Darshan Thoogudeepa: ತನ್ನ ಪಾಡಿಗೆ ತಾನಿರಲು ದರ್ಶನ್ ನಿರ್ಧಾರ: ದೂರವಾಯ್ತು ಆ ಪವಿತ್ರಾ ಬಂಧನ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೂರ್ಣಾವಧಿ ಜಾಮೀನು ಪಡೆದ ಬಳಿಕ ದರ್ಶನ್ ತೂಗದೀಪ ಪವಿತ್ರಾ ಗೌಡ ಅವರನ್ನು ಭೇಟಿ ಮಾಡುತ್ತಾರೆನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಇದ್ಯಾವುದಕ್ಕೂ ದರ್ಶನ್ ಸೊಪ್ಪು ಹಾಕಿಲ್ಲ. ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ಮುಖ್ಯ ಅಲ್ಲ ಅನ್ನೋ ರೀತಿ ದರ್ಶನ್ ಅವರು ಸದ್ಯ ಕುಟುಂಬಸ್ಥರೊಂದಿಗೆ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಹಾಗಾದರೆ ಈ ಒಂದು ಕಹಿ ಘಟನೆಯಿಂದಾಗಿ ಪವಿತ್ರಾ ಗೌಡ ಅವರನ್ನು ಮರೆತುಬಿಡುತ್ತಾರಾ ದರ್ಶನ್? ಮತ್ತೆ ಪವಿತ್ರಾ ಸಹವಾಸವನ್ನು ದರ್ಶನ್ ಮಾಡುವುದೇ ಇಲ್ವಾ?
ಪ್ರಸ್ತುತ ದರ್ಶನ್ ಅವರು ಮೈಸೂರಿನ ಟಿ ನರಸಿಪುರದ ತಮ್ಮ ಫಾರ್ಮ್‌ಹೌಸ್‌ನಲ್ಲಿ ಇದ್ದಾರೆ. ಅವರು ಕುಟುಂಬಸ್ಥರನ್ನು ಹೊರತುಪಡಿಸಿ ಬೇರೆ ಯಾರನ್ನೂ ಕೂಡ ಭೇಟಿ ಮಾಡುತ್ತಿಲ್ಲ. ಇಂದು ಬೆಳಿಗ್ಗೆ ಮೈಸೂರು ಕಾಮಾಕ್ಷಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಡಿ-ಬಾಸ್ ನೇರವಾಗಿ ಫಾರ್ಮ್ ಹೌಸ್‌ಗೆ ತೆರಳಿದ್ದಾರೆ. ಈ ವೇಳೆ ದರ್ಶನ್ ಅವರೊಂದಿಗೆ ನಟ ಧನ್ವೀರ್ ಇರುವುದು ಕಂಡು ಬಂದಿದೆ.

ಹೀಗೆ ದರ್ಶನ್ ತಾನಾಯ್ತು, ತನ್ನ ಆರೋಗ್ಯ ಆಯ್ತು, ಮನೆ ಆಯ್ತು ಅಂತ ಎಲ್ಲರಿಂದಲೂ ಸದ್ಯಕ್ಕೆ ಅಂತರ ಕಾಯ್ದುಕೊಂಡಿದ್ದಾರೆ. ಅಲ್ಲದೆ ದರ್ಶನ್ ಅವರು ಯಾರೂ ಕೂಡ ನನ್ನನ್ನು ಭೇಟಿ ಮಾಡಲು ಬರಬೇಡಿ. ಪ್ರಸ್ತುತ ನನ್ನ ಮನಸ್ಸಿಗೆ ನೆಮ್ಮದಿ ಬೇಕಾಗಿದೆ. ನನ್ನ ಆರೋಗ್ಯ ಸುಧಾರಿಸದ ಬಳಿಕ ಎಲ್ಲರನ್ನು ನಾನು ಭೇಟಿ ಮಾಡುತ್ತೇನೆ. ನನ್ನ ಮನಸ್ಸಿಗೆ ಶಾಂತಿ ಬೇಕಾಗಿದೆ. ಹೀಗಾಗಿ ನಾನು ನನ್ನ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಕೆಲ ದಿನ ಉಳಿಯುತ್ತೇನೆ. ಹೀಗಾಗಿ ನನ್ನನ್ನು ಭೇಟಿ ಮಾಡಲು ಯಾರೂ ಕೂಡ ಬರಬೇಡಿ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ದರ್ಶನ್ ಮತ್ತೆ ಪವಿತ್ರಾ ಜೊತೆಗೆ ಮಾತನಾಡುವುದಿಲ್ವಾ? ದೂರವಾಯ್ತು ಆ ಪವಿತ್ರಾ ಬಂಧನ?
ಬದಲಾದರಾ ದರ್ಶನ್?
ದರ್ಶನ್ ಕನ್ನಡ ಸಿನಿಮಾ ಕಂಡ ಅದ್ಭುತ ನಟ. ಹೀಗಾಗಿ ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳು ಇದ್ದಾರೆ. ಅವರನ್ನು ಸಿನಿಮಾ ಪರದೆಯ ಮೇಲೆ ಮೆಚ್ಚುಕೊಳ್ಳುವುದು ಮಾತ್ರವಲ್ಲದೇ ಅವರ ಜೀವನ ಶೈಲಿಯನ್ನೂ ರೂಢಿಸಿಕೊಂಡವರು ಇದ್ದಾರೆ. ದರ್ಶನ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವುದು, ಅವರ ಹೆಸರಲ್ಲಿ ದೇವರಿಗೆ ಪೂಜೆ ಮಾಡಿಸುವುದನ್ನು ಅವರ ಅಭಿಮಾನಿಗಳು ಮಾಡುತ್ತಲೇ ಇರುತ್ತಾರೆ. ದರ್ಶನ್ ಜೈಲಿಗೆ ಹೋದ ಬಳಿಕವಂತೂ ಅವರ ದೇವಸ್ಥಾನ ಕಟ್ಟುವ ನಿರ್ಧಾರವನ್ನೂ ಅವರ ಅಭಿಮಾನಿಗಳು ಮಾಡಿದ್ದರು.
ಜೈಲಿನಲ್ಲಿ ದರ್ಶನ್ ಅನುಭವಿಸಿದ ನೋವು ಎಂಥದ್ದು ಎಂದು ಅವರ ಪತ್ನಿಗೆ ಮಾತ್ರ ಗೊತ್ತು. ಹೀಗಾಗಿ ದರ್ಶನ್ ಅವರ ಮನಸ್ಸು ಅಳುತ್ತಿದ್ದರೆ ಇತ್ತ ಪತ್ನಿ ವಿಜಯಲಕ್ಷ್ಮೀ ಸಾಕಷ್ಟು ಕೊರಗಿ ಹೋಗಿದ್ದರು. ಹೀಗಾಗಿ ದರ್ಶನ್ ಅವರನ್ನು ಹೊರ ತರಲೇಬೇಕು ಎಂದು ಪಣ ತೊಟ್ಟಿದ್ದರು ವಿಜಯಲಕ್ಷ್ಮೀ. ಹಾಗೇ ದರ್ಶನ್ ಅವರಿಂದ ಭಾಷೆ ಕೂಡ ತೆಗೆದುಕೊಂಡಿದ್ದರು ವಿಜಯಲಕ್ಷ್ಮೀ.
ಪತ್ನಿಗೆ ಮಾತು ಕೊಟ್ಟ ದಚ್ಚು?
ಜೈಲಿನಿಂದ ಬಿಡುಗಡೆಗೂ ಮುನ್ನ ತಾವು ಯಾವತ್ತೂ ಕೂಡ ಪವಿತ್ರಾ ಅವರ ಸಹವಾಸಕ್ಕೆ ಹೋಗುವುದಿಲ್ಲ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಮಾತು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್ ಅವರನ್ನು ವಿಜಯಲಕ್ಷ್ಮೀ ಅವರು ಶತಾಯಗತಾಯ ಬಿಡಿಸಿಕೊಂಡು ಬರಲು ಪ್ರಯತ್ನಪಟ್ಟಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಪತ್ನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್ ಬಿಡುಗಡೆಯಾಗಿ ಸುಮಾರು ದಿನಗಳು ಕಳೆದರೂ ಕೂಡ ಪವಿತ್ರಾ ಸಹವಾಸಕ್ಕೆ ಹೋಗಿಲ್ಲ. ಅವರನ್ನು ಮಾತನಾಡಿಸುವ ಪ್ರಯತ್ನ ಕೂಡ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀ ಆರೈಕೆಯಲ್ಲಿ ಗುಣಮುಖರಾಗುತ್ತಿದ್ದಾರೆ.
ತಮಗಿರುವ ಬೆನ್ನು ನೋವಿನಿಂದಾಗಿ ಸರಿಯಾಗಿ ಅವರಿಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಾ, ಸರ್ಜರಿ ವಿಚಾರವನ್ನು ತಲೆಯಿಂದ ತೆಗೆದು ಹಾಕಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಪವಿತ್ರಾ ಕತೆ ಏನು?
ಪವಿತ್ರಾ ಕತೆ ಏನು?
ಜೈಲಿಗೆ ಹೋಗಿ ಬಂದ ಬಳಿಕ ಪವಿತ್ರಾ ಕೂಡ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಆದರೂ ಅವರು ಪಾಠ ಕಲಿಯಲಿಲ್ಲ ಅಂದರೆ ಜನ ಕೂಡ ಅವರನ್ನು ನಿಂದಿಸುವುದು ಪಕ್ಕಾ. ಹೀಗಾಗಿ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ನೇರವಾಗಿ ಅವರ ಅಜ್ಜಿ ಮನೆಗೆ ತೆರಳಿದ್ದಾರೆ. ಅಜ್ಜಿ ಮನೆಯಲ್ಲಿ ಪವಿತ್ರಾ ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಸ್ತುತ ವಾತಾವರಣ ನೋಡಿದರೆ ಪವಿತ್ರಾ ಅವರು ಕೂಡ ಮತ್ತೆ ದರ್ಶನ್ ಅವರನ್ನು ಭೇಟಿ ಮಾಡುವ ಮನಸ್ಸು ಮಾಡುವುದಿಲ್ಲ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಬದಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಇದೇ ರೀತಿ ತಮ್ಮ ಕುಟುಂಬಸ್ಥರು ಹೇಳಿದಂತೆ ನಡೆದುಕೊಳ್ಳುತ್ತಾರಾ? ಅಥವಾ ಹಿಂದೆ ಇದ್ದ ಹಾಗೇ ಇರುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications