Darshan Thoogudeepa: ಪವಿತ್ರಾ ಗೌಡ ಒಂದೊಂದು ರೂಪಾಯಿಗೂ ಪರದಾಟ ಪಟ್ಟಿದ್ದಳು, ಆದರೆ ಈಗ ಇಷ್ಟೊಂದು ದುಡ್ಡು...

ದರ್ಶನ್ ತೂಗುದೀಪ್ ಅವರ ಗೆಳತಿ ಪವಿತ್ರಾ ಗೌಡ ಒಂದೊಂದು ರೂಪಾಯಿಗೂ ಪರದಾಟ ಪಟ್ಟು, ಇಂದು ಈ ಹಂತಕ್ಕೆ ಬೆಳದವರು. ಅದರಲ್ಲೂ ಕೇವಲ 10 ವರ್ಷದ ಹಿಂದೆ ಒಂದೇ ಒಂದು ಸಿನಿಮಾ ಚಾನ್ಸ್ ಕೊಡಿ ಅಂತಾ ಕಾಲು ಹಿಡಿಯುತ್ತಿದ್ದ ಪವಿತ್ರಾ ಗೌಡಗೆ ಇಷ್ಟೊಂದು ದುಡ್ಡು ಬಂದಿದ್ದು ಹೇಗೆ? ರಾತ್ರೋರಾತ್ರಿ ಶೀಮಂತಿಕೆ ಬಂದು ಮೆರೆಯುತ್ತಿದ್ದಳಾ ಈ ಪವಿತ್ರಾ ಗೌಡ? ಜನರು ಈಗ, ಪವಿತ್ರಾ ಗೌಡ ಒಂದೊಂದು ರೂಪಾಯಿಗೂ ಪರದಾಟ ಪಟ್ಟಿದ್ದಳು, ಆದರೆ ಈಗ ಇಷ್ಟೊಂದು ದುಡ್ಡು...

ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಕೆಲವು ಫ್ಲಾಪ್ ಸಿನಿಮಾಗಳನ್ನ ಮಾಡಿದ್ದ ಪವಿತ್ರಾ ಗೌಡ ಮೊದಲನೇ ಗಂಡ ಒಬ್ಬ ಟೆಕ್ಕಿ, ಅಂದರೆ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಅಂತೆ. ಪವಿತ್ರಾ ಗೌಡ ಮದುವೆ ಆದ ನಂತರ ಒಂದು ಮಗು ಕೂಡ ಇತ್ತು, ಆದರೆ ಮೊದಲ ಗಂಡನ ದೂರ ಮಾಡ್ಕೊಂಡು ಒಂಟಿ ಆಗಿದ್ದರಂತೆ ಇದೇ ಪವಿತ್ರಾ ಗೌಡ. ಕೆಲ ವರ್ಷಗಳ ಗ್ಯಾಪ್ ನಂತರ ನಟ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಒಂದಾಗಿದ್ದರು. ಇಬ್ಬರು ಈ ರೀತಿ ಸಂಬಂಧದಲ್ಲಿ ಮುಳುಗಿ, 10 ವರ್ಷ ಕಳೆದಿದೆ ಎಂದು ಸ್ವತಃ ಪವಿತ್ರಾ ಗೌಡ ನೀಡಿದ್ದ ಮಾಹಿತಿ ಕೂಡ ವೈರಲ್ ಆಗುತ್ತಿದೆ. ಇದರ ಜೊತೆಗೆ ಪವಿತ್ರಾ ಗೌಡಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು? ಎನ್ನುವ ಪ್ರಶ್ನೆ ಕಾಡ್ಗಿಚ್ಚಿನ ರೀತಿ ಹಬ್ಬುತ್ತಿದೆ!

Darshan Thoogudeepa Friend Pavithra Gowda History And Net Worth

ದರ್ಶನ್ ತೂಗುದೀಪ್ ಕೊಟ್ಟಿದ್ದ ಕಾಸು?

ಪವಿತ್ರಾ ಗೌಡ ಬಳಿ ಒಂದು ದೊಡ್ಡ ಬಂಗಲೆ ಇದೆ, ಇದನ್ನು ಸುಮಾರು 2 ಕೋಟಿ ರೂಪಾಯಿ ಬೆಲೆಗೆ ಪವಿತ್ರಾ ಗೌಡ ಖರೀದಿ ಮಾಡಿದ್ದಳು. ಆದರೆ ಪವಿತ್ರಾ ಗೌಡ ಈ ರೀತಿ ರಾಜರಾಜೇಶ್ವರಿ ನಗರದಲ್ಲಿ ಬಂಗಲೆ ಖರೀದಿ ಮಾಡಲು, ಸ್ವತಃ ಇದೇ ದರ್ಶನ್ ತೂಗುದೀಪ್ ಹಣ ಕೊಡಿಸಿದ್ದು ಕೂಡ ಸಾಕ್ಷಿ ಸಮೇತ ಸಿಕ್ಕಿದೆ. ಹೀಗಿದ್ದಾಗ ಪವಿತ್ರಾ ಗೌಡ ಬಳಿ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರುಗಳು & ವಸ್ತುಗಳು ಇವೆ ಎಂಬ ಆರೋಪ ಕೂಡ ಇದೆ. ಹೀಗಾಗಿ ಇದರ ಬಗ್ಗೆ ಆದಾಯ ತೆರಿಗೆ ಇಲಾಖೆ & ಇಡಿ ದಾಳಿ ಮಾಡಿ ತನಿಖೆ ನಡೆಸುತ್ತಾ? ಎಂಬ ಚರ್ಚೆಯು ಇದೀಗ ಆರಂಭ ಆಗಿದೆ.

ಕಮೆಂಟ್ ಮಾಡಿದರೆ 'ಶೆಡ್' ಫಿಕ್ಸ್?

ಒಟ್ನಲ್ಲಿ ಪವಿತ್ರಾ ಗೌಡ ರೀತಿ ನಾವು ಕೂಡ ದುಡ್ಡು ಮಾಡಬೇಕು.. ಪವಿತ್ರಾ ಗೌಡ ಇಷ್ಟೆಲ್ಲ ಕಾಸು ಮಾಡಿದ್ದು ಹೇಗೆ? ಅಂತೆಲ್ಲಾ ಜನರು ಚರ್ಚೆ ಮಾಡುತ್ತಿದ್ದಾರೆ. ಅಲ್ಲದೆ ರೇಣುಕಾಸ್ವಾಮಿ ಒಬ್ಬ ಕಾಮುಕ ಎಂದು ಆರೋಪ ಮಾಡುವ ಪವಿತ್ರಾ ಗೌಡ & ದರ್ಶನ್ ತೂಗುದೀಪ ಮಧ್ಯೆ ಏನು ಸಂಬಂಧ ಇತ್ತು? ಅನ್ನೋ ಪ್ರಶ್ನೆಯನ್ನ ಕೂಡ ಸೋಷಿಯಲ್ ಮೀಡಿಯಾದಲ್ಲಿ ಈಗ ಜನ ಕೇಳುತ್ತಿದ್ದಾರೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ಹಾಕುವ ಕಮೆಂಟ್‌ಗಳಿಗೆ ಕೆಲವರು ರೀಪ್ಲೇ ಕೊಡುತ್ತಿದ್ದು, ನಿಮ್ಮನ್ನು ಕೂಡ ಪವಿತ್ರಾ ಗೌಡ ಶೆಡ್‌ಗೆ ಕರೆಸಿ ಕಥೆ ಮುಗಿಸಿ ಹಾಕುತ್ತಾಳೆ ಸುಮ್ಮನೆ ಇರು ಅಂತಾ ಆರೋಪ ಮಾಡುತ್ತಿದ್ದಾರೆ! ಅಲ್ಲದೆ ದರ್ಶನ್ ತೂಗುದೀಪ್ ಬಗ್ಗೆ ಕೂಡ ಇದೇ ರೀತಿ ಆರೋಪ ಕೇಳಿಬರುತ್ತಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ನಟ ಮತ್ತು ಕೊಲೆ ಆರೋಪಿ ದರ್ಶನ್ ತೂಗುದೀಪ್ & ಗ್ಯಾಂಗ್‌ಗೆ ಮತ್ತೆ ಬಲ ಬಂದಂತೆ ಆಗಿದೆ. ಈ ಬಾರಿ ಕರ್ನಾಟಕದ ಪೊಲೀಸರೇ ಮಾಡಿಕೊಂಡಿರುವ ಅದೊಂದು ಎಡವಟ್ಟು, ದರ್ಶನ್ ತೂಗುದೀಪ್ & ಗ್ಯಾಂಗ್‌ಗೆ ಬಲ ತುಂಬಿದಂತೆ ಆಗಿದೆ. ಅಲ್ಲದೆ ಇದೇ ಎಡವಟ್ಟಿನಿಂದ ಇದೀಗ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಂದ ಸುಲಭವಾಗಿ ರಿಲೀಸ್ ಆಗಿ ಹೊರ ಬರ್ತಾರೆ ಅನ್ನೋ ಮಾತು ಹಬ್ಬಿದ್ದು, ಸಂಚಲನ ಸೃಷ್ಟಿ ಆಗಿದೆ. ಹಾಗಾದ್ರೆ ಇವತ್ತೇ ನಟ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗುತ್ತಾರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+