Darshan Thoogudeepa: ದರ್ಶನ್ ತೂಗುದೀಪ್ ಪೊಗರು ಇಳಿಸಿದ ಬಳ್ಳಾರಿ ಜೈಲಿನ ಅಧಿಕಾರಿಗಳು!

ದರ್ಶನ್ ತೂಗುದೀಪನಿಗೆ ಈ ಜನ್ಮದಲ್ಲಿ ಬುದ್ಧಿ ಬರಲ್ಲ, ಕೊಲೆ ಆರೋಪ ಹೊತ್ತು ಬಳ್ಳಾರಿಯ ಜೈಲಿನಲ್ಲಿ ನರಳಾಡುತ್ತಿದ್ದರೂ ದರ್ಶನ್ ತೂಗುದೀಪ್ ಮಧ್ಯದ ಬೆರಳು ತೋರಿಸಿ ಮಾಧ್ಯಮ ಸಿಬ್ಬಂದಿ ಎದುರು ಅಶ್ಲೀಲವಾಗಿ ವರ್ತಿಸಿದ್ದಾನೆ ಎಂಬುದು ದರ್ಶನ್ ವಿರೋಧಿಗಳ ಆರೋಪ. ಪರಿಸ್ಥಿತಿ ಹೀಗಿದ್ದಾಗ ದರ್ಶನ್ ತೂಗುದೀಪ್ ಎಗರಾಟ, ಕೊಬ್ಬು ನೋಡಿ ರೊಚ್ಚಿಗೆದ್ದ ಬಳ್ಳಾರಿ ಜೈಲಿನ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಳ್ಳಾರಿ ಜೈಲಿನ ಅಧಿಕಾರಿಗಳ ವಾರ್ನಿಂಗ್ ಕಂಡು ದರ್ಶನ್ ತೂಗುದೀಪ ಕೂಡ ಸೈಲೆಂಟ್ ಆಗಿದ್ದು, ಅಷ್ಟಕ್ಕೂ ಅಧಿಕಾರಿಗಳು ಹೇಳಿದ್ದು ಏನು?

ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ತುಂಬಾ ಎಗರಾಡುತ್ತಿದ್ದ ಈ ದರ್ಶನ್ ತೂಗುದೀಪ್ ಬಾಯಿ ಮುಚ್ಚಿಸಿದ್ದು ಹೇಗೆ ಬಳ್ಳಾರಿ ಜೈಲಿನ ಅಧಿಕಾರಿಗಳು?

Darshan Thoogudeepa Got This Message From Ballari Officers

ದರ್ಶನ್ ತೂಗುದೀಪ್ ಬಾಯಿ ಸೈಲೆಂಟ್!

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೂ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ, ಕೊಲೆಯ ಆರೋಪಿ ದರ್ಶನ್ ತೂಗುದೀಪ! ಹಾಗಾದ್ರೆ ಬಳ್ಳಾರಿ ಜೈಲಿನ ಅಧಿಕಾರಿಗಳು ಹೇಳಿದ ಅದೊಂದು ಮಾತಿಗೆ ದರ್ಶನ್ ತೂಗುದೀಪ ಬಾಯಿ ಮುಚ್ಚಿದ್ದು ಏಕೆ? ಮುಂದೆ ಓದಿ.

ಬಳ್ಳಾರಿ ಜೈಲಿನ ಕೋಣೆಗೆ ನುಗ್ಗಿ...

ಬಳ್ಳಾರಿ ಜೈಲಿನ ಎದುರು ತನ್ನ ಎರಡೂ ಬೆರಳುಗಳನ್ನ ಅಂದ್ರೆ ಮಧ್ಯದ ಬೆರಳನ್ನು ತೋರಿಸಿ ಅಸಹ್ಯವಾಗಿ ಮೀಡಿಯಾ ಕ್ಯಾಮೆರಾಗೆ ಸನ್ನೆ ಮಾಡಿದ್ದ ದರ್ಶನ್ ತೂಗುದೀಪ್‌ಗೆ ವಾರ್ನಿಂಗ್ ಕೊಡಲಾಗಿದೆ. ಯಾಕಂದ್ರೆ ದರ್ಶನ್ ತೂಗುದೀಪ್ ಇದೇ ರೀತಿ ಆಡುತ್ತಿದ್ದರೆ ಹೊರ ಹೋಗಲು ಬಿಡಲ್ಲ ಎಂದು ಎಚ್ಚರಿಸಲಾಗಿದೆ. ಹೀಗಾಗಿ ಬಳ್ಳಾರಿ ಜೈಲಿನ ಜೈಲರ್, ದರ್ಶನ್ ತೂಗುದೀಪ್ ಜೈಲಿನ ಕೋಣೆಗೆ ನುಗ್ಗಿ ವಾರ್ನಿಂಗ್ ಕೊಟ್ಟಿದ್ದಾರೆ. ಅಲ್ಲದೆ ಈ ರೀತಿ ಅಹಂಕಾರ ಬಿಡು, ಇಲ್ಲ ಅಂದ್ರೆ ಸರಿಯಾಗಿ ಪಾಠ ಕಲಿಸುತ್ತೇವೆ ಅಂತಾ ಎಚ್ಚರಿಕೆ ನೀಡಿದ್ದಾರಂತೆ.

ಒಟ್ನಲ್ಲಿ ದರ್ಶನ್ ತೂಗುದೀಪ್ ಜೀವನದಲ್ಲಿ ಇಷ್ಟೆಲ್ಲಾ ಅನುಭವಿಸಿದ್ದರೂ ಬುದ್ಧಿ ಕಲಿತಿಲ್ಲ ಅಂತಾ ಕಾಣುತ್ತೆ. ಇದೇ ಕಾರಣಕ್ಕೆ ಮತ್ತೆ ಮತ್ತೆ ಬಳ್ಳಾರಿ ಜೈಲಿನಲ್ಲಿ ಕಿರಿಕ್ ತೆಗೆಯುತ್ತಿದ್ದು, ದರ್ಶನ್ ತೂಗುದೀಪ್ ಇದೇ ರೀತಿ ವರ್ತನೆ ಮುಂದುವರಿಸಿದರೆ ಬೇಲ್ ಅಂದ್ರೆ ಜಾಮೀನನ್ನ ಪಡೆಯುವುದು & ಜೈಲಿನಿಂದ ಹೊರಗೆ ಬರುವುದು ಕೂಡ ಕಷ್ಟ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+