Actor Shiva Rajkumar: ನಟ ಶಿವರಾಜ್‌ಕುಮಾರ್ ಮಾತಿಗೆ ಜೈಕಾರ ಹಾಕಿದ ದರ್ಶನ್ ಅಭಿಮಾನಿಗಳು
Dr.Shiva Rajkumar: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಬೆನ್ನು ನೋವು ಹಿನ್ನೆಲೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಇನ್ನು ಅಭಿಮಾನಿಗಳು ತಮ್ಮ ಬಾಸ್‌ನನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ನಟ ಶಿವರಾಜ್‌ಕುಮಾರ್ ಕೊಟ್ಟ ಹೇಳಿಕೆಗೆ ಡಿ ಬಾಸ್ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಈ ವಿಡಿಯೋ ಇದೀಗ ಭಾರೀ ಸದ್ದು ಮಾಡುತ್ತಿದೆ.
ನಟ ಶಿವರಾಜ್‌ಕುಮಾರ್ ನಟ ದರ್ಶನ್ ಅಭಿಮಾನಿಗಳನ್ನು ಹೊಗಳುವ ಮೂಲಕ ದೊಡ್ಡತನ ಮೆರೆದಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಭೈರತಿ ರಣಗಲ್ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿದ ವೇಳೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಟ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನ್ನಾಡಿದ್ದಾರೆ. "ನಾವು ದರ್ಶನ್ ಅಭಿಮಾನಿಗಳ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ದರ್ಶನ್ ಆರಾಧ್ಯ ದೈವ. ಬೇರೆ ನಟರ ಅಭಿಮಾನಿಗಳು ಹೇಗೋ ಅವರ ಅಭಿಮಾನಿಗಳು ಕೂಡ ಹಾಗೆ ಅಲ್ಲವೇ?," ಎಂದು ಹೇಳುವ ಮೂಲಕ ದೊಡ್ಡತನವನ್ನು ಮೆರೆದಿದ್ದರು.

ಇನ್ನು ಶಿವರಾಜ್‌ಕುಮಾರ್ ದೊಡ್ಡತನ ಮೆರೆದ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ಅಷ್ಟೇ ಅಲ್ಲದೆ, ನಟ ಶಿವಣ್ಣಗೆ ಇದೀಗ ದರ್ಶನ್ ಅಭಿಮಾನಿಗಳನ್ನು ಜೈಕಾರ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
ದರ್ಶನ್ ಬದುಕು ಸದ್ಯ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆ ಸಹಜವಾಗಿ ಅವರ ಅಭಿಮಾನಿಗಳ ಮನಸಿಗೆ ನೋವಾಗಿದೆ. ಸಮಾಜ ಅವರ ನೋವಿಗೆ ಸ್ಪಂದಿಸಬೇಕಿದೆ. ಅದು ಬಿಟ್ಟು, ಉರಿಯೋ ಬೆಂಕಿಗೆ ತುಪ್ಪ ಸುರಿಯೋದು ಅಂತಾರಲ್ಲ ಹಾಗೆ ಮಾಡಬಾರದು. ಅವರನ್ನು ಸರಿಯಾದ ದಾರಿಯಲ್ಲಿ ಸಂತೈಸುವ ಕೆಲಸ ಆಗಬೇಕಿದೆ. ಅವರ ನೋವಿನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಮಾಧಾನ ಮಾಡಬೇಕಿದೆ ಎಂದು ಹೇಳುವ ಮೂಲಕ ಶಿವಣ್ಣ ಗಮನ ಸೆಳೆದಿದ್ದರು.
ಇನ್ನು ನಟ ಶಿವಣ್ಣನ ಈ ಹೇಳಿಕೆಗೆ ದರ್ಶನ್ ಅಭಿಮಾನಿಗಳು ಫಿಧಾ ಆಗಿದ್ದಾರೆ. "ನಾವು ನಟ ದರ್ಶನ್ ಅವರ ಅಪ್ಪಟ ಅಭಿಮಾನಿಗಳು. ಆದ್ರೆ, ಶಿವಣ್ಣ ಆಡಿದ ಮಾತುಗಳನ್ನು ನಾವು ಒಪ್ಪುತ್ತೇವೆ. ಶಿವಣ್ಣ ನಮ್ಮ ಭಾವನೆಗಳನ್ನು ಗೌರವಿಸಿ ಮಾತನಾಡಿದ್ದಾರೆ. ಆದ್ದರಿಂದ ನಾವೂ ಕೂಡ ಅವರ ಮಾತಿಗೆ ಗೌರವ ಕೊಡ್ತೇವೆ. ಮುಂಬರುವ ಶಿವಣ್ಣ ನಟನೆಯ ಭೈರತಿ ರಣಗಲ್ ಸಿನಿಮಾವನ್ನು ನೋಡುತ್ತೇವೆ" ಎಂದು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಪ್ರತಿಕ್ರಿಯಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ, "ನಟ ಶಿವಣ್ಣ ಮಾಡಿರುವ ಈ ಕೆಲಸವನ್ನು ಚಿತ್ರರಂಗದ ಎಲ್ಲರೂ ಒಪ್ಪಿ ಅನುಸರಿಸಬೇಕಿದೆ. ಚಿತ್ರರಂಗದಲ್ಲಿ ಒಗ್ಗಟ್ಟು ಇರಬೇಕು. ಜೊತೆಗೆ, ಯಾರದೇ ಅಭಿಮಾನಿಗಳು ನೋವಿನಲ್ಲಿದ್ದರೂ ತಕ್ಷಣಕ್ಕೆ ಸಂತೈಸುವ ಕೆಲಸ ಆಗಬೇಕೇ ಹೊರತೂ ನೋವನ್ನು ಮತ್ತಷ್ಟು ಕೆರಳಿಸುವ ಕೆಲಸ ಆಗಬಾರ್ದು. ನಾವೂ ಅಷ್ಟೇ, ದರ್ಶನ್ ಅಭಿಮಾನಿಳಾದರೂ ಎಲ್ಲರೂ ನಮ್ಮ ನೋವಿಗೆ ಸ್ಪಂದಿಸಿದರೆ, ನಾವೂ ಎಲ್ಲರ ಸಿನಿಮಾ ನೋಡುತ್ತೇವೆ," ಅಂತಲೂ ಹೇಳಿದ್ದಾರೆ ಅಂತಾ ಸುವಣ್ಣ ನ್ಯೂಸ್ ವರದಿ ಮಾಡಿದೆ.
"ನಾವು ಯಾವುದೇ ನಟನ ಅಭಿಮಾನಿಗಳೂ ಅಲ್ಲ. ಕನ್ನಡದ ಎಲ್ಲಾ ಸಿನಿಮಾಗಳನ್ನು ನೋಡುವವರು. ಶಿವಣ್ಣ ಹೇಳಿರುವುದು ಹಾಗೂ ಈಗ ನಟ ದರ್ಶನ್ ಅಭಿಮಾನಿಗಳು ಆಡುತ್ತಿರುವ ಮಾತು ಎಲ್ಲವೂ ಸರಿಯಾಗಿದೆ. ಶಿವಣ್ಣ ಅವರ ದೊಡ್ಡತನ ಮೆರೆದಿದ್ದಾರೆ," ಎಂದು ಹೇಳಿದ್ದಾರೆ. ಇನ್ನೂ ಅಭಿಮಾನಿಗಳ ಈ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ವೈರಲ್ ಆಗುತ್ತಿವೆ.












Click it and Unblock the Notifications