Darshan Thoogudeepa: ಪವಿತ್ರಾ ಗೌಡಗೆ ಹುಳಿ ಮಾವಿನ ಕಾಯಿ ಬಯಕೆ... ಏನ್ ಗುರೂ ಹಿಂಗ್ ವೈರಲ್ಲು!
ದರ್ಶನ್ ತೂಗುದೀಪ್ ಅವರ ಅತ್ಯಾಪ್ತ ಗೆಳತಿ ಪವಿತ್ರಾ ಗೌಡ ಇದೀಗ ಕೊಲೆ ಆರೋಪ ಹೊತ್ತು ಜೈಲು ಕಂಬಿ ಎಣಿಸುತ್ತಿದ್ದು, ಎಲ್ಲೆಲ್ಲೂ ಪವಿತ್ರಾ ಗೌಡ ವಿಚಾರವೇ ವೈರಲ್ ಆಗುತ್ತಿದೆ. ಹೀಗೆ, ಪವಿತ್ರಾ ಗೌಡ ಬಗ್ಗೆ ಮತ್ತೊಂದು ಸ್ಫೋಟಕ ವಿಚಾರ ವೈರಲ್ ಆಗುತ್ತಿದೆ. ಅದು ಏನೆಂದರೆ ಈ ಪವಿತ್ರಾ ಗೌಡಗೆ ಹುಳಿ, ಹುಳಿ ಮಾವಿನ ಕಾಯಿ ತಿನ್ನುವ ಬಯಕೆ ಹೆಚ್ಚಾಗುತ್ತಿದೆ ಎನ್ನಲಾಗಿದ್ದು, ಸೋಷಿಯಲ್ ಮೀಡಿಯಾ ಪೂರ್ತಿ ಪವಿತ್ರಾ ಗೌಡರ ಹುಳಿ ಮಾವಿನ ಕಾಯಿ ಬಯಕೆ ವಿಚಾರವೇ ಚರ್ಚೆಯಾಗುತ್ತಿದೆ. ಹಾಗಾದ್ರೆ ನಿಜವಾಗೂ ಪವಿತ್ರಾ ಗೌಡಗೆ ಪೊಲೀಸರು ಹುಳಿ ಮಾವಿನ ಕಾಯಿ ನೀಡಿದ್ದಾರಾ? ಮುಂದೆ ಓದಿ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ ಕಂಬಿ ಎಣಿಸುತ್ತಿರುವ ಪವಿತ್ರಾ ಗೌಡ ಮತ್ತು ನಟ ದರ್ಶನ್ ತೂಗುದೀಪ್ ಇದೀಗ ಒದ್ದಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಊಟವನ್ನ ತಿನ್ನಲು ಆಗದೆ, ಬೇಧಿ & ವಾಂತಿ ಕಾರಣಕ್ಕೆ ನಟ ದರ್ಶನ್ ಸೊರಗಿ ಹೋಗಿದ್ದಾರೆ ಎಂಬ ಮಾತು ಕೂಡ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಇದೀಗ ಪವಿತ್ರಾ ಗೌಡ ಹುಳಿ ಮಾವಿನ ಕಾಯಿ ಬೇಕು ಅಂತಾ ಹಠ ಹಿಡಿಯುತ್ತಿದ್ದಾರೆ ಎಂಬ ವಿಚಾರದ ಕುರಿತಾಗಿ ಭಾರಿ ದೊಡ್ಡ ಚರ್ಚೆ ಶುರುವಾಗಿದೆ! ಹಾಗಾದ್ರೆ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಈಗ ಪವಿತ್ರಾ ಗೌಡಗೆ ಹುಳಿ ಮಾವಿನ ಕಾಯಿ ಕೊಟ್ಟಿದ್ದಾರಾ? ಬನ್ನಿ ತಿಳಿಯೋಣ.

ಹುಳಿ.. ಹುಳಿ.. ಮಾವಿನ ಕಾಯಿ!
ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು ಮಾಡಿದ್ದ ನಟ. ಆದ್ರೆ ಈಗ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ ದರ್ಶನ್ ತೂಗುದೀಪ್ ಅವರು. ಹೀಗಿದ್ದಾಗ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ನಡುವೆ ಅತಿ ಆತ್ಮೀಯ ಸಂಬಂಧ ಕೂಡ ಇತ್ತು ಎಂಬ ಆರೋಪಗಳು ಇವೆ. ಇಂತಹ ಮಾತುಗಳ ನಡುವೆ ಇದೀಗ ಪವಿತ್ರಾ ಗೌಡಗೆ 3 ತಿಂಗಳು, ಅವರು ಈಗ ಪ್ರೆಗ್ನೆಂಟ್ ಅನ್ನೋ ಸುದ್ದಿಗಳು ಓಡಾಡಿದ್ದವು. ಆದರೆ ಈ ಸುದ್ದಿಗಳು ಸುಳ್ಳು, ಗಾಳಿ ಸುದ್ದಿ ಅನ್ನುವಾಗಲೇ ಇದೀಗ ದರ್ಶನ್ ತೂಗುದೀಪ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಹುಳಿ ಮಾವಿನ ಕಾಯಿ ಬೇಕು ಅಂತಾ ಹಠ ಹಿಡಿದಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.
ಪರಪ್ಪನ ಅಗ್ರಹಾರದಲ್ಲಿ ಹುಳಿ ಮಾವು!
ಪವಿತ್ರಾ ಗೌಡ ಹುಳಿ ಮಾವಿನ ಕಾಯಿಗೆ ಡಿಮ್ಯಾಂಡ್ ಇಟ್ಟಿದ್ದಾರೆ, ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಈ ವಿಚಾರ ಕೇಳಿ ಬೆಚ್ಚಿಬಿದ್ದಿದ್ದಾರೆ. ಮಾವಿನ ಕಾಯಿ ಕೂಡ ಕೊಟ್ಟಿದ್ದಾರೆ ಎಂಬ ಸುದ್ದಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ ಸತ್ಯ ಏನು? ಎಂಬ ವಿಚಾರ ತಿಳಿಯಲು ಇನ್ನೂ ಒಂದೆರಡು ತಿಂಗಳು ಕಾದು ನೋಡಬೇಕಿದೆ! ಅಲ್ಲಿಯವರೆಗೂ ಹೀಗೆ, ಪವಿತ್ರಾ ಗೌಡ ವಿಚಾರ ವೈರಲ್ ಆಗುತ್ತಾ ಇರೋದು ಗ್ಯಾರಂಟಿ?












Click it and Unblock the Notifications