Darshan Thoogudeepa: ದರ್ಶನ್‌ಗೆ ಜೀವಾವಧಿ ಶಿಕ್ಷೆ ಫಿಕ್ಸ್? ದಾಸನ ಸಿನಿ ಜರ್ನಿ ಎಂಡ್!
ಕಳೆದ ಮೂರು ತಿಂಗಳಿನಿಂದ ರೇಣುಕಾಸ್ವಾಮಿ ಪ್ರಕರಣ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಈ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ಅನ್ನು ಸಲ್ಲಿಕೆ ಮಾಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಒಂದಿಷ್ಟು ಅಂಶಗಳನ್ನು ಪೊಲೀಸರು ಉಲ್ಲೇಖ ಮಾಡಿದ್ದಾರೆ. ಹೀಗಾಗಿ ದರ್ಶನ್‌ಗೆ ಈ ಪ್ರಕರಣ ಉರುಳಾಗಿ ಪರಿಣಮಿಸಿದೆ. ಏನೇ ಮಾಡಿದರೂ ಕೂಡ ಈ ಪ್ರಕರಣದಿಂದ ಹೊರ ಬರುವುದು ಬಹಳಷ್ಟು ಕಷ್ಟ ಅಂತಲೇ ಹೇಳಲಾಗುತ್ತಿದೆ. ದರ್ಶನ್‌ಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.
ಹೌದು.. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಸಂಕಷ್ಟ ಎದುರಾಗಿದೆ. ಹಾಗಾದರೆ ದರ್ಶನ್ ಜೈಲಿನಿಂದ ಹೊರಬರೋಕೆ ಸಾಧ್ಯನೇ ಇಲ್ವಾ? ಸುಬ್ಬ ಮತ್ತು ಮುದ್ದು ಹೆಂಡ್ತಿ ಲೈಫ್ ಇಷ್ಟೇನಾ? ಖ್ಯಾತ ನಟನಿಗೆ ಇನ್ಮುಂದೆ ಜೈಲಿನಲ್ಲಿ ನರಕ ದರ್ಶನನಾ? ಅನ್ನೋ ಪ್ರಶ್ನೆಗಳು ಉದ್ಭವಿಸಿವೆ.

ಯಾಕೆಂದರೆ ರೇಣುಕಾಸ್ವಾಮಿಗೆ ನಾನು ಎದೆಯ ಮೇಲೆ ಒದ್ದೆ ಎಂದು ದರ್ಶನ್ ತಪ್ಪೊಪ್ಪಿಕೊಂಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಇದು ಉಲ್ಲೇಖವಾಗಿದೆ. ಹತ್ಯೆ ಕೇಸ್‌ನಲ್ಲಿ ದರ್ಶನ್ ವಿರುದ್ಧ ಪ್ರಬಲ ಸಾಕ್ಷಿಗಳು ಲಭ್ಯವಾಗಿದೆ. ಇದರ ಬಗ್ಗೆ ದರ್ಶನ್ ಒಪ್ಪಿಕೊಂಡಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿದೆ. ಕಾಲ್ ರೆಕಾರ್ಡ್ಸ್, ಟೆಕ್ನಿಕಲ್ ಎವಿಡೆನ್ಸ್, ಪ್ರತ್ಯಕ್ಷ ಸಾಕ್ಷಿಗಳು, ತನಿಖೆ ವೇಳೆಯ ಸರ್ಕಾರಿ ಸಿಬ್ಬಂದಿ ಸಹ ಸಾಕ್ಷಿದಾರರಾಗಿದ್ದಾರೆ.
ಆರೋಪಿಗಳು ತಪ್ಪಿಸಿಕೊಳ್ಳದಂತೆ ಅತ್ಯಂತ ಖಡಕ್ ತನಿಖೆ ನಡೆಸಲಾಗುತ್ತಿದೆ. ಯಾವುದೇ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗದೆ ಪೊಲೀಸರು ತನಿಖೆ ಮಾಡಿದ್ದಾರೆ. 3 ಪ್ರತ್ಯಕ್ಷ ಸಾಕ್ಷಿ, 8 ಟೆಕ್ನಿಕಲ್ ವರದಿ, 27 ಜನರ 164 ಹೇಳಿಕೆ ಚಾರ್ಜ್‌ಶೀಟ್‌ನಲ್ಲಿ ನಮೋದಿಸಲಾಗಿದೆ. 59 ಮಹಜರು ಸಿಬ್ಬಂದಿ ಮತ್ತು 56 ಪೊಲೀಸರು ಸಹ ಸಾಕ್ಷಿದಾರರಾಗಿದ್ದಾರೆ. ಜೊತೆಗೆ ತಹಶೀಲ್ದಾರ್, ವೈದ್ಯರು ಸೇರಿ 8 ಉನ್ನತ ಅಧಿಕಾರಿಗಳ ಸಾಕ್ಷಿ ಸಂಗ್ರಹವಾಗಿದೆ. ಒಂದು ವೇಳೆ ಅಧಿಕಾರಿಗಳು ಉಲ್ಟಾ ಹೊಡೆದರೆ ನೌಕರಿಗೂ ಕುತ್ತು ಬರಲಿದೆ.
ಇನ್ನೂ ತಾವೇ ಹೆಣೆದ ಬಲೆಯಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ದರ್ಶನ್ ವಿರುದ್ಧ 302, 201, 120 (ಬಿ), 355, 364, 148 & 149 ಸೆಕ್ಷನ್ ನಲ್ಲಿ ಪ್ರಕರಣಗಳು ದಾಖಲಾಗಿವೆ. ಅತ್ಯಂತ ಕಠಿಣ ಸೆಕ್ಸನ್‌ಗಳ ಅಡಿಯಲ್ಲಿ ದರ್ಶನ್ ವಿರುದ್ಧ ಕೇಸ್ ದಾಖಲಾಗಿದ್ದು ದಾಸ ಹೊರಬರುವುದು ಕಷ್ಟಸಾಧ್ಯ.

ಕೊಲೆ ಪ್ರಕರಣ, ಸಾಕ್ಷ್ಯ ನಾಶ, ಕ್ರಿಮಿನಲ್ ಪಿತೂರಿ, ಕಿಡ್ನ್ಯಾಪ್, ಗಲಭೆ, ಮಾರಣಾಂತಿಕ ಆಯುಧ ಬಳಸಿ ದಾಳಿಗೈದ ಆರೋಪಗಳು ಇವೆ. ಈ ಎಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ದರ್ಶನ್‌ಗೆ ಜಾಮೀನು ಸಿಗುವುದು ಕಷ್ಟ ಇದೆ. ಪ್ರಬಲ ಸಾಕ್ಷಿಗಳು ಇರುವ ಹಿನ್ನೆಲೆ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ ದರ್ಶನ್.
ಅಲ್ಲದೆ ರೇಣುಕಾಸ್ವಾಮಿಗೆ ದರ್ಶನ್ ಹೊಡೆದಿದ್ದಾಗಿ ಪವಿತ್ರಾ ಸಹ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳು ಕೊಲೆ ಮಾಡಲು ದರ್ಶನ್ ಅವರೇ ಕಾರಣ ಎಂದು ದರ್ಶನ್‌ನತ್ತ ಬೆಟ್ಟು ಮಾಡಿದ್ದಾರೆ. ಹೀಗೆ ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಪ್ರತಿ ಕೃತ್ಯದ ವಿವರ ಬಹಿರಂಗವಾಗಿದೆ.
ಆರೋಪಿಗಳ ಸ್ವಯಿಚ್ಚಾ ಹೇಳಿಕೆಯಲ್ಲೂ ಸಹ ದರ್ಶನ್ ಮೇಲೆಯೇ ಆರೋಪ ಮಾಡಲಾಗಿದೆ. ಇದೆಲ್ಲದರಿಂದಾಗಿ ದರ್ಶನ್ ಹೊರಬರುವುದಿರಲಿ ಕಠಿಣ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ. ಅದು ಜೀವಾವಧಿ ಶಿಕ್ಷೆಯಾದರೂ ಆಶ್ಚರ್ಯ ಪಡಬೇಕಾಗಿಲ್ಲ ಎನ್ನುತ್ತಾರೆ ಕಾನೂನು ತಜ್ಞರು. ಹೀಗಾಗಿ ದರ್ಶನ್ ಸಿನಿ ಜರ್ನಿ ಇಲ್ಲಿಗೆ ಮುಗಿಯುತ್ತಾ ಅನ್ನೋ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ. ಒಟ್ಟಿನಲ್ಲಿ ಎಲ್ಲಾ ಸಾಕ್ಷಿಗಳನ್ನು ನೋಡ್ತಾಯಿದ್ದರೆ ದರ್ಶನ್ ಹೊರಬರುವುದು ಅಷ್ಟು ಸುಲಭವಿಲ್ಲ ಎನ್ನುವು ಮಾತ್ರ ಸ್ಪಷ್ಟವಾಗಿದೆ. ದರ್ಶನ್‌ಗೆ ಜೀವಾವಧಿ ಶಿಕ್ಷೆಯಾದರೂ ಆಶ್ಚರ್ಯ ಪಡಬೇಕಾಗಿಲ್ಲ.












Click it and Unblock the Notifications