Darshan Thoogudeepa: ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್ ಆಗಲು ಹೊರಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಲಾಠಿ ಏಟು...
ದರ್ಶನ್ ತೂಗುದೀಪ್ ಅಲಿಯಾಸ್ ಅಭಿಮಾನಿಗಳ ಪಾಲಿನ ಡಿ-ಬಾಸ್ ಇಂದು ಬಳ್ಳಾರಿಯ ಜೈಲಿನಿಂದ ರಿಲೀಸ್ ಆಗುತ್ತಾರೆ, ಈ ಮೂಲಕ ಅದ್ಧೂರಿಯಾಗಿ ಅವರು ಬೆಂಗಳೂರಿಗೆ ಬಂದು ಅಭಿಮಾನಿಗಳ ಜೊತೆ ಮೆರವಣಿಗೆ ಮಾಡಲಿದ್ದಾರೆ. ಹೀಗೆ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಕಾಯುತ್ತಿದ್ದರು, ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಎದುರು ಸಾವಿರಾರು ದರ್ಶನ್ ಅಭಿಮಾನಿ ಬಳಗ ಸೇರಿದೆ. ಇಂತಹ ಹೊತ್ತಲ್ಲೇ, ದರ್ಶನ್ ತೂಗುದೀಪ್ ಜೈಲಿಂದ ರಿಲೀಸ್ ಆಗಲು ಹೊರಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಲಾಠಿ ಏಟು...
ದರ್ಶನ್ ತೂಗುದೀಪ್ ಅವರು ಅದ್ಧೂರಿಯಾಗಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಲಿದ್ದಾರೆ, ಈ ಮೂಲಕ ಡಿ-ಬಾಸ್ ಜೊತೆಗೆ ನಾವು ಕೂಡ ಸಂಭ್ರಮಿಸಬಹುದು ಅಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಿದ್ಧರಾಗಿದ್ದರು. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಆಸೆ ಈಡೇರಲೆ ಇಲ್ಲ. ದರ್ಶನ್ ತೂಗುದೀಪ್ ಅವರಿಗೆ ಇಂದು ಜಾಮೀನು ಸಿಗಲೇ ಇಲ್ಲ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಬಳಸುವ ಪರಿಸ್ಥಿತಿ ಬಂದಿತ್ತು.

ಅಭಿಮಾನಿಗಳಿಗೆ ಲಾಠಿ ರುಚಿ?
ಬಳ್ಳಾರಿ ಜೈಲಿನ ಎದುರು ಸಾಕಷ್ಟು ಸಂಖ್ಯೆಯಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗ ಸೇರಿತ್ತು. ಆಗ ಹೆಚ್ಚು ಜನರು ಸೇರುತ್ತಿದ್ದ ಕಾರಣಕ್ಕೆ ಪರಿಸ್ಥಿತಿ ಕೂಡ ಕೈಮೀರುತ್ತಿದೆ ಎಂಬ ಆತಂಕ ಮೂಡಿತ್ತು. ಈ ವೇಳೆ ಅಭಿಮಾನಿಗಳನ್ನ ನಿಯಂತ್ರಿಸಲು ಆಗದೆ ಕೊನೆಯಲ್ಲಿ ಪೊಲೀಸರು ಲಾಠಿ ಕೂಡ ಬಳಸಬೇಕಾಗಿ ಬಂತು, ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಬಳ್ಳಾರಿ ಜೈಲಿನ ಗೇಟ್ ಬಿಟ್ಟು ಹೋದರು.
ದರ್ಶನ್ ಜಾಮೀನು ಅರ್ಜಿ ವಜಾ
57ನೇ ಸಿಟಿ ಸಿವಿಲ್ ಕೋರ್ಟ್, ದರ್ಶನ್ ತೂಗುದೀಪ್ ಜಾಮೀನು ವಿಚಾರದಲ್ಲಿ ಮಹತ್ವದ ತೀರ್ಪು ನೀಡಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಆರೋಪದಡಿ ಜೈಲು ಸೇರಿರುವ ಒಟ್ಟು 06 ಆರೋಪಿಗಳಲ್ಲಿ ನಾಲ್ವರ ಜಾಮೀನು ಅರ್ಜಿ ವಜಾ ಆಗಿದೆ. ಪವಿತ್ರಾ ಗೌಡ ಮತ್ತು ದರ್ಶನ್, ನಾಗರಾಜ್ ಮತ್ತು ಲಕ್ಷ್ಮಣ್ ಅರ್ಜಿ ವಜಾ ಮಾಡಲಾಗಿದೆ. ಹೀಗಾಗಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಆಘಾತ ಎದುರಾಗಿದೆ, ಅಲ್ಲದೆ ಖುದ್ದು ದರ್ಶನ್ ತೂಗುದೀಪ್‌ಗೆ ಈ ಸುದ್ದಿ ದೊಡ್ಡ ಶಾಕ್ ನೀಡಿದೆ.
ದರ್ಶನ್ & ಧ್ರುವ ಫ್ಯಾನ್ಸ್ ಫೈಟಿಂಗ್!
ಒಂದು ಕಡೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಂದ ರಿಲೀಸ್ ಆಗಲಿದ್ದಾರೆ ಎಂಬ ಆಸೆ ಅಭಿಮಾನಿಗಳಲ್ಲಿ ಮೂಡಿರುವ ಸಮಯದಲ್ಲಿ ಫ್ಯಾನ್ಸ್ ವಾರ್ ಕೂಡ ಜೋರಾಗುತ್ತಿದೆ. ಒಟ್ನಲ್ಲಿ ಮತ್ತೆ ಫ್ಯಾನ್ಸ್ ವಾರ್ ಜೋರಾಗಿದೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೂ ಇದೇ ಫ್ಯಾನ್ಸ್ ವಾರ್ ಸಿನಿಮಾಗಳನ್ನ ಹಳ್ಳ ಹಿಡಿಯುವಂತೆ ಮಾಡುತ್ತಿದೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿವೆ. ಹೀಗಿದ್ದಾಗ ದರ್ಶನ್ ಅವರ ಜಾಮೀನು ಅರ್ಜಿ ವಜಾ ಆಗಿದ್ದು, ಮತ್ತಷ್ಟು ದಿನ ಬಳ್ಳಾರಿಯ ಜೈಲಿನಲ್ಲೇ ನಟ ದರ್ಶನ್ ಕಾಲ ಕಳೆಯಬೇಕಿದೆ.
ದರ್ಶನ್ ತೂಗುದೀಪ್ ದೂರ.. ದೂರ..?
ಪವಿತ್ರಾ ಗೌಡ ಮತ್ತು ದರ್ಶನ್ ತೂಗುದೀಪ್ ನಡುವೆ 10 ವರ್ಷಗಳ ಸುದೀರ್ಘ ಸಂಬಂಧವಿದೆ. ದರ್ಶನ್ ತೂಗುದೀಪ್‌ಗೂ ಮೊದಲು ಪವಿತ್ರಾ ಗೌಡ ಒಂದು ಮದುವೆ ಕೂಡ ಆಗಿದ್ದರಂತೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಸಂಬಂಧ ಸರಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಯಾಕಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ನಟ ದರ್ಶನ್ ತೂಗುದೀಪ್ ವಿರುದ್ಧವೇ ಪವಿತ್ರಾ ಗೌಡ ಆರೋಪ ಮಾಡಿದ್ರು ಎಂಬ ಆರೋಪವು ಕೇಳಿಬಂತು. ಪೊಲೀಸರ ಎದುರು ದರ್ಶನ್ ತೂಗುದೀಪ್ ವಿರುದ್ಧ ಪವಿತ್ರಾ ಗೌಡ ಆರೋಪ ಮಾಡಿದ್ದರಂತೆ. ಹೀಗಾಗಿ ಇಬ್ಬರೂ ಈಗ ದೂರವಾಗಲು ಇಚ್ಛಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications