Darshan Thoogudeepa: ಬಕೇಟ್.. ಬಕೇಟ್.. ದರ್ಶನ್ ತೂಗುದೀಪ್ ಅವರು ರಿಲೀಸ್ ಆಗ್ತಿದ್ದಂತೆ ಕೆಲ ನಟ & ನಟಿಯರ ಬಕೇಟ್?

ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಹೀಗೆ ಕರ್ನಾಟಕದ ಮೂಲೆ ಮೂಲೆಯಲ್ಲೂ ಇದೀಗ ಅಭಿಮಾನಿಗಳು ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ಜೈಕಾರ ಹಾಕುತ್ತಿದ್ದಾರೆ. ಹೀಗೆ ದರ್ಶನ್ ತೂಗುದೀಪ್ ಅವರ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ ಕೋಟಿ ಕೋಟಿ ಅಭಿಮಾನಿ ಬಳಗ. ಆದರೆ ಇಂತಹ ಸಮಯದಲ್ಲೇ, ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋಗಿದ್ದಾಗ ಅವರನ್ನು ನೋಡಲು ಹೋಗದ. ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಇದ್ದ ಸಮಯದಲ್ಲಿ ಒಂದೇ ಒಂದು ಪದವನ್ನೂ ಮಾತನಾಡದ ಕನ್ನಡದ ಕೆಲವು ನಟ & ನಟಿಯರು ದಿಢೀರ್ ಬಕೇಟ್ ಹಿಡಿಯಲು...

131 ದಿನಗಳ ನಂತರ ಇದೀಗ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಘೋಷಣೆ ಜೋರಾಗಿದೆ. ಯಾಕಂದ್ರೆ ಜೈಲು ಸೇರಿದ 131 ದಿನಗಳ ನಂತರ ಇದೀಗ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಹೊರಗೆ ಬರಲಿದ್ದಾರೆ. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟ್ಯಂತರ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿದ್ದಾರೆ. ಮತ್ತೊಂದ್ಕಡೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕನ್ನಡದ ಕೆಲವು ನಟ & ನಟಿಯರ ವಿರುದ್ಧ ಫುಲ್ ಗರಂ ಆಗಿದ್ದು, ಸರಿಯಾಗೇ ಬೆಂಡು ಎತ್ತುತ್ತಿದ್ದಾರೆ!

Darshan Thoogudeepa Coming Out Of Ballari And This Is How The Sandalwood Celebrities Reacted

ಬಕೇಟ್.. ಬಕೇಟ್.. ಬಕೇಟ್..?

ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲು ಸೇರಿ ಸಾಕಷ್ಟು ಯಾತನೆ ಅನುಭವಿಸಿದ್ದಾರೆ. ಅಲ್ಲದೆ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ಮರೆಯಲು ಆಗದ ಘಟನೆಗಳೂ ನಡೆದು ಹೋಗಿವೆ. ಹೀಗೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲು ಸೇರಿ ನರಳುವ ಸಮಯದಲ್ಲಿ ಕನ್ನಡದ ಕೆಲವೇ ಕೆಲವು ನಟ & ನಟಿಯರು ಜೈಲಿಗೆ ಭೇಟಿ ನೀಡಿ ಮಾತನಾಡಿಸಿದ್ದರು. ಆದ್ರೆ ಇನ್ನೂ ಕೆಲವರು ದರ್ಶನ್ ತೂಗುದೀಪ್ ಅವರ ಬಗ್ಗೆ ಹೇಳಿಕೆ ನೀಡುವುದಕ್ಕೆ ಕೂಡ ಹಿಂದೆ & ಮುಂದೆ ಯೋಜನೆ ಮಾಡಿದ್ದ ವಿಡಿಯೋ ವೈರಲ್ ಆಗಿದ್ದವು.

ಹೀಗೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ಇದ್ದಾಗ ಯಾವುದೇ ರೀತಿ ಪ್ರತಿಕ್ರಿಯೆ ನೀಡದ ಕನ್ನಡದ ಕೆಲವು ನಟ & ನಟಿಯರು ಈಗ ಮಾತ್ರ, ದರ್ಶನ್ ತೂಗುದೀಪ್ ಅವರನ್ನು ಹೊಗಳುತ್ತಿದ್ದಾರೆ. ಅಲ್ಲದೆ ದರ್ಶನ್ ತೂಗುದೀಪ್ ಅವರನ್ನು ದೇವರು ಅಂತಿದ್ದಾರೆ. ಇವರೆಲ್ಲ ಇಷ್ಟು ದಿನ ಎಲ್ಲಿ ಹೋಗಿದ್ದರು? ನಮ್ಮ ಡಿ-ಬಾಸ್ ಜೈಲಿನಲ್ಲಿ ನರಳುವಾಗ ಯಾಕೆ ಅವರು ನಾಪತ್ತೆ ಆಗಿದ್ದರು? ಅಂತಾ ಇದೀಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪ್ರಶ್ನೆಯ ಕೇಳುತ್ತಿದ್ದಾರೆ.

131 ದಿನಗಳಿಂದ ಸೆಂಟ್ರಲ್ ಜೈಲಿನಲ್ಲಿ...

ದರ್ಶನ್ ತೂಗುದೀಪ್ ಅವರು ಕಳೆದ 131 ದಿನಗಳಿಂದ ಸೆಂಟ್ರಲ್ ಜೈಲಿನಲ್ಲಿ ಪರದಾಡುತ್ತಿದ್ರು. ಮೊದಲಿಗೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದ ದರ್ಶನ್ ತೂಗುದೀಪ್ ಅವರು ಆ ನಂತರ ಬಳ್ಳಾರಿ ಜೈಲು ಸೇರಿದ್ದರು. ಈಗ ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಆಗುತ್ತಿದ್ದು, ಫ್ಯಾನ್ಸ್ ಈ ಸಮಯದಲ್ಲಿ ಭರ್ಜರಿಯಾಗಿ ದರ್ಶನ್ ಅವರಿಗೆ ಸ್ವಾಗತ ಕೋರಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಪಟಾಕಿ ಕೂಡ ಖರೀದಿ ಮಾಡಲಾಗಿದೆ ಎಂಬ ಸುದ್ದಿ ಈಗ ಹಲ್‌ಚಲ್ ಎಬ್ಬಿಸಿದೆ.

ಡಿ-ಬಾಸ್ ಬೇಗ ಗುಣಮುಖರಾಗಲಿ...

ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+