುದೀಪ್ ಅವರಿಗೆ ತಲುಪಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್ ತೂಗುದೀಪ್ ಕೂಡ ಖುಷಿ ವ್ಯಕ್ತಪಡಿಸಿ, ರೇಣುಕಾಸ್ವಾಮಿ ಕುಟುಂಬವನ್ನ ಭೇಟಿ ಮಾಡುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ರೇಣುಕಾಸ್ವಾಮಿ ಗಂಡು ಮಗುವನ್ನು ದರ್ಶನ್ ತೂಗುದೀಪ್ ದತ್ತು ಪಡೆಯುತ್ತಾರೆ ಎಂಬ ಸುದ್ದಿಯನ್ನ ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಈ ಸಮಯದಲ್ಲಿ ಹಬ್ಬಿಸುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಜೂನಿಯರ್ ರೇಣುಕಾಸ್ವಾಮಿ ನೋಡಲು ದರ್ಶನ್ ತೂಗುದೀಪ್‌ಗೆ ಹೆಚ್ಚಾದ ಕಾತರ?

Darshan Thoogudeepa May Visit To Renukaswamy Home After Coming From Ballari

ಜೂನಿಯರ್ ರೇಣುಕಾಸ್ವಾಮಿ ಭೇಟಿ?

ಹೌದು, ರೇಣುಕಾಸ್ವಾಮಿ ಕುಟುಂಬದ ವಿಚಾರ ಇದೀಗ ಭಾರತದ ಮೂಲೆ ಮೂಲೆಯಲ್ಲಿಯೂ ಚರ್ಚೆಗೆ ಬಂದಿದೆ. ಇಂತಹ ಸಮಯದಲ್ಲೇ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರು ಜೂನಿಯರ್ ರೇಣುಕಾಸ್ವಾಮಿ ನೋಡಲು ಕಾತರದಿಂದ ಕಾದಿದ್ದಾರೆ. ಬಳ್ಳಾರಿ ಜೈಲು ಬಿಟ್ಟು ಹೊರಗೆ ಬಂದ ತಕ್ಷಣವೇ ಜೂನಿಯರ್ ರೇಣುಕಾಸ್ವಾಮಿ ಅಂದ್ರೆ ರೇಣುಕಾಸ್ವಾಮಿ ಮಗನ ನೋಡಲು ಕಾಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ವಿಚಾರ ಎಲ್ಲೆಲ್ಲೂ ವೈರಲ್ ಆಗಿದ್ದು ಈ ಬಗ್ಗೆ ದರ್ಶನ್ ತೂಗುದೀಪ್ ಆಗಲಿ ಅಥವಾ ದರ್ಶನ್ ತೂಗುದೀಪ್ ಕುಟುಂಬದ ಸದಸ್ಯರೇ ಆಗಲಿ ಅಧಿಕೃತ ಹೇಳಿಕೆ ಇನ್ನೂ ನೀಡಿಲ್ಲ.

ಬಳ್ಳಾರಿ ಜೈಲಿನಿಂದ ಶೀಘ್ರದಲ್ಲೇ ರಿಲೀಸ್?

ಡಿ-ಬಾಸ್, ಡಿ-ಬಾಸ್, ಡಿ-ಬಾಸ್... ಇದು ಕರ್ನಾಟಕದಲ್ಲಿ ಎಲ್ಲೇ ಹೋದರು ದರ್ಶನ್ ಅವರ ಅಭಿಮಾನಿಗಳ ಬಾಯಿಂದ ಇದೀಗ ಕೇಳಿ ಬರುತ್ತಿರುವ ಒಂದೇ ಒಂದು ಪದ ಎನ್ನಬಹುದು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಿಚಾರಣೆ ಹಲವು ದಿನಗಳಿಂದಲು ನಡೆಯುತ್ತಿದ್ದು, ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಮಾನ್ಯವಾಗಿ ಬೇಲ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಈಗ ಜಾಮೀನು ಸಿಕ್ಕಿಲ್ಲ. ಆದ್ರೆ ಶೀಘ್ರದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಹೊರಗೆ ಬರುವ ಎಲ್ಲಾ ಮುನ್ಸೂಚನೆ ಸಿಗುತ್ತಿದೆ ಅಂತಿದ್ದಾರೆ ಫ್ಯಾನ್ಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+