Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ದೇವಸ್ಥಾನ ನಿರ್ಮಾಣ ಗ್ಯಾರಂಟಿ....
ಕನ್ನಡ ಸಿನಿಮಾ ಇಂಡಸ್ಟ್ರಿಯ ಕಿಂಗ್, ಕನ್ನಡ ಸಿನಿಮಾ ಬಾಕ್ಸ್ ಆಫೀಸ್ ಸುಲ್ತಾನ... ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ನೂರಾರು ಬಿರುದು ನೀಡಿ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಅಲ್ಲದೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯ ದೇವರು ಅಂತಾ ಕೂಡ ಡಿ-ಬಾಸ್ ಅಭಿಮಾನಿಗಳು ಹೇಳುತ್ತಾರೆ. ಹೀಗಿದ್ದಾಗಲೇ, ಡಿ-ಬಾಸ್ ದರ್ಶನ್ ತೂಗುದೀಪ್ ದೇವಸ್ಥಾನ ನಿರ್ಮಾಣ ಗ್ಯಾರಂಟಿ....
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಒರಿಜಿನಲ್ ಹೆಸರು ದರ್ಶನ್ ತೂಗುದೀಪ್ ಅಂತಾ. ಆದರೆ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಹೆಮ್ಮೆಯಿಂದ 'ಡಿ-ಬಾಸ್' ಅಂತಾ ಕರೆಯುತ್ತಾರೆ. ಈ ಮೂಲಕ ಡಿ-ಬಾಸ್... ಡಿ-ಬಾಸ್... ಅಂತ ಘೋಷಣೆ ಕೂಗುತ್ತಾರೆ. ದರ್ಶನ್ ತೂಗುದೀಪ್ ಅವರು ಎಲ್ಲೇ ಕಂಡರೂ, ಇದೇ ರೀತಿ ಡಿ-ಬಾಸ್... ಡಿ-ಬಾಸ್... ಅಂತಾ ಅಭಿಮಾನಿಗಳು ಘೋಷಣೆ ಕೂಗಿ ಗೌರವ ಸಲ್ಲಿಸುತ್ತಾ ಬಂದಿದ್ದಾರೆ....

ಮತ್ತೊಂದ್ಕಡೆ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುವ 'ಬಿಗ್‌ಬಾಸ್ ಕನ್ನಡ' ಮನೆಯಲ್ಲಿ ಕೂಡ ಡಿ-ಬಾಸ್... ಡಿ-ಬಾಸ್... ಘೋಷಣೆಯು ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ 'ಬಿಗ್‌ಬಾಸ್ ಕನ್ನಡ' ಸ್ಪರ್ಧಿ ಒಬ್ಬರು ದರ್ಶನ್ ತೂಗುದೀಪ್ ಅವರನ್ನು ಇದೀಗ 'ದೇವರು.... ದೇವರು...' ಅಂತಿದ್ದಾರೆ! ಅಲ್ಲದೆ ಈ ಸಮಯದಲ್ಲಿ ಡಿ-ಬಾಸ್ ದರ್ಶನ್ ಅವರಿಗೆ ದೇವಸ್ಥಾನ ಕಟ್ಟಲು...
ಡಿ-ಬಾಸ್ ದರ್ಶನ್ ತೂಗುದೀಪ್ ದೇವಸ್ಥಾನ...
ಹೌದು, ಬಿಗ್‌ಬಾಸ್ ಸ್ಪರ್ಧಿ ಭವ್ಯ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿ. ಹೀಗಿದ್ದಾಗ, ತಮ್ಮ ನೆಚ್ಚಿನ ನಟನ ಬಗ್ಗೆ ಸಾಕಷ್ಟು ಗೌರವ ಇಟ್ಟುಕೊಂಡಿದ್ದಾರೆ ಬಿಗ್‌ಬಾಸ್ ಸ್ಪರ್ಧಿ ಭವ್ಯ ಗೌಡ ಅವರು. ಅಲ್ಲದೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿ ಆಗಿರುವ ಭವ್ಯ ಗೌಡ ಅವರು, ದರ್ಶನ್ ತೂಗುದೀಪ್ ಅವರನ್ನು ದೇವರು ದೇವರು ಅಂತಾ ಕರೆದರು.
'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಈ ರೀತಿ ಭವ್ಯ ಗೌಡ ಅವರು ಹೇಳಿದರು. ಆಗ ಕಿಚ್ಚ ಸುದೀಪ್ ಅವರಿಗೆ ಅರ್ಥವಾಗದೆ ಸ್ಪಷ್ಟನೆ ಕೇಳಿದರು. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ದೇವಸ್ಥಾನ ನಿರ್ಮಾಣ ಗ್ಯಾರಂಟಿ ಅಂತಾನೇ ಹೇಳುತ್ತಿದ್ದಾರೆ ಅಭಿಮಾನಿಗಳು. ಮತ್ತೊಂದು ಕಡೆ ಡಿ-ಬಾಸ್ ಅವರನ್ನ ಅಭಿಮಾನಿಗಳೆಲ್ಲಾ ಇನ್ನು ಮುಂದೆ ಇದೇ ರೀತಿ ಕರೆಯುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.
ಟಿಆರ್‌ಪಿ ಬಂದಿರೋದಕ್ಕೆ ಏಕೈಕ ವ್ಯಕ್ತಿ....
ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಪ್ರಮುಖ ಭಾಗ, 'ವಾರದ ಕಥೆ, ಕಿಚ್ಚನ ಜೊತೆ' ವೇಳೆ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಟಿಆರ್‌ಪಿ ಕುರಿತು ಹೆಮ್ಮೆಯಿಂದ ಮಾತನಾಡಿದ್ದಾರೆ ಕಿಚ್ಚ ಸುದೀಪ್ ಅವರು. '12.5 ಟಿಆರ್‌ಪಿ ಬಂದಿರೋಕೆ ಏಕೈಕ ವ್ಯಕ್ತಿ ಇಲ್ಲಿ ನಿಂತಿದ್ದೀನಿ ನಾನು...' ಅಂತಾ ಕಿಚ್ಚ ಸುದೀಪ್ ಅವರು ತಮ್ಮದೇ ಸ್ಟೈಲ್‌ನಲ್ಲಿ ಹೇಳಿದ್ದಾರೆ. ಇದೀಗ ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಮತ್ತೆ ಎಲ್ಲೆಲ್ಲೂ ಸೌಂಡ್ ಮಾಡುತ್ತಿದೆ.












Click it and Unblock the Notifications