ಕರ್ನಾಟಕ ಬಂದ್... ಆಗಸ್ಟ್ 14 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಗಲಾಟೆ ನಡೆಯುತ್ತಿದೆ, ಒಂದು ಕಡೆ ಕನ್ನಡ ಸಿನಿಮಾ ರಂಗದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ದೊಡ್ಡ ಮೋಸ ಮಾಡಲಾಗುತ್ತಿದೆ ಅಂತಾ ಅಭಿಮಾನಿಗಳೆಲ್ಲಾ ಆರೋಪ ಮಾಡುತ್ತಿದ್ದಾರೆ. ಮತ್ತೊಂದು ಕಡೆ ರಾತ್ರೋ ರಾತ್ರಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಕೆಡವಿ ಹಾಕಲಾಗಿದೆ ಅಂತಾ ಕೋಟಿ, ಕೋಟಿ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಆಗಸ್ಟ್ 14 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಹೌದು, ಕನ್ನಡ ಸಿನಿಮಾ ರಂಗ ಈಗ ಒಡೆದ ಮನೆಯಾಗಿದ್ದು ನಟ & ನಟಿಯರ ವಿರುದ್ಧ ಸಾಲು & ಸಾಲು ಸಂಕಟಗಳು ಎದುರಾಗುತ್ತಿವೆ. ಇದನ್ನೆಲ್ಲಾ ನೋಡಿ ಕೋಟಿ ಕೋಟಿ ಕನ್ನಡಿಗರು ಕೂಡ ಚಿಂತೆ ಮಾಡುವಂತೆ ಆಗಿದೆ. ಕನ್ನಡ ಸಿನಿಮಾ ರಂಗಕ್ಕೆ ಏನಾಯ್ತು? ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ಕಂಟಕ ಎದುರಾಗಿದೆಯಾ? ಅನ್ನೋ ಚರ್ಚೆಗಳು ನಡೆಯುತ್ತಿವೆ. ಇದೇ ಸಮಯವನ್ನ ಪರಭಾಷಿಕರು ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಾ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪವು ಕೂಡ ಇದೆ. ಇಂತಹ ಸಮಯದಲ್ಲೇ ಕರ್ನಾಟಕ ಬಂದ್ ಬಗ್ಗೆ...

ಆಗಸ್ಟ್ 14 ಗುರುವಾರ ಶಾಲಾ & ಕಾಲೇಜುಗಳಿಗೆ...
ಅಂದಹಾಗೆ ಕನ್ನಡ ಸಿನಿಮಾ ರಂಗದಲ್ಲಿ ಮೊದಲಿಗೆ ಬರುವುದೇ ಡಾ. ರಾಜ್‌ಕುಮಾರ್ ಅವರ ಹೆಸರು, ಆ ನಂತರ ಡಾ. ವಿಷ್ಣುವರ್ಧನ್ ಮತ್ತು ಡಾ. ಅಂಬರೀಶ್ ಅವರ ಹೆಸರು ಸಹೋದರರ ರೀತಿ ರಾರಾಜಿಸಿತ್ತು. ಹೀಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಮೂವರು ತಾರೆಯರು ಮಿಂಚಿ ಮರೆಯಾಗಿದ್ದಾರೆ. ಅದ್ರಲ್ಲೂ ಸಾಹಸ ಸಿಂಹ ಅಂತ ದೊಡ್ಡ ಹೆಸರು ಮಾಡಿದ್ದ ಡಾ. ವಿಷ್ಣುವರ್ಧನ್ ಅವರಿಗೆ ಕೋಟ್ಯಂತರ ಅಭಿಮಾನಿ ಬಳಗ ಇತ್ತು. ಆದರೆ ಈಗ ಅವರೆಲ್ಲಾ ಸಿಡಿದೆದ್ದು, ದೊಡ್ಡ ಹೋರಾಟಕ್ಕೆ ಸಜ್ಜಾಗಿದ್ದಾರೆ. ರಾತ್ರೋ ರಾತ್ರಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬೆಂಗಳೂರು ಸಮಾಧಿ ಕೆಡವಿದ ಬಗ್ಗೆ ಆಕ್ರೋಶದ ಕಹಳೆ ಇದೀಗ ಮೊಳಗಿದೆ. ಹೀಗಿದ್ದಾಗಲೇ, ಕರ್ನಾಟಕ ಬಂದ್... ಆಗಸ್ಟ್ 14 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಅನ್ಯಾಯ ಅಂತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು...
ಡಾ. ವಿಷ್ಣುವರ್ಧನ್ ಅವರ ಸಮಾಧಿಗೆ ಜಾಗವಿಲ್ಲ ಎಂದು ಅಭಿಮಾನಿಗಳು ಕಣ್ಣೀರು ಹಾಕುವಂತೆ ಆಗಿದೆ ಅಂತಾ ಆಕ್ರೋಶ ಹೊರ ಹಾಕಲಾಗುತ್ತಿದೆ. ಅಲ್ಲದೆ ಬೇಕು ಅಂತಲೇ ಡಾ.ವಿಷ್ಣುವರ್ಧನ್ ಅವರ ಸಮಾಧಿ ಟಾರ್ಗೆಟ್ ಮಾಡಿರುವ ಆರೋಪ ಕೂಡ ಮಾಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೋಟಿ, ಕೋಟಿ ಅಭಿಮಾನಿಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ದೊಡ್ಡ ಹೋರಾಟ ನಡೆಸಿ & ಆ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಕೂಡ ಮುಂದಾಗಿದ್ದಾರೆ. ಹಾಗೇ ಮತ್ತೊಂದು ಕಡೆ ಆಕ್ರೋಶ ಹೊರ ಹಾಕುವ ಉದ್ದೇಶದಿಂದ ಕರ್ನಾಟಕ ಬಂದ್ ಮಾಡಬೇಕು ಅಂತಾ ಕೂಡ ಚರ್ಚೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಬೆಂಬಲ ನೀಡುತ್ತಿದ್ದಾರೆ.
ಆಗಸ್ಟ್ 14 ಗುರುವಾರ ಕರ್ನಾಟಕದ ಮೂಲೆ ಮೂಲೆಯಲ್ಲೂ ಹೋರಾಟ ಮಾಡುವ ಪ್ಲಾನ್ ಮಾಡಿ ಚರ್ಚೆ ಮಾಡಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡ್ತಾ ಇದ್ದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಇದೀಗ ದಿಢೀರ್ ಭಾರಿ ಸಂಚಲನ ಸೃಷ್ಟಿಯಾಗಿದೆ. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಈಗಾಗಲೇ ಹಲವು ಕಡೆ ಹೋರಾಟಕ್ಕೆ, ಪ್ರತಿಭಟನೆಗೆ ತಯಾರಿ ಆರಂಭಿಸಲು ಚರ್ಚೆ ನಡೆಸುತ್ತಾ ಇದ್ದಾರೆ. ಅಕಸ್ಮಾತ್ ಆಗಸ್ಟ್ 14 ಗುರುವಾರ ಕರ್ನಾಟಕದ ಮೂಲೆ ಮೂಲೆಯಲ್ಲೂ ಹೋರಾಟ ಶುರುವಾದರೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಇದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ, ಇದೇ ಕಾರಣಕ್ಕೆ ಕಾದು ನೋಡಬೇಕಿದೆ...












Click it and Unblock the Notifications