Darshan Thoogudeepa: ಜಾಮೀನು ಸಿಕ್ಕರೂ ದರ್ಶನ್ ತೂಗುದೀಪ್ ಫಾರಿನ್ ಟೂರ್ ಮಾಡಲು ಆಗಲ್ಲ, ಪಾಸ್‌ಪೋರ್ಟ್ ಕೋರ್ಟ್‌ಗೆ ಕೊಡಬೇಕು!
ದರ್ಶನ್‌ಗೆ ಜಾಮೀನು ಅರ್ಜಿ ಸಿಕ್ಕರೂ ಕೂಡ ಅವರು ಫಾರೆನ್ ಟೂರ್ ಮಾಡುವಂತಿಲ್ಲ. ಯಾಕಂದರೆ ಅವರ ಬಳಿ ಇರುವ ಪಾಸ್‌ಪೋರ್ಟ್ ಅನ್ನು ಕೋರ್ಟ್ ತೆಗೆದುಕೊಂಡಿದೆ. ಇದರಿಂದಾಗಿ ದರ್ಶನ್ ದೇಶ ಬಿಟ್ಟು ಎಲ್ಲೂ ಕೂಡ ಹೋಗಲು ಯೋಚನೆ ಮಾಡುವಂತಿಲ್ಲ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮಾಡಿದ್ದ ಕೋರ್ಟ್ ಇಂದು ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಬೆಳಿಗ್ಗೆ ದರ್ಶನ್ ಅನಾರೋಗ್ಯದ ಕಾರಣ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ದರ್ಶನ್‌ಗೆ ಈಗ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಆರು ವಾರಗಳ ಕಾಲ ದರ್ಶನ್ ಚಿಕಿತ್ಸೆ ಪಡೆದು ಮತ್ತೆ ಜೈಲಿಗೆ ವಾಪಸ್ ಹೋಗಬೇಕಾಗುತ್ತದೆ. ಅಲ್ಲದೆ ಕೋರ್ಟ್ ದರ್ಶನ್‌ಗೆ ಕೆಲ ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳ ಪ್ರಕಾರ ದರ್ಶನ್ ನಡೆದುಕೊಳ್ಳಬೇಕಾಗುತ್ತದೆ. ಹೌದು... ದರ್ಶನ್ ಜೈಲಿನಿಂದ ಹೊರಬರಲು
ನಟ ದರ್ಶನ್‌ಗೆ ನೀಡಲಾಗಿರುವ ಮಧ್ಯಂತರ ಜಾಮೀನಿಗೆ ಹೈಕೋರ್ಟ್ ಸಾಕಷ್ಟು ಷರತ್ತುಗಳನ್ನು ವಿಧಿಸಿದೆ. ಎರಡೂ ಕಡೆಯ ವಾದ ಆಲಿಸಿದ ಕೋರ್ಟ್ 'ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು' ಎಂದು ಉಲ್ಲೇಖಿಸಿ ಇದೀಗ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು, ಇದು ಆರು ವಾರಗಳ ಮಧ್ಯಂತರ ಜಾಮೀನು. ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ. ಜಾಮೀನು ಪಡೆದ ಬಳಿಕ ಪ್ರತಿ ವಾರವೂ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್‌ಗೆ ನೀಡಬೇಕು ಎಂದಿದ್ದಾರೆ.

ಅಲ್ಲದೆ ದರ್ಶನ್ ಪಾಸ್‌ಪೋರ್ಟ್‌ನ್ನೂ ಕೋರ್ಟ್ ಸುಪರ್ದಿಗೆ ನೀಡಬೇಕು ಎಂದು ನ್ಯಾಯಾಧೀಶರು ಹೇಳಿದ್ದು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಷರತ್ತು ವಿಧಿಸಿದ್ದಾರೆ. ಹೀಗಾಗಿ ದರ್ಶನ್ ಹೊರ ಬಂದ ಬಳಿಕ ಫಾರೆನ್ ಟೂರ್ ಮಾಡಲು ಆಗುವುದಿಲ್ಲ. ಇನ್ನುಳಿದಂತೆ ಎರಡು ಲಕ್ಷ ರೂಪಾಯಿ ಬಾಂಡ್ ನೀಡ್ಬೇಕು. ಜಾಮೀನಿಗೆ ಇಬ್ಬರ ಶ್ಯೂರಿಟಿ ನೀಡಬೇಕು, ಸಾಕ್ಷಿ ಮೇಲೆ ಒತ್ತಡ ಅಥವಾ ಸಾಕ್ಷಿ ನಾಶ ಮಾಡುವಂತಿಲ್ಲ. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸಬೇಕು, ಜಾಮೀನು ದುರುಪಯೋಗ ಮಾಡಿಕೊಳ್ಳದೇ ಇರಲು ಷರತ್ತು ವಿಧಿಸಲಾಗಿದೆ.
ಹೀಗಾಗಿ ದರ್ಶನ್ ಬೆಂಗಳೂರು ಬಿಟ್ಟು ಹೋಗುವುದು ಕಠಿಣ ಇದೆ. ಅಲ್ಲದೆ ದರ್ಶನ್ ಯಾವುದೇ ಮಾಧ್ಯಮ ಪ್ರತಿಕ್ರಿಯೆಯನ್ನೂ ನೀಡುವಂತಿಲ್ಲ, ಆರೋಗ್ಯದ ಬಗ್ಗೆಯೋ ಎಲ್ಲೂ ಹೇಳಿಕೆ ನೀಡುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿದೆ. ಇತ್ತ ದರ್ಶನ್ ಅವರ ಅಭಿಮಾನಿಗಳ ಪೂಜೆಗೆ ಫಲ ಸಿಕ್ಕಂತಾಗಿದೆ.
ದೇವಸ್ಥಾನದಲ್ಲಿ ಪತ್ನಿಯಿಂದ ವಿಶೇಷ ಪೂಜೆ
ಬಳ್ಳಾರಿ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ವಿಜಯಲಕ್ಷ್ಮೀಯನ್ನು ಕಾಣಲು ಅಭಿಮಾನಿಗಳ ದಂಡೇ ದೇವಸ್ಥಾನದ ಬಳಿ ನೆರೆದಿರುವುದು ಕಂಡು ಬಂದಿದೆ. ವಿಶೇಷ ಪೂಜೆಯನ್ನು ಸಲ್ಲಿಸಿದ ವಿಜಯಲಕ್ಷ್ಮಿ ಅಲ್ಲಿಂದ ಮತ್ತೆ ಜೈಲಿನ ಕಡೆಗೆ ತೆರಳಿದ್ದಾರೆ.












Click it and Unblock the Notifications