Darshan Thoogudeepa: ಕೊ** ಮಾಡುವ ಬೆದರಿಕೆ ಹಾಕಿದ ದರ್ಶನ್ ತೂಗುದೀಪ್ ಅಭಿಮಾನಿಯನ್ನ ಜೈಲಿಗೆ ಕಳುಹಿಸಲು...

ಡಿ-ಬಾಸ್ ದರ್ಶನ್ ತೂಗುದೀಪ್ ಹೆಸರು ಹೇಳಿಕೊಂಡು ಕೆಲವರು ಕೊಲೆ ಬೆದರಿಕೆ ಹಾಕ್ತಿದ್ದು, ಸೋಷಿಯಲ್ ಮೀಡಿಯಾದಲ್ಲೂ ಇಂತಹ ಕೆಲವರ ಹಾವಳಿ ಜಾಸ್ತಿ ಆಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಲಾಯರ್ ಜಗದೀಶ್ ಅವರಿಗೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿ ಅಂತಾ ಹೇಳಿಕೊಂಡವನು ಕೊಲೆ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಇಂತಹ ಸಮಯದಲ್ಲೇ, ಕೊ** ಮಾಡುವ ಬೆದರಿಕೆ ಹಾಕಿದ ದರ್ಶನ್ ತೂಗುದೀಪ್ ಅಭಿಮಾನಿಯನ್ನ ಜೈಲಿಗೆ ಕಳುಹಿಸಲು...

ದರ್ಶನ್ ತೂಗುದೀಪ್ ಅವರ ಹೆಸರು ಹೇಳಿಕೊಂಡು ಕಿರಿಕ್ ಮಾಡುವವರ ಸಂಖ್ಯೆ ಜಾಸ್ತಿ ಆಗ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಹಲವರಿಗೆ ಈ ರೀತಿಯಾಗಿ ಕೊಲೆ ಬೆದರಿಕೆ ಹಾಕಿರುವ ಆರೋಪ ಕೂಡ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳ ವಿರುದ್ಧ ಇದೆ. ಇಂತಹ ಸಮಯದಲ್ಲಿಯೇ ಲಾಯರ್ ಜಗದೀಶ್ ವಿರುದ್ಧ ಕೂಡ ದರ್ಶನ್ ತೂಗುದೀಪ್ ಫ್ಯಾನ್ಸ್ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇಂಥ ಸಮಯದಲ್ಲೇ ಲಾಯರ್ ಜಗದೀಶ್ ಕೂಡ ವಾರ್ನಿಂಗ್ ಕೊಟ್ಟು ಬೆದರಿಕೆ ಹಾಕುವ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳನ್ನು ಜೈಲಿಗೆ ಹಾಕಿಸುವ ಎಚ್ಚರಿಕೆ ನೀಡಿದ್ದಾರೆ!

Darshan Thoogudeepa Fan May Be Face This Challenge After Telling This To Lawyer Jagadish

'ಆಂಧ್ರ ಇಂದ ಬಂದಿರೋನು ದರ್ಶನ್'

ಲಾಯರ್ ಜಗದೀಶ್ ಅವರು ವಿಡಿಯೋ ಒಂದನ್ನ ಮಾಡಿ ದರ್ಶನ್ ತೂಗುದೀಪ್ ಅಭಿಮಾನಿಗೆ, 'ಯಾರೋ ದರ್ಶನ್‌ನ ದರ್ಶನ್ ಅನ್ನದೆ ಇನ್ನೇನು ಬಾಸ್ ಅನ್ನಬೇಕೇನೋ ಲೇ?? ಯಾರೋ.. ನಿಂಗೆ ಬಾಸು ನನಗಲ್ಲ, ನನಗೆ ನಾನೇ ಬಾಸು ಲೇ... ಅವನು ಯಾವನೋ ವಿಡಿಯೋ ಮಾಡಿ ಹಾಕಿ ಟ್ರೋಲ್ ಮಾಡ್ತೀಯಾ? ಲೇ ನಾನು ಯಾವನ್ನೂ ಬಾಸ್ ಅನ್ಕೊಂಡಿಲ್ಲ ಅಂದುಕೊಳ್ಳುವ ಅವಶ್ಯಕತೆ ಕೂಡ ನನಗೆ ಇಲ್ಲ. ಕರ್ನಾಟಕದಲ್ಲಿ ದರ್ಶನ್ ಯಾವ ಊರೋ? ಯಾವ ಊರೋ? ನಾಯ್ಡು... ಆಂಧ್ರ ಇಂದ ಬಂದಿರೋನು, ಲೇ ಕರ್ನಾಟಕದಲ್ಲಿ ಕನ್ನಡಿಗರೇ ಕಿಂಗ್ ಲೇ...' ಅಂತಾ ಫುಲ್ ಗರಂ ಆಗಿ ಮಾತನಾಡಿದ್ದಾರೆ ಲಾಯರ್ ಜಗದೀಶ್ ಅವರು.

'ನಿಮಗೆ ಗೆಣಸು ಕೀಳೋದಕ್ಕೆ ಕೆಲಸ ಇಲ್ಲ'

'ಆಮೇಲೆ ಇಷ್ಟಕ್ಕೂ ಆ ದರ್ಶನ್‌ಗೆ ನಾವು ಜಾಗ ಕೊಟ್ಟಿದ್ದೀವಿ ಅಂದ್ರೆ ಅದು ಮರ್ಯಾದಿ ಸಂಪಾದನೆ ಮಾಡಿದ್ದಾನೆ. ಅವನ ಹೆಸರು ಹೇಳಿಕೊಂಡು ಡಾನು, ಡಿ-ಬಾಸ್? ಲೇ ನಾನು ನಮ್ಮ ಅಪ್ಪ & ಅಮ್ಮನ ಬಿಟ್ಟು ಯಾರನ್ನೂ ಬಾಸ್ ಅಂದುಕೊಂಡಿಲ್ಲ. ಅಂದುಕೊಳ್ಳುವ ಅವಶ್ಯಕತೆ ಕೂಡ ಇಲ್ಲ, ನಿಮಗೆ ಗೆಣಸು ಕೀಳೋದಕ್ಕೆ ಕೆಲಸ ಇಲ್ಲ, ಟ್ರೋಲ್ ಮಾಡ್ಕೊಳಿ, ನನ್ನನ್ನು ಏನಾದರೂ ಲೇ...' ಎಂದಿದ್ದಾರೆ ಲಾಯರ್ ಜಗದೀಶ್ ಅವರು.

ಹಿಂಗೆ ಮಾತನಾಡುತ್ತಾ ದರ್ಶನ್ ತೂಗುದೀಪ್ ಒಬ್ಬ ಕೊಲೆ ಆರೋಪಿ & ನಮ್ಮ ಬಾಯಲ್ಲಿ ಬಾಸ್ ಅನಿಸೋ ತಾಕತ್ ನಿಮಗೆ ಐತಾ? ಅಂತಾ ಕೂಡ ದರ್ಶನ್ ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ್ದಾರೆ ಲಾಯರ್ ಜಗದೀಶ್ ಅವರು. ಹಾಗೇ ಕೊಲೆ ಬೆದರಿಕೆ ಹಾಕುತ್ತಿರುವವರನ್ನ ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದ್ದಾರೆ. ಇದು ಮತ್ತೊಮ್ಮೆ ಕರ್ನಾಟಕದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುತ್ತಿದೆ.

ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿಗೆ?

ಬೆಂಗಳೂರು ಪೊಲೀಸರು ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಲು ನಿರ್ಧರಿಸಿದ್ದಾರೆ. ಇದಕ್ಕೆ ಒಂದಷ್ಟು ಸಮಯ ಹಿಡಿಯುತ್ತೆ ಎನ್ನಲಾಗಿದೆ ಡಿ-ಬಾಸ್ ದರ್ಶನ್ ತೂಗುದೀಪ್ ಆರೋಗ್ಯ ಸ್ಥಿತಿ ಹಿನಾಯವಾಗಿದ್ದ ಹಿನ್ನೆಲೆ ಮಾನ್ಯ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಈಗ ನೋಡಿದರೆ ಈ ರೀತಿ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಂದ ರಿಲೀಸ್ ಆದ ನಂತರ, ಹಲವರಿಗೆ ಬೆದರಿಕೆ ಹಾಕುತ್ತಿರುವ ಆರೋಪ ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ಕೇಳಿ ಬರ್ತಿದೆ. ಬೆಂಗಳೂರು ಪೊಲೀಸರಿಗೆ ಕೂಡ ದರ್ಶನ್ ತೂಗುದೀಪ್ ಅಭಿಮಾನಿಗಳು ಆವಾಜ್ ಹಾಕಿದ್ದು, ಮುಂದೆ ಏನಾಗುತ್ತೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+