Darshan Thoogudeepa: ಆಸ್ಪತ್ರೆಯಿಂದ ಡಿ-ಬಾಸ್ ದರ್ಶನ್ ಡಿಸ್ಚಾರ್ಜ್, ಫ್ಯಾನ್ಸ್ ನಿಯಂತ್ರಿಸಲು ಪೊಲೀಸರ ಹರಸಾಹಸ!
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ, ಕೋಟಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಬೆನ್ನು ನೋವಿನ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಡಿಸ್ಚಾರ್ಜ್ ಆಗಿ ಹೊರಗೆ ಬರುತ್ತಿದ್ದಂತೆ ಏನಾಯ್ತು ಗೊತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರ ತಪ್ಪೇ ಇಲ್ಲ, ಹೀಗಿದ್ದರೂ ಅವರಿಗೆ ಬೇಕು ಅಂತ ಸಮಸ್ಯೆ ಮಾಡಲಾಗಿದೆ ಅನ್ನೋದು ಡಿ-ಬಾಸ್ ಅಭಿಮಾನಿಗಳ ಆರೋಪ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ರು. ಆದರೆ ಆ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳ ಕುತಂತ್ರದ ಹಿನ್ನೆಲೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಗೆ ಹೋಗುವಂತೆ ಆಗಿತ್ತು ಎಂಬ ಭಾರಿ ಗಂಭೀರ ಆರೋಪ ಕೇಳಿಬಂತು.

ಅಭಿಮಾನಿಗಳ ಸಾಗರ ನಿಯಂತ್ರಿಸಲು ಪೊಲೀಸರು...
ಇಷ್ಟೆಲ್ಲ ಕಂಟಕ ಎದುರಿಸಿದ್ದ ಡಿ-ಬಾಸ್ ದರ್ಶನ್ ಅವರಿಗೆ, ಜಾಮೀನು ಅಂದ್ರೆ ಬೇಲ್ ಸಿಕ್ಕಿದೆ. ಈ ಕಾರಣಕ್ಕೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಗೆ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರನ್ನ ಲಕ್ಷ ಲಕ್ಷ ಅಭಿಮಾನಿಗಳು ಸ್ವಾಗತಿಸಿದ್ದಾರೆ.
ಅಲ್ಲದೆ ಹೀಗೆ ತಮ್ಮ ನೆಚ್ಚಿನ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊರಗೆ ಬರುತ್ತಿದ್ದಂತೆ ಲಕ್ಷಾಂತರ ಅಭಿಮಾನಿಗಳು ಸೇರಿದ್ದು ಅಭಿಮಾನಿಗಳ ಸಾಗರವನ್ನ ನಿಯಂತ್ರಿಸಲು ಪೊಲೀಸರು ಪರದಾಡುವಂತೆ ಆಗಿದೆ. ಮತ್ತೊಂದು ಕಡೆಯಲ್ಲಿ ರಾಜರಾಜೇಶ್ವರಿ ನಗರದ ಮನೆ ಬಳಿ ಭಾರಿ ಭದ್ರತೆ ಒದಗಿಸಲಾಗಿದೆ.
ನೇರವಾಗಿ ಕೋರ್ಟ್‌ಗೆ ತೆರಳಿದ ನಟ ದರ್ಶನ್!
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ, ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಂದು ಡಿಸ್ಚಾರ್ಜ್ ಆಗಿ ಹೊರ ಹೋಗಿ ನೇರ ರಾಜರಾಜೇಶ್ವರಿ ನಗರದ ಮನೆಗೆ ತಲುಪಬಹುದು ಎನ್ನಲಾಗಿತ್ತು. ಆದರೆ ಇವತ್ತು ಆಗಿದ್ದೇ ಬೇರೆ, ಎಲ್ಲರೂ ಅಂದುಕೊಂಡಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು ಬಿಜಿಎಸ್ ಆಸ್ಪತ್ರೆ ವೈದ್ಯರ ಪರ್ಮಿಷನ್ ಪಡೆದು ಡಿಸ್ಚಾರ್ಜ್ ಆದರು. ಆದರೆ ಆಸ್ಪತ್ರೆಯಿಂದ ನೇರ ಕೋರ್ಟ್‌ಗೆ ತೆರಳಿದರು!
ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ಹಾಜರ್ ಆಗಿದ್ದ ನಟ ದರ್ಶನ್ ತೂಗುದೀಪ್ ಅವರು ಈ ಸಮಯದಲ್ಲಿ, ತಮ್ಮ ಜಾಮೀನು ಅರ್ಜಿಯ ಬಾಂಡ್‌ಗಳಿಗೆ ಸಹಿ ಹಾಕಿದರು. ಇದೇ ವೇಳೆ, ನಟ ದರ್ಶನ್ ತೂಗುದೀಪ್ ಅವರ ಜಾಮೀನಿಗೆ ಇಬ್ಬರು ಶ್ಯೂರಿಟಿಗೆ ಸಹಿ ಹಾಕಿದರು. ಎಲ್ಲಾ ಪ್ರಕ್ರಿಯೆ ಮುಗಿಸಿ, ನಟ ದರ್ಶನ್ ತೂಗುದೀಪ್ ಅವರು ನೇರವಾಗಿ ಮತ್ತೆ ಬಿಜಿಎಸ್ ಆಸ್ಪತ್ರೆಗೆ ತೆರಳಲಿದ್ದಾರೆ ಎನ್ನಲಾಗಿದೆ.
ಡಿ-ಬಾಸ್ & ಪವಿತ್ರಾ ಗೌಡಗೆ ರಿಲೀಫ್!
ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದಿರುವ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ಒಂದಷ್ಟು ರಿಲೀಫ್ ಸಿಕ್ಕಿದೆ. ಆದರೆ ಈ ವಿಚಾರದಲ್ಲಿ ಪವಿತ್ರಾಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಏನೆಲ್ಲಾ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್‌ರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮುಂದಿನ ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ಮೂಲಕ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಘಟ್ಟ ತಲುಪಿದಂತೆ ಆಗಿದೆ.












Click it and Unblock the Notifications