ಕನ್ನಡ ನಟ ದರ್ಶನ್ ತೂಗುದೀಪ್ ವಿರುದ್ಧ ಮಾತನಾಡಿದ್ದ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಕಾರಣ... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಬಿರುಗಾಳಿ ಎದ್ದಿದ್ದು, ಪ್ರಥಮ್ ಹಾಗೂ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ದೊಡ್ಡ ಯುದ್ಧವೇ ನಡೆದು ಹೋಗುತ್ತಿದೆ. ಹೀಗೆ ಪ್ರಥಮ್ ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವಿನ ತಿಕ್ಕಾಟ ಮಂಡ್ಯ ಟು ಇಂಡಿಯಾ ಸಖತ್ ಸೌಂಡ್ ಮಾಡುತ್ತಿರುವ ಸಮಯದಲ್ಲೇ ಭೀಕರ ಘಟನೆಯೊಂದು ನಡೆದು ಹೋಗಿದೆ. ಹೀಗಿದ್ದಾಗಲೇ, ಕನ್ನಡ ನಟ ದರ್ಶನ್ ತೂಗುದೀಪ್ ವಿರುದ್ಧ ಮಾತನಾಡಿದ್ದ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಕಾರಣ...
ಬಿಗ್‌ಬಾಸ್ ಮೂಲಕ ಖ್ಯಾತಿ ಪಡೆದ ಪ್ರಥಮ್ ಸದಾ ವಿವಾದದ ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ, ಅನ್ನೋ ಆರೋಪ ಇದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ವಿರುದ್ಧ ಮಾತನಾಡಿದ ನಂತರ ಒಳ್ಳೇ ಹುಡುಗ ಅಂತಾ ಕರೆಯಲ್ಪಡುವ ಪ್ರಥಮ್ ಸಾಲು ಸಾಲು ಸಂಕಷ್ಟ ಇದೀಗ ಎದುರಿಸುತ್ತಿದ್ದಾರೆ. ಅದ್ರಲ್ಲೂ ಒಳ್ಳೇ ಹುಡುಗ ಪ್ರಥಮ್ ಜೀವಕ್ಕೆ ಕಂಟಕ ಎದುರಾಗಿತ್ತು ಅನ್ನೋ ಗಂಭೀರ ಆರೋಪವು ಕೇಳಿಬಂದ ನಂತರ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಹೀಗಿದ್ದಾಗಲೇ, ಕನ್ನಡ ನಟ ದರ್ಶನ್ ತೂಗುದೀಪ್ ವಿರುದ್ಧ ಮಾತನಾಡಿದ್ದ ಪ್ರಥಮ್ ಮುಖಕ್ಕೆ ಮಸಿ ಬಳಿಯಲು ಕಾರಣ...

ನಟ ಪ್ರಥಮ್ ಮುಖಕ್ಕೆ ಮಸಿ ಬಳಿದಿದ್ದು ಯಾರು?
ಪ್ರಥಮ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ಇದೀಗ ಬಹುದೊಡ್ಡ ಫೈಟಿಂಗ್ ಶುರುವಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಸಮಯದಲ್ಲಿ ಜೈಲಿಗೆ ಹೋಗಿದ್ದಾಗ ನಟ ಪ್ರಥಮ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಇದೇ ವಿಚಾರ ಮುಂದೆ ದೊಡ್ಡ ಗಲಾಟೆಗೆ ಕೂಡ ಕಾರಣವಾಗಿತ್ತು. ಹೀಗೆ ಈ ಘಟನೆಗಳು ನಡೆದು ಒಂದು ವರ್ಷ ಕಳೆದು ಹೋಗಿದ್ದರೂ ನಟ ಡಿ-ಬಾಸ್ ದರ್ಶನ್ ಅವರ ಫ್ಯಾನ್ಸ್ & ನಟ ಪ್ರಥಮ್ ನಡುವೆ ತಿಕ್ಕಾಟ ಕಡಿಮೆ ಆಗಿರಲಿಲ್ಲ. ಇಷ್ಟೆಲ್ಲದರ ನಡುವೆ ಮತ್ತೊಮ್ಮೆ ನಟ ಪ್ರಥಮ್ ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ಮತ್ತೆ ಗಲಾಟೆ ನಡೆದು ಎಲ್ಲೆಲ್ಲೂ ಸಂಚಲನ ಸೃಷ್ಟಿ ಆಗಿರುವಾಗಲೇ ನಟ ಪ್ರಥಮ್ ಮುಖಕ್ಕೆ ಮಸಿ ಬಳಿದಿದ್ದು ಯಾರು?
ಪ್ರಥಮ್ & ಡಿ-ಬಾಸ್ ಫ್ಯಾನ್ಸ್ ವಾರ್!
ತಮಗೆ ಜೀವ ಬೆದರಿಕೆ ಹಾಕಿದ್ದಾಗಿ, ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟ ಪ್ರಥಮ್ ಡೈರೆಕ್ಟ್ ವಾರ್ನಿಂಗ್ ಕೊಟ್ಟಿದ್ದರು. ಆದರೆ ಇದೇ ಪ್ರಥಮ್ ವಿರುದ್ಧವೇ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ಪ್ರಥಮ್ ವಿಚಾರಣೆಗೆ ಅಂತಾ ಹಾಜರಾಗಿದ್ದ ಸಮಯದಲ್ಲೇ ಮುಖಕ್ಕೆ ಮಸಿ ಬಳಿಯಲಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅಪಮಾನ ಮಾಡುವ ರೀತಿ ಪ್ರಥಮ್ ಮಾತನಾಡಿದ್ದಾರೆ ಅನ್ನೋ ಆರೋಪವು ಕೇಳಿಬಂದಿದ್ದು, ಇಂತಹ ಸಮಯದಲ್ಲೇ ದಲಿತಪರ ಸಂಘಟನೆಗಳ ಕಾರ್ಯಕರ್ತರು ಇದೀಗ ನಟ ಪ್ರಥಮ್ ಮುಖಕ್ಕೆ ಮಸಿ ಬಳಿದು ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications