Darshan Sudeep: ಒಂದೇ ಸ್ಥಳದಲ್ಲಿ ದರ್ಶನ್ ಸುದೀಪ್ ಶೂಟಿಂಗ್
ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಸಿನಿಮಾ ಅಪ್ಡೇಟ್ ಅಂದರೆ ಸಾಕು ಜನ ಸಿಕ್ಕಾಪಟ್ಟೆ ಆಸಕ್ತಿ ವಹಿಸುತ್ತಾರೆ. ಇದೀಗ ಇವರಿಬ್ಬರ ಸಿನಿಮಾ ಅಪ್ಡೇಟ್ ನೋಡುವುದಾದರೆ ಸುದೀಪ್ ಅವರ ಬಿಲ್ಲ ರಂಗ ಬಾಷಾ ಹಾಗೂ ದರ್ಶನ್ ಅವರ ಡೆವಿಲ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಎರಡೂ ಸಿನಿಮಾ ಶೂಟಿಂಗ್ ಅನ್ನು ಒಂದೇ ಸ್ಥಳದಲ್ಲಿ ಮಾಡಲಾಗುತ್ತಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ.
ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ಈಗಾಗಲೇ ಬಿಲ್ಲ ರಂಗ ಬಾಷಾ ಸಿನಿಮಾ ಶೂಟಿಂಗ್‌ಗಾಗಿ ಬೃಹತ್ ಆಕಾರದ ಸೆಟ್ ಹಾಕಲಾಗಿದೆ. ಅದೇ ರೀತಿ ಪ್ರಕಾಶ್ ನೀಲ್ ಅವರು ನಿರ್ದೇಶನದ ಡೆವಿಲ್ ಸಿನಿಮಾ ಶೂಟಿಂಗ್ ಸೆಟ್ ಕೂಡ ಅದರ ಪಕ್ಕದಲ್ಲಿ ಹಾಕಿದ್ದಾರೆ. ಹೀಗಾಗಿ ಒಂದೇ ಜಾಗದಲ್ಲಿ ಬಿಆರ್‌ಬಿ ಹಾಗೂ ಡೆವಿಲ್ ಸಿನಿಮಾ ಶೂಟಿಂಗ್ ನಡೆಯುತ್ತಿವೆ.

ಬಿಲ್ಲ ರಂಗ ಬಾಷಾ ಸುದೀಪ್ ಅವರ ಸಿನಿ ಜರ್ನಿಯಲ್ಲಿ ಬಿಗೆಸ್ಟ್ ಸಿನಿಮಾ ಆಗಿದೆ. ಇದರಲ್ಲಿ ಸುದೀಪ್ ಅವರು ಮೂರು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಬಿಆರ್‌ಬಿ ಶೂಟಿಂಗ್ ಕೂಡ ಹೈ ಸೆಕ್ಯೂರ್ ಆಗಿ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಆಗಿವೆ.
ಮತ್ತೊಂದು ಕಡೆ ದರ್ಶನ್ ಅವರ ಡೆವಿಲ್ ಸಿನಿಮಾ ರಾಜಕೀಯ ಆಧಾರಿತ ಸಿನಿಮಾ ಆಗಿದೆ. ಡೆವಿಲ್ ಸಿನಿಮಾದಲ್ಲಿ ದರ್ಶನ್ ರಾಜ್ಯದ ಸಿಎಂ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾ ದರ್ಶನ್ ಅವರ ಸ್ಪೆಷಿಯಲ್ ಸಿನಿಮಾ ಆಗುವುದರಲ್ಲಿ ಅನುಮಾನವೇ ಇಲ್ಲ.
ಅಲ್ಲದೆ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಆಗಿ ಸಾಕಷ್ಟು ಕಷ್ಟಪಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ ಬೆನ್ನು ನೋವು ಕಾಲು ನೋವು ಇದ್ದರೂ ಕೂಡ ಶೂಟಿಂಗ್‌ನಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಕಾನೂನು ಸಮರ ಎದುರಿಸುತ್ತಿದ್ದು ಕೋರ್ಟ್ ಕಚೇರಿ ಅಲೆದಾಡುತ್ತಿರುವುದು ಇದ್ದೇ ಇದೆ. ಇದೆಲ್ಲಾದರ ನಡುವೆ ದರ್ಶನ್ ಸಿನಿಮಾ ಶೂಟಿಂಗ್ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಸಿನಿಮಾ ಅದ್ಭುತವಾಗಿ ಮೂಡಿಬರಲಿದೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಒಟ್ಟಿನಲ್ಲಿ ಬಿಆರ್‌ಬಿ ಹಾಗೂ ಡೆವಿಲ್ ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸಪೆಕ್ಟೆಡ್ ಸಿನಿಮಾಗಳು ಆಗಿವೆ. ಕನ್ನಡ ಚಿತ್ರರಂಗದಲ್ಲಿ ಯಾರೂ ಕೂಡ ಶಾಶ್ವತ ಅಲ್ಲ. ಇದಷ್ಟು ದಿನ ಅಭಿಮಾನಿಗಳನ್ನು ರಂಜಿಸುತ್ತಾ ಹೆಚ್ಚು ಸಿನಿಮಾಗಳನ್ನು ಮಾಡಿ ಅನ್ನೋದು ನಮ್ಮ ಆಶಯ.












Click it and Unblock the Notifications