ದರ್ಶನ್ ತೂಗುದೀಪ ಚುನಾವಣೆಗೆ ನಿಂತು ಎಂಎಲ್‌ಎ ಆಗಲು ಸಜ್ಜಾಗಿದ್ದನಾ? ಚನ್ನಪಟ್ಟಣ ಉಪಚುನಾವಣೆ ಮೇಲೆ ಡಿ-ಗ್ಯಾಂಗ್ ಸ್ಕೆಚ್?

ದರ್ಶನ್ ತೂಗುದೀಪ ಕೃತ್ಯಗಳು ಒಂದೊಂದಾಗಿ ಹೊರಗೆ ಬರುತ್ತಿವೆ, ಅದರಲ್ಲೂ ಕೊಲೆ ಆರೋಪ ದರ್ಶನ್ ತೂಗುದೀಪ ಅಲಿಯಾಸ್ ದರ್ಶನ್ ಬೆನ್ನಿಗೆ ಕಚ್ಚಿಕೊಂಡಿದೆ. ಹೀಗಿದ್ದಾಗ ದರ್ಶನ್ ಬಗ್ಗೆ ಸ್ಫೋಟಕ ಆರೋಪ ಒಂದು ಕೇಳಿಬಂದಿದ್ದು, ಸ್ವಲ್ಪ ಹೆಚ್ಚುಕಮ್ಮಿ ಆಗಿದ್ದರೂ ಇದೇ ಕೊಲೆಯ ಆರೋಪಿ ದರ್ಶನ್ ತೂಗುದೀಪ ಅಲಿಯಾಸ್ ದರ್ಶನ್ ಕರ್ನಾಟಕದ ವಿಧಾನಸಭೆಯಲ್ಲಿ ಶಾಸಕನು ಕೂಡ ಆಗಿಬಿಡುತ್ತಿದ್ದ! ಹೇಗೆ ಗೊತ್ತಾ? ಮುಂದೆ ಓದಿ.

ಹೌದು ರೇಣುಕಾಸ್ವಾಮಿ ಕೊಲೆ ಕೇಸ್ ಮೂಲಕ ಲಾಕ್ ಆಗಿರುವ ನಟ ದರ್ಶನ್ ಈಗ, ಜೈಲಿನಲ್ಲಿ ಅನ್ನಸಾರು ತಿನ್ನುತ್ತಾ ಸಿಗರೇಟು ಬೇಕು ಅಂತಾ ಪೊಲೀಸರ ಎದುರು ಕೈಮುಗಿದು ನಿಂತು ತೀವ್ರ ಪರದಾಟ ಪಡುತ್ತಿದ್ದಾನೆ. ಹೀಗಿದ್ದಾಗಲೇ ಸ್ಫೋಟಕ ಆರೋಪ ಒಂದು ಕೇಳಿಬಂದಿದೆ. ಏನಪ್ಪಾ ಆ ಆರೋಪ ಅಂದ್ರೆ, ಒಂದು ಸ್ವಲ್ಪ ಎಡವಟ್ಟು ಆಗಿದ್ದರೂ ಈ ಕೊಲೆ ಆರೋಪಿ ದರ್ಶನ್ ನಮ್ಮ ಕರ್ನಾಟಕ ರಾಜ್ಯದಲ್ಲಿ ಶಾಸಕ ಕೂಡ ಆಗಿಬಿಡುತ್ತಿದ್ದನಂತೆ. ಅದರಲ್ಲೂ ಬೆಂಗಳೂರಿಗೆ ಹತ್ತಿರವೇ ಇರುವ ವಿಧಾನಸಭಾ ಕ್ಷೇತ್ರದ ಮೇಲೆ ದರ್ಶನ್ ಕಣ್ಣು ಬಿದ್ದಿತ್ತು, ದರ್ಶನ್ ಗೆಲ್ಲಿಸಲು ಸ್ಕೆಚ್ ಕೂಡ ಸಿದ್ಧವಾಗಿತ್ತು ಎಂಬ ಆರೋಪ ಕೇಳಬಂದಿದೆ.

Darshan Thoogudeepa Is Tried To Become MLA From Channapatna Constituency Said By Yogeshwar

ನಟ ದರ್ಶನ್ ಶಾಸಕ?

ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆದ್ದಿರುವ ಕಾರಣಕ್ಕೆ, ಇದೀಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಖಾಲಿ ಆಗಲಿದೆ. ಯಾಕಂದ್ರೆ ಈಗ ಮಾಜಿ ಸಿಎಂ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ. ಹೀಗಿದ್ದಾಗ ಖಾಲಿ ಆಗಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ವತಃ, ಇದೇ ಕೊಲೆ ಆರೋಪಿ ದರ್ಶನ್ ತೂಗುದೀಪಗೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದರು ಎಂಬ ಆರೋಪವನ್ನ ಈಗ ಬಿಜೆಪಿ ನಾಯಕರು ಮಾಡುತ್ತಿದ್ದಾರೆ.

ದರ್ಶನ್ ಗೆಲ್ಲಿಸಲು ಯಾರದ್ದು ಪ್ಲಾನ್?

ಈ ಕುರಿತು ಗಂಭೀರ ಆರೋಪ ಮಾಡಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು, ದರ್ಶನ್ ಹೆಸರು ಹೇಳದೆ ಕುಟುಕಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಚ್ಚರಿ ಅಭ್ಯರ್ಥಿಯನ್ನು ಹಾಕ್ತೇವೆ ಎಂದಿದ್ದ ಡಿ.ಕೆ.ಸುರೇಶ್ ಅವರಿಗೆ ಈ ಮೂಲಕ ತಿರುಗೇಟು ನೀಡಿರುವ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್, ಕಾಂಗ್ರೆಸ್ ಪಕ್ಷ ಚನ್ನಪಟ್ಟಣಕ್ಕೆ ನಿಲ್ಲಿಸಲು ತಯಾರಿ ನಡೆಸಿದ್ದ ಅಚ್ಚರಿಯ ಅಭ್ಯರ್ಥಿ ಈಗ ಜೈಲು ಸೇರಿದ್ದಾರೆ ಎಂದಿದ್ದಾರೆ. ಚಿತ್ರ ನಟ ಕಾಂಗ್ರೆಸ್ ಪರ ಹೆಚ್ಚು ಪ್ರಚಾರ ಮಾಡಿದ್ದರು, ಅವರನ್ನ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಉಪ ಚುನಾವಣೆಗೆ ನಿಲ್ಲಿಸಲು ಡಿ.ಕೆ. ಬ್ರದರ್ಸ್ ಪ್ಲಾನ್ ಮಾಡಿದ್ರು ಎಂಬುದಾಗಿ ಯೋಗೇಶ್ವರ್ ಆರೋಪ ಮಾಡಿದ್ದಾರೆ.

ದರ್ಶನ್ & ಗ್ಯಾಂಗ್‌ಗೆ ಅನ್ನ-ಸಾರು!

ಪ್ರತಿದಿನ ಎಣ್ಣೆ ಹೊಡೆದು, ಎಂಜಾಯ್ ಮಾಡುತ್ತಾ ಮಾಂಸ ತಿನ್ನುತ್ತಿದ್ದ ದರ್ಶನ್ & ಗ್ಯಾಂಗ್‌ಗೆ ಈಗ ಅನ್ನ ಸಾರು ತಿಂದು ಮಲಗುವ ಪರಿಸ್ಥಿತಿ ಬಂದಿದೆ. ಪೊಲೀಸರು ಆರೋಪಿಗಳ ತಂಡಕ್ಕೆ ಅನ್ನ ಸಾರು ನೀಡಿ ಚಾಪೆ ಕೊಟ್ಟು ಮಲಗಿಸಿದ್ದಾರಂತೆ ಈ ಮೂಲಕ ಕೊಲೆ ಆರೋಪ ಹಿನ್ನೆಲೆ ಕಂಬಿ ಹಿಂದೆ ಬಿದ್ದ ಸೋ ಕಾಲ್ಡ್ ಡಿ-ಬಾಸ್ ಈಗ ಹಿಂಸೆ ಅನುಭವಿಸುತ್ತಿದ್ದಾರೆ ಅಂತಾ ಅವರ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ದರ್ಶನ್ ಸಹವಾಸದಿಂದ ತಂದೆ ಕಳೆದುಕೊಂಡ

ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎಸ್ಕೇಪ್ ಆಗಿದ್ದ, ಚಿತ್ರದುರ್ಗದ ಅನುಕುಮಾರ್​ ಅಲಿಯಾಸ್​ ಅನು ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೀಗೆ ತನ್ನ ಮಗ ಕೊಲೆ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದ ನಂತರ, ಆರೋಪಿ ಅನುಕುಮಾರ್ ಅಲಿಯಾಸ್ ಅನು ತಂದೆ ಚಂದ್ರಣ್ಣ ಅವರಿಗೆ ಹೃದಯಾಘಾತ ಆಗಿದೆ ಎಂದು ಆರೋಪ ಮಾಡಲಾಗಿದೆ. ಹೃದಯಾಘಾತದ ಕಾರಣಕ್ಕೆ, ಇದೀಗ ಅನುಕುಮಾರ್ ಅಲಿಯಾಸ್ ಅನು ಅವರ ತಂದೆ ಚಂದ್ರಣ್ಣ ಮೃತಪಟ್ಟಿದ್ದಾರೆ. ಹೀಗಿದ್ದಾಗ ಕೊಲೆ ಆರೋಪಿಗೆ ತನ್ನ ತಂದೆಯ ಮುಖ ಕೊನೆಯ ಬಾರಿಗೆ ನೋಡುವ ಭಾಗ್ಯ ಕೂಡ ಸಿಕ್ಕಿಲ್ಲ. ದರ್ಶನ್ ಸಹವಾಸ ಮಾಡಿದ್ದಕ್ಕೆ ಅನುಕುಮಾರ್ ನರಳುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+