Darshan Thoogudeepa: ಎಸಿಪಿ ಚಂದನ್ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಂದ ವೈಯಕ್ತಿಕ ನಿಂದನೆ?
ಹೇ ಎಸಿಪಿ ನಿನ್ನ ನಾವು ಬಿಡೋದಿಲ್ಲ... ಹೇ ಎಸಿಪಿ ನೀನು ಏನು ಸಾಚಾನ? ಹೇ ಎಸಿಪಿ ನೀನು ನಮ್ಮ ಬಾಸ್‌ನ ಮುಟ್ಟಿದ್ದೀಯ, ನಾವು ಸುಮ್ಮನೆ ಇರೋದಿಲ್ಲ... ಅಂದಹಾಗೆ ಇದು ಯಾವುದೋ ಸಿನಿಮಾ ಡೈಲಾಗ್ ಅಲ್ಲ ಎಸಿಪಿ ಚಂದನ್ ಅವರ ವಿರುದ್ಧ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳಿಂದ ಈ ರೀತಿಯಾಗಿ ವೈಯಕ್ತಿಕ ನಿಂದನೆ ಜೋರಾಗಿ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಎಸಿಪಿ ಚಂದನ್ ಅವರಿಗೆ ಈ ರೀತಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳು...
ಡಿ-ಬಾಸ್ ದರ್ಶನ್ ತೂಗುದೀಪ್ ಅಂತಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ಕನ್ನಡ ಸಿನಿಮಾ ರಂಗದ ದೊಡ್ಡ ನಟ, ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಬಿರುಗಾಳಿ ಎದ್ದಿದೆ. ಅಷ್ಟಕ್ಕೂ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನರಳುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ, ಜೈಲಿನ ದರ್ಶನ ಮಾಡಿಸಿದ್ದೇ ಪೊಲೀಸ್ ಅಧಿಕಾರಿ ಎಸಿಪಿ ಚಂದನ್ & ತಂಡ. ಹೀಗಿದ್ದಾಗ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪೊಲೀಸ್ ಅಧಿಕಾರಿ ಎಸಿಪಿ ಚಂದನ್ ಅವರ ವಿರುದ್ಧ...

ಎಸಿಪಿ ಚಂದನ್ VS ಡಿ-ಬಾಸ್ ಫ್ಯಾನ್ಸ್!
ಅಂದಹಾಗೆ ಯಾವಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅಂತ ಅಭಿಮಾನಿಗಳ ಬಾಯಿಂದ ದರ್ಶನ್ ತೂಗುದೀಪ್ ಅವರು ಕರೆಸಿಕೊಂಡರೋ, ಆ ಕ್ಷಣದಿಂದಲೆ ಅಭಿಮಾನಿಗಳು ಅವರಿಗಾಗಿ ಏನು ಬೇಕಾದರು ಮಾಡಲು ಸಿದ್ಧವಾದರು ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುತ್ತಾರೆ. ಹೀಗಿದ್ದಾಗಲೇ ಪೊಲೀಸ್ ಅಧಿಕಾರಿ ಎಸಿಪಿ ಚಂದನ್ & ತಂಡ ಸೇರಿ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮೈಸೂರಿನಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಅರೆಸ್ಟ್ ಮಾಡಿ ಕರೆದುಕೊಂಡು ಬಂದಿದ್ದಕ್ಕೆ ರೊಚ್ಚಿಗೆದ್ದಿದ್ದಾರೆ.
ಕಳೆದ 4-5 ತಿಂಗಳಿಂದ ಕೂಡ ಪೊಲೀಸ್ ಅಧಿಕಾರಿ ಎಸಿಪಿ ಚಂದನ್ ಅವರ ವಿರುದ್ಧ ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ರೊಚ್ಚಿಗೆದ್ದು, ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಪೊಲೀಸ್ ಅಧಿಕಾರಿ ಎಸಿಪಿ ಚಂದನ್ ಅವರ ವೈಯಕ್ತಿಕ ವಿಚಾರಗಳನ್ನೂ ಇದೀಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಂತಾ ಹೇಳಿಕೊಳ್ಳುತ್ತಿರುವ ಕೆಲವರು ಕೆದಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಎಸಿಪಿ ಚಂದನ್ ಅವರ ವಿರುದ್ಧ...
ಅದರಲ್ಲೂ ಹೇ ಎಸಿಪಿ ನಿನ್ನ ನಾವು ಬಿಡೋದಿಲ್ಲ.... ಹೇ ಎಸಿಪಿ ನೀನು ಏನು ಸಾಚಾನ? ಹೇ ಎಸಿಪಿ ನೀನು ನಮ್ಮ ಬಾಸ್‌ನ ಮುಟ್ಟಿದ್ದೀಯ, ನಾವು ಸುಮ್ಮನೆ ಇರೋದಿಲ್ಲ... ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ & ಇತರ ಕಡೆಗಳಲ್ಲು ಮಾತನಾಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ರೀತಿ ಬೆದರಿಕೆ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವಾ? ಎಂಬ ಪ್ರಶ್ನೆಯನ್ನ ಈಗ ಕನ್ನಡಿಗರು ಕೇಳುತ್ತಿದ್ದಾರೆ.












Click it and Unblock the Notifications