Darshan Thoogudeepa: ದರ್ಶನ್ ತೂಗುದೀಪ್ ಅಭಿಮಾನಿಗಳ ವರ್ತನೆಯೇ ಮತ್ತೆ ಡಿ-ಬಾಸ್ ಜೈಲಿಗೆ ಹೋಗುವಂತೆ...

ಡಿ-ಬಾಸ್ ಜೀವನದಲ್ಲಿ ಮತ್ತೊಮ್ಮೆ ಅಲ್ಲೋಲ ಕಲ್ಲೋಲ ಸೃಷ್ಟಿ ಆಗುತ್ತಿದೆ. ಬಳ್ಳಾರಿ ಜೈಲು ಸೇರಿ ನರಳಾಡಿದ್ದ ದರ್ಶನ್ ತೂಗುದೀಪ್ ಅವರನ್ನು ಆರೋಗ್ಯದ ಸಮಸ್ಯೆ ಕಾರಣಕ್ಕೆ ಇದೀಗ ಮಧ್ಯಂತರ ಜಾಮೀನು ನೀಡಿ ರಿಲೀಸ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿಂದ ಜಾಮೀನು ಪಡೆದು ದರ್ಶನ್ ತೂಗುದೀಪ್ ರಿಲೀಸ್ ಆಗುತ್ತಿದ್ದಂತೆ ಅವರ ಅಭಿಮಾನಿಗಳ ಹೆಸರಲ್ಲಿ ಕೆಲ ಜನರ ಕಿರಿಕ್ ಜೋರಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಡಿ-ಬಾಸ್ ಅಂತ ಕರಿಯೋ, ಇಲ್ಲ ಅಂದ್ರೆ ನಿನ್ನ ಕಥೆ ಮುಗಿ.. ಹೆಂಗೋ ನೀನು ಡಿ-ಬಾಸ್ ಬಗ್ಗೆ ಯಾಕೋ ಬರೀತಿಯಾ? ನಿಂಗೆ ಬೇಕೆನೋ?? ಹಿಂಗೆ ದರ್ಶನ್ ತೂಗುದೀಪ್ ಅಭಿಮಾನಿಗಳು ಎಂಬ ಹೆಸರಲ್ಲಿ ಕೆಲವರು ಫೋನ್ ಮಾಡಿ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಸೇರಿ ಹಲವರಿಗೆ ಬೆದರಿಕೆ ಹಾಕಿರುವ ಆರೋಪ ಇದೆ. ಅದರಲ್ಲೂ ಕೊಲೆ ಬೆದರಿಕೆ & ಹಲ್ಲೆ ಬೆದರಿಕೆ ಹಾಕಿರುವ ಆರೋಪವೂ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ವಿರುದ್ಧ ಕೇಳಿ ಬಂದಿದೆ. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ ಅಭಿಮಾನಿಗಳ ವರ್ತನೆಯೇ ಮತ್ತೆ ಡಿ-ಬಾಸ್ ಜೈಲಿಗೆ ಹೋಗುವಂತೆ...

Darshan Thoogudeepa Fans Are Doing This In Karnataka For No Reason

ಡಿ-ಬಾಸ್ ಅಭಿಮಾನಿಗಳಿಂದ ಕಿರಿಕ್ ಜೋರಾಯ್ತಾ?

ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನರಳುತ್ತಿದ್ದಾರೆ. ಇಂತಹ ಸಮಯದಲ್ಲಿ ಅನಗತ್ಯವಾಗಿ ದರ್ಶನ್ ತೂಗುದೀಪ್ ಅವರು ಬೇಡದ ವಿವಾದ ಮಾಡಿಕೊಂಡು ಪರದಾಡುತ್ತಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ಅವರ ಹೆಸರು ಹೇಳಿಕೊಂಡು ಕೆಲವರು ಮಾಧ್ಯಮ ಸಿಬ್ಬಂದಿ ಅಂದ್ರೆ ಪತ್ರಕರ್ತರಿಗೆ ಸೇರಿದಂತೆ ದರ್ಶನ್ ಬಗ್ಗೆ ಮಾತನಾಡುವ ಹಲವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗಲೇ ಕೋರ್ಟ್ ಕೂಡ ಎಲ್ಲವನ್ನೂ ಗಮನಿಸುತ್ತಿದ್ದು, ದರ್ಶನ್ ತೂಗುದೀಪ್ ಮತ್ತೆ ಜೈಲಿಗೆ ಹೋಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ.

ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾದರೆ....

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಸಮಾಧಾನವಾಗಿಯೇ ಮಾತುಕತೆ ಮೂಲಕ ಎಲ್ಲವನ್ನ ಸರಿ ಮಾಡಲು ಪ್ರಯತ್ನ ಮಾಡಬೇಕು. ಅದನ್ನ ಬಿಟ್ಟು ಇದೇ ರೀತಿಯಾಗಿ ಬೆದರಿಕೆ ಹಾಕುತ್ತಿದ್ದರೆ ದರ್ಶನ್ ಅವರು ಮತ್ತೆ ಜೈಲಿಗೆ ಹೋಗುವ ಸಾಧ್ಯತೆ ಹೆಚ್ಚು ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದು ಕಡೆ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಕೂಡ ಎಲ್ಲವನ್ನೂ ಇದೀಗ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾದರೆ ಯಾರು ಹೊಣೆ?

ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿಗೆ?

ಬೆಂಗಳೂರು ಪೊಲೀಸರು ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಲು ನಿರ್ಧರಿಸಿದ್ದಾರೆ. ಇದಕ್ಕೆ ಒಂದಷ್ಟು ಸಮಯ ಹಿಡಿಯುತ್ತೆ ಎನ್ನಲಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಆರೋಗ್ಯ ಸ್ಥಿತಿ ಹಿನಾಯವಾಗಿದ್ದ ಹಿನ್ನೆಲೆ ಮಾನ್ಯ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಈಗ ನೋಡಿದರೆ ಈ ರೀತಿ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಂದ ರಿಲೀಸ್ ಆದ ನಂತರ, ಹಲವರಿಗೆ ಬೆದರಿಕೆ ಹಾಕುತ್ತಿರುವ ಆರೋಪ ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ಕೇಳಿ ಬರ್ತಿದೆ. ಬೆಂಗಳೂರು ಪೊಲೀಸರಿಗೆ ಕೂಡ ದರ್ಶನ್ ತೂಗುದೀಪ್ ಅಭಿಮಾನಿಗಳು ಆವಾಜ್ ಹಾಕಿದ್ದು, ಮುಂದೆ ಏನಾಗುತ್ತೆ? ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+