Darshan Thoogudeepa: ಪವಿತ್ರಾ ಗೌಡ ಕೂಡ ರಿಲೀಸ್ ಆಗಬೇಕು... ಹಠ ಹಿಡಿದು ಕೂತರಾ ಡಿ-ಬಾಸ್?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದು, ಆರೋಪಿ ನಂಬರ್ 1 ಅಂದ್ರೆ ಎ-1 ಪಟ್ಟ ಪಡೆದಿದ್ದಾರೆ ಪವಿತ್ರಾ ಗೌಡ. ಅದರಲ್ಲೂ ಪವಿತ್ರಾ ಗೌಡಳ ಕಾರಣಕ್ಕೆ ಈ ಕೊಲೆ ನಡೆದು ಹೋಗಿದೆ, ನಮ್ಮ ಡಿ-ಬಾಸ್ ತಪ್ಪು ಏನೂ ಇಲ್ಲ ಅನ್ನೋ ಮಾತು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳದ್ದು. ಅದರಲ್ಲೂ ಪವಿತ್ರಾ ಗೌಡ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಹೀಗಿದ್ದಾಗಲೇ, ಪವಿತ್ರಾ ಗೌಡ ಕೂಡ ರಿಲೀಸ್ ಆಗಬೇಕು... ಹಠ ಹಿಡಿದು ಕೂತರಾ ಡಿ-ಬಾಸ್?

ಪವಿತ್ರಾ ಗೌಡ & ದರ್ಶನ್ ತೂಗುದೀಪ್ ನಡುವೆ ಅದೆಷ್ಟು ಪ್ರೀತಿ ಇತ್ತು ಎನ್ನುವುದಕ್ಕೆ ಈಗ ಪೊಲೀಸರ ತನಿಖೆಯಲ್ಲಿ ಹೊರ ಬಿದ್ದಿರುವ ಹಲವಾರು ಫೋಟೋಗಳೇ ಸಾಕ್ಷಿ. 'ಡಿ-ಬಾಸ್' ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡ ತಬ್ಬಿಕೊಂಡಿರುವ ರೊಮ್ಯಾಂಟಿಕ್ ಫೋಟೋ ಹಾಗೂ ರೀಲ್ಸ್ ಈಗಲೂ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗುತ್ತಿವೆ. ಇಂತಹ ಸಮಯದಲ್ಲಿ ಈಗಲೂ ಪವಿತ್ರಾ ಗೌಡ ಅವರ ಮೇಲಿನ ಪ್ರೀತಿಯನ್ನ ದರ್ಶನ್ ತೂಗುದೀಪ್ ಬಿಟ್ಟು ಕೊಡಲ್ಲ ಅಂತಾ ಸೋಷಿಯಲ್ ಮೀಡಿಯಾ ಮಂದಿ ಹೇಳುತ್ತಿರುವಾಗಲೇ, ಪವಿತ್ರಾ ಗೌಡ ಕೂಡ ರಿಲೀಸ್ ಆಗಬೇಕು... ಹಠ ಹಿಡಿದು ಕೂತರಾ ಡಿ-ಬಾಸ್?

Darshan Thoogudeepa May Be Take Big Decision Over The Pavithra Gowda

ಪವಿತ್ರಾ ಗೌಡ & ದರ್ಶನ್ ತೂಗುದೀಪ್...

ದರ್ಶನ್ ತೂಗುದೀಪ್ ಅವರ ಹೆಸರಿಗೆ ಇಂಡಿಯಾ ಟು ಮಂಡ್ಯ ಫುಲ್ ಹವಾ ಇದೆ ಗುರೂ, ಹೀಗೆ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಅಂದ್ರೆ ದರ್ಶನ್ ತೂಗುದೀಪ್ ಅವರ ಹವಾ ಬಗ್ಗೆ, ಹೊಗಳಿಕೆಯ ಮಾತು ಆಡುತ್ತಾರೆ.

ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ಎಲ್ಲೇ ಹೋದರೂ ಅಭಿಮಾನಿಗಳು ಇದೀಗ ಜೈಕಾರ ಹಾಕುತ್ತಾರೆ. ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ತೂಗುದೀಪ್ ಅವರು, ಸಾಕಷ್ಟು ನೋವು ಅನುಭವಿಸಿದ್ದರು. ದರ್ಶನ್ ತೂಗುದೀಪ್ ಅವರ ಆರೋಗ್ಯ ಕೂಡ ಕೈಕೊಟ್ಟ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿತ್ತು.

ಹೀಗೆ ದರ್ಶನ್ ತೂಗುದೀಪ್ ಅವ್ರು ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸಿದಾಗ ಕಣ್ಣೀರು ಹಾಕಿ ಅಭಿಮಾನಿಗಳು ನೊಂದಿದ್ದರು. ಅಲ್ಲದೆ ದರ್ಶನ್ ತೂಗುದೀಪ್ ಅವರು ಆದಷ್ಟು ಬೇಗ ರಿಲೀಸ್ ಆಗಿ ಹೊರಗೆ ಬರಲಿ ಎಂದು ಬೇಡುತ್ತಿದ್ದರು. ಹೀಗಿದ್ದಾಗ, ದೀಪಾಳಿ ಹಬ್ಬಕ್ಕೆ ಮೊದಲು ನಟ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿದ್ದರೆ. ದರ್ಶನ್ ತೂಗುದೀಪ್ ಅವರ ಆರೋಗ್ಯ ಪರಿಸ್ಥಿತಿ ಹಿನ್ನೆಲೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಹೀಗಿದ್ದಾಗ ಪವಿತ್ರಾ ಗೌಡ ಕೂಡ ಬಿಡುಗಡೆ ಆಗಬೇಕು, ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಾ ಗೌಡ ಅವರನ್ನು ರಿಲೀಸ್ ಮಾಡಿಸಲು ಹಠ ಹಿಡಿದಿರುವ ದರ್ಶನ್ ತೂಗುದೀಪ್... ಅಂತಾ ಸೋಷಿಯಲ್ ಮೀಡಿಯಾ ಮೂಲಕ ಸುದ್ದಿ ಹಬ್ಬಿಸಲಾಗುತ್ತಿದೆ!

ದರ್ಶನ್ ತೂಗುದೀಪ್ ಅವರ ಬಗ್ಗೆ...

ಪವಿತ್ರಾ ಗೌಡ ಅವರನ್ನ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಮಾಡಿಸಲು ಹಠ ಹಿಡಿದಿರುವ ದರ್ಶನ್ ತೂಗುದೀಪ್... ಎಂಬ ಸುದ್ದಿ ಬಗ್ಗೆ ಇದುವರೆಗೂ ದರ್ಶನ್ ತೂಗುದೀಪ್ ಅವರ ಕುಟುಂಬ ಸದಸ್ಯರು ಅಥವಾ ದರ್ಶನ್ ತೂಗುದೀಪ್ ಆಪ್ತರು ಅಧಿಕೃತ ಹೇಳಿಕೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಈ ಸುದ್ದಿಯ ಅಸಲಿಯತ್ತು ಬಯಲಾಗಬೇಕು & ದರ್ಶನ್ ತೂಗುದೀಪ್ ಅವರ ಹೆಸರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ಬೆದರಿಕೆ ಆರೋಪ & ಇತರ ವಿಚಾರಗಳ ಬಗ್ಗೆ ಕೂಡ ಪೊಲೀಸರ ಮೂಲಕ ಕಠಿಣ ತನಿಖೆ ನಡೆಯಬೇಕು, ಎಂಬ ಆಗ್ರಹ ಕನ್ನಡಿಗರ ಮೂಲಕ ಕೇಳಿ ಬಂದಿದೆ.

ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿಗೆ?

ಬೆಂಗಳೂರು ಪೊಲೀಸರು ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಲು ನಿರ್ಧರಿಸಿದ್ದಾರೆ. ಇದಕ್ಕೆ ಒಂದಷ್ಟು ಸಮಯ ಹಿಡಿಯುತ್ತೆ ಎನ್ನಲಾಗಿದೆ ಡಿ-ಬಾಸ್ ದರ್ಶನ್ ತೂಗುದೀಪ್ ಆರೋಗ್ಯ ಸ್ಥಿತಿ ಹಿನಾಯವಾಗಿದ್ದ ಹಿನ್ನೆಲೆ ಮಾನ್ಯ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಈಗ ನೋಡಿದರೆ ಈ ರೀತಿ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಂದ ರಿಲೀಸ್ ಆದ ನಂತರ, ಹಲವರಿಗೆ ಬೆದರಿಕೆ ಹಾಕುತ್ತಿರುವ ಆರೋಪ ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ಕೇಳಿ ಬರ್ತಿದೆ. ಬೆಂಗಳೂರು ಪೊಲೀಸರಿಗೆ ಕೂಡ ದರ್ಶನ್ ತೂಗುದೀಪ್ ಅಭಿಮಾನಿಗಳು ಆವಾಜ್ ಹಾಕಿದ್ದು, ಮುಂದೆ ಏನಾಗುತ್ತೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+