Darshan Thoogudeepa: ಪವಿತ್ರಾ ಗೌಡ ಮತ್ತೆ ಗರ್ಭಿಣಿ? ಪರಪ್ಪನ ಅಗ್ರಹಾರ ಜೈಲಿನ ಕೋಣೆಗಳಲ್ಲಿ ಹೊಸ ಸಂಚಲನ!

ದರ್ಶನ್ ತೂಗುದೀಪ್ ಅವರ ಅತಿ ಆಪ್ತ ಗೆಳತಿ & ಕನ್ನಡ ಸಿನಿಮಾ ರಂಗದ ಮಾಜಿ ನಟಿ ಆಗಿರುವ ಪವಿತ್ರಾ ಗೌಡ ಇದೀಗ ಕೊಲೆ ಆರೋಪ ಹೊತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ನುಂಗುತ್ತಿದ್ದಾರೆ. ಪವಿತ್ರಾ ಗೌಡ ಮಾತು ಕೇಳಿ ದರ್ಶನ್ & ತಂಡ ಕೂಡ ಜೈಲು ಸೇರಿದೆ ಎನ್ನುವ ಆರೋಪಗಳ ನಡುವೆ ಇದೀಗ ಪವಿತ್ರಾ ಗೌಡ ಮತ್ತೊಮ್ಮೆ ಪ್ರೆಗ್ನೆಂಟ್ ಅಂದ್ರೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ!

ದರ್ಶನ್ ತೂಗುದೀಪ್ & ಪವಿತ್ರಾ ಗೌಡ ರೇಣುಕಾಸ್ವಾಮಿ ಎಂಬ ವ್ಯಕ್ತಿ ಕೊಲೆ ಕೇಸ್‌ನಲ್ಲಿ ಮುಖ್ಯ ಆರೋಪಿಗಳಾಗಿ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಕಂಬಿಗಳ ಹಿಂದೆ ಈ ಇಬ್ಬರು ನರಳುತ್ತಿದ್ದಾರೆ. ಹೀಗಿದ್ದಾಗ ಹೊಸ ಸುದ್ದಿಯೊಂದು ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಓಡಾಡುವ ಜೊತೆಗೆ ಪರಪ್ಪನ ಅಗ್ರಹಾರದ ಜೈಲಿನ ಕೋಣೆಗಳಲ್ಲೂ ಸಂಚಲನ ಸೃಷ್ಟಿ ಮಾಡುತ್ತಿದೆ. ಹೀಗೆ, ಭಾರಿ ದೊಡ್ಡ ಸಂಚಲನ ಸೃಷ್ಟಿ ಆಗಲು ಕಾರಣ 'ಪವಿತ್ರಾ ಗೌಡ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಂತೆ' ಅನ್ನೋ ಸುದ್ದಿ! ಹಾಗಾದ್ರೆ ಈ ಸುದ್ದಿ ನಿಜಾನಾ? ಪವಿತ್ರಾ ಗೌಡ ಈಗ 2ನೇ ಮಗುವಿನ ನಿರೀಕ್ಷೆ ಇಟ್ಟುಕೊಂಡಿದ್ದಾರಾ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

Darshan Thoogudeepa Close Friend Pavithra Gowda Is On Trend Again For This Reason

ಪವಿತ್ರಾ ಗೌಡ ಈಗ ಪ್ರೆಗ್ನೆಂಟ್?

ಹೌದು, ಇದೀಗ ಪವಿತ್ರಾ ಗೌಡ ಅವರು ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಸೋಷಿಯಲ್ ಮೀಡಿಯಾ ವೇದಿಕೆಯಿಂದ ಹಿಡಿದು ಗಾಂಧಿ ನಗರದ ಗಲ್ಲಿ ಗಲ್ಲಿಗಳಲ್ಲಿ ಕೂಡ ಭಾರಿ ದೊಡ್ಡ ಚರ್ಚೆ ಶುರು ಆಗುವಂತೆ ಮಾಡಿದೆ. ಅಷ್ಟಕ್ಕೂ ಪವಿತ್ರಾ ಗೌಡ ಅವರಿಗೆ ಈಗಾಗಲೇ ಒಬ್ಬ ಮಗಳು ಇದ್ದು, ಮೊದಲ ಗಂಡನಿಂದ ಪವಿತ್ರಾ ಗೌಡ ಒಂದು ಮಗುವನ್ನ ಪಡೆದಿದ್ದಾರೆ. ಆದರೆ ಇದೀಗ ಪವಿತ್ರಾ ಗೌಡ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ಪವಿತ್ರಾ ಗೌಡ ಇದೀಗ 2ನೇ ಮಗು ನಿರೀಕ್ಷೆಯಲ್ಲಿ ಇದ್ದಾರೆ ಎಂಬ ಗಾಳಿ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಟ್ರೋಲ್ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

ಕಿಡಿಗೇಡಿ ಕೃತ್ಯಕ್ಕೆ ಸುಳ್ಳು ಆರೋಪ?

ಒಟ್ನಲ್ಲಿ ಇದು ಗಾಳಿ ಸುದ್ದಿನಾ? ಅಥವಾ ನಿಜವಾದ ಸುದ್ದಿನಾ? ಅನ್ನೋ ಕುತೂಹಲ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಮೂಡಿದೆ. ಹೀಗಾಗಿ ಈ ಕುರಿತು ಚರ್ಚೆ ಕೂಡ ಜೋರಾಗಿದೆ. ಆದ್ರೆ ಇಲ್ಲಿಯವರೆಗೂ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಕ್ಷಣಕ್ಕೊಂದು ಸುದ್ದಿ & ಊಹಾಪೋಹ ಸೃಷ್ಟಿ ಆಗುತ್ತಿದೆ. ಕಳೆದ 2 ದಿನಗಳಿಂದ ಈ ಕುರಿತು ನಿರಂತರವಾಗಿ ಪೋಸ್ಟ್ & ವಿಡಿಯೋ ವಾರ್ ಕೂಡ ಶುರುವಾಗಿದೆ.

ಮತ್ತೊಂದು ಕಡೆ ಪವಿತ್ರಾ ಗೌಡ ಅವರು ಇನ್ನೊಂದು ಮಗು ಪಡೆಯಲು ಪ್ಲಾನ್ ಮಾಡಿದ್ರು ಅಂತಾ, ಕೂಡ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಾ ಇದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೊತೆ ಆರೋಪಗಳ ಸುರಿಮಳೆ ಶುರುವಾಗಿದೆ. ಹೀಗಾಗಿ ಈ ಗಾಳಿ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಈಗ ಕೆಂಡದ ರೀತಿ ವೇಗವಾಗಿ ಹಬ್ಬುತ್ತಿದೆ.

ಮಾವಿನ ಕಾಯಿ ಕೇಳಿದ್ದರಾ ಪವಿತ್ರಾ ಗೌಡ?

ಪೊಲೀಸ್ ವಿಚಾರಣೆಯ ವೇಳೆ ಪವಿತ್ರಾ ಗೌಡ ಮಾವಿನ ಕಾಯಿ ಕೇಳಿದ್ದರು ಎಂಬ ಸುದ್ದಿ ಕೂಡ ಈಗ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಆದರೆ, ಪವಿತ್ರಾ ಗೌಡ ಮಾವಿನ ಕಾಯಿ ಕೇಳಿದ್ದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಅಕಸ್ಮಾತ್ ಪವಿತ್ರಾ ಗೌಡ ಮಾವಿನ ಕಾಯಿ ಕೇಳಿದ್ದರೆ ಅದು ಪೊಲೀಸ್ ಮೂಲಗಳಿಂದ ಖಚಿತವಾಗುತ್ತಿತ್ತು. ಆದರೆ ಆ ರೀತಿ ಯಾವುದೇ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿಲ್ಲ. ಹೀಗಿದ್ದರು ಕೂಡ ಯಾರೋ ಕಿಡಿಗೇಡಿಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಗರ್ಭಿಣಿ ಅಂತಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಪವಿತ್ರಾ ಗೌಡ ಪ್ರೆಗ್ನೆಂಟ್ ಆಗಿರುವ ಬಗ್ಗೆ ಈವರೆಗೂ ಯಾವುದೇ ಪಕ್ಕಾ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಇದು ಸುಳ್ಳು ಸುದ್ದಿ ಎಂಬ ಆರೋಪ ಕೇಳಿಬಂದಿದೆ.

ದರ್ಶನ್ ವಿರುದ್ಧ ತಿರುಗಿಬಿದ್ದ ಪವಿತ್ರಾ ಗೌಡ?

ಇದೀಗ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುಲಭವಾಗಿಯೇ ಹೊರಗೆ ಬರುವ ಅವಕಾಶಗಳು ಇವೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ. ಹೀಗಿದ್ದಾಗ ನಟ ದರ್ಶನ್ ವಿರುದ್ಧ ಪವಿತ್ರಾ ಗೌಡ ಹೇಳಿಕೆಗಳನ್ನ ನೀಡುತ್ತಿದ್ದಾರೆ, ಜೈಲಿನಿಂದಲೇ ಹೀಗೆ ಪವಿತ್ರ ಗೌಡ ಹೊಸ ಕುತಂತ್ರ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಎಲ್ಲಾ ಕಾರಣಕ್ಕೆ ಇದೀಗ ನಟ ದರ್ಶನ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವುದು ಕಷ್ಟದ ಸಂಗತಿ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.

ತುಮಕೂರಿಗೆ ದರ್ಶನ್ ಶಿಫ್ಟ್ ಗ್ಯಾರಂಟಿ?

ನಟ ದರ್ಶನ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ಹೀರೋ ಆಗಿ ನೂರಾರು ಕೋಟಿ ರೂಪಾಯಿ ಸಂಪಾದಿಸಿದ್ದರು. ಅದ್ರಲ್ಲೂ ನಟ ದರ್ಶನ್ ಸಿನ್ಮಾ ಬರುತ್ತೆ ಅಂದ್ರೆ ವರ್ಷಗಟ್ಟಲೇ ಅಭಿಮಾನಿ ಬಳಗ ಕಾಯುತ್ತಾ ಕೂರುತಿತ್ತು. ಹೀಗಿದ್ದಾಗ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟವರಂತೆ ಎಡವಟ್ಟು ಮಾಡಿಕೊಂಡು ಇದೀಗ ದರ್ಶನ್ ಜೈಲಿಗೆ ಹೋಗಿದ್ದಾರೆ ಅನ್ನೋದು ಅವರ ಅಭಿಮಾನಿಗಳ ಕೊರಗು. ಈ ಸಮಯಕ್ಕೇ ಹೊಸ ಸಂಚಲನ ಸೃಷ್ಟಿ ಆಗಿದೆ. ಅದು ಏನೆಂದ್ರೆ ನಟ ದರ್ಶನ್‌ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನೇರ ತುಮಕೂರಿಗೆ ಶಿಫ್ಟ್ ಮಾಡಲು ತಯಾರಿ ನಡೆದಿದೆ ಎಂಬ ಸುದ್ದಿ ಎಲ್ಲೆಲ್ಲೂ ಹಬ್ಬಿದೆ. ಈ ಮಧ್ಯೆ, ತುಮಕೂರು ಜೈಲಲ್ಲೂ ಬೇಕಾದ ಸಿದ್ಧತೆ ಸಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿದೆ.

ಸುಳ್ಳು ಸುದ್ದಿಗಳು ಬಲು ಜೋರು!

ದರ್ಶನ್ ತೂಗುದೀಪ್‌ಗೆ ಇದೀಗ ತುಂಬಾ ಕಷ್ಟದ ಸಮಯ. ಹೊರಗಡೆ ಹೀರೋ ಆಗಿ ಮೆರೆದಿದ್ದ & ಮನಸ್ಸಿಗೆ ಬಂದಂತೆ ಹಣ ಖರ್ಚು ಮಾಡಿ ಫಾರಿನ್ ಸುತ್ತಾಡಿ ಬರುತ್ತಿದ್ದ ದರ್ಶನ್‌ಗೆ ಈಗ ಜೈಲು ಊಟವೇ ಗತಿ. ರಾಗಿ ಮುದ್ದೆ ಉಂಡು & ಕಂಬಿ ಎಣಿಸಿ ಮಲಗಬೇಕಾದ ಸಮಯ. ಹೀಗಾಗಿ ನಟ ದರ್ಶನ್ ಆದಷ್ಟು ಬೇಗ ಹೊರಗಡೆ ಬರಲು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ, ನಟ ದರ್ಶನ್ ಅವರು ತುಮಕೂರು ಜೈಲಿಗೆ ಶಿಫ್ಟ್ ಆಗಬಹುದು ಎಂಬ ಸುಳ್ಳು ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಆದರೆ ಈ ಕುರಿತು ಈವರೆಗೂ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

ದರ್ಶನ್ ವಿರೋಧಿಗಳ ಆರೋಪ ಏನು?

ಓದಿನಲ್ಲಿ ಮುಂದೆ ಇರದ ದರ್ಶನ್ ಅವರ ಬದುಕಿಗೆ ಏನಾದರೂ ಒಂದು ದೊಡ್ಡ ಆಸರೆ ಆಗಬೇಕು, ಮಗ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಅನ್ನೋದು ದರ್ಶನ್ ಅವರ ತಾಯಿ ಅವರ ಆಸೆ ಆಗಿತ್ತಂತೆ. ಇದೇ ಕಾರಣಕ್ಕೆ ದರ್ಶನ್ ಅವರ ತಾಯಿ ಮಗನಿಗೆ ಬೆಂಬಲ ನೀಡಿದ್ದರು. ಹೀಗಿದ್ದರೂ ದರ್ಶನ್ ಮಾತ್ರ ತಂದೆಗೆ ತಕ್ಕ ಮಗ ಆಗಲಿಲ್ಲ ಅಂತಾ ಇದೀಗ ಅವರ ವಿರೋಧಿಗಳು, ಆರೋಪ ಮಾಡುತ್ತಿದ್ದಾರೆ. ಹಾಗಾದ್ರೆ ಇಂತಹ ಗಂಭೀರ ಆರೋಪ ಯಾಕೆ?

ಅಪ್ಪನ ಹೆಸರು ಉಳಿಸದ ದರ್ಶನ್?

ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ್ ಅವರು ಕೆಲವು ದಿನಗಳ ಹಿಂದಷ್ಟೇ ನೀಡಿರುವ, ಖಾಸಗಿ ಸಂದರ್ಶನದ ವೇಳೆ ತಮ್ಮ ತಂದೆ ಹೇಳಿದ್ದ ಮಾತುಗಳನ್ನ ಬಿಡಿಸಿಟ್ಟಿದ್ದಾರೆ. ಹಾಗೇ ಈ ವೇಳೆ ಮೇರುನಟ ತೂಗುದೀಪ್ ಶ್ರೀನಿವಾಸ್ ಅವರಿಗೆ ದರ್ಶನ್ ಮೇಲೆ ಯಾಕೆ ಅನುಮಾನ ಇತ್ತು ಅನ್ನೋ ಮಾತನ್ನೂ ವಿವರಿಸಿ ಹೇಳಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿ ತೂಗುದೀಪ್ ಶ್ರೀನಿವಾಸ್ ಅವರು ದೊಡ್ಡ ಹೆಸರು ಸಂಪಾದನೆ ಮಾಡಿದ್ರು ಆದರೆ ತಮ್ಮ ಮಕ್ಕಳಾದ ದರ್ಶನ್ & ದಿನಕರ್ ಆಗ ಸಿನಿಮಾ ಇಂಡಸ್ಟ್ರಿಗೆ ಬಂದರೆ ಹೆಸರು ಹಾಳಾಗುವ ಭಯ ಅವರಿಗೆ ಇತ್ತಂತೆ. ಹೀಗಿದ್ದಾಗ ದಿನಕರ್ ತೂಗುದೀಪ್ ಮಾತ್ರ ತಂದೆಯ ಹೆಸರನ್ನು ಉಳಿಸಿ ಬೆಳೆಸಿದ್ದಾರೆ. ಆದರೆ ದರ್ಶನ್ ಮಾತ್ರ ತಂದೆಗೆ ತಕ್ಕ ಮಗನೇ ಆಗಲಿಲ್ಲ ಎಂದು ಇದೀಗ ದರ್ಶನ್ ವಿರೋಧಿಗಳು ಆರೋಪ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+