ರೊನಾಲ್ಡೋ ಬಗ್ಗೆ ಮಾತನಾಡಿ ಫುಲ್ ಟ್ರೋಲ್ ಆಗಿದ್ದ ಕೊಲೆ ಆರೋಪಿ ದರ್ಶನ್.!
Darshan Thoogudeepa case: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಬಂಧನವಾಗಿದ್ದು, ಇದು ಬರೀ ರಾಜ್ಯ ಅಲ್ಲದೆ, ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ನಟ ದರ್ಶನ್ ಮೊದಲೆಲ್ಲ ಇಂಟರ್‌ವ್ಯೂವ್‌ಗಳಲ್ಲಿ ಕೊಡುತ್ತಿದ್ದ ದುರಂಹಕಾರದ ಹೇಳಿಕೆಗಳು ಇದೀಗ ಒಂದೊಂದೇ ಮುನ್ನೆಲೆಗೆ ಬರುತ್ತಿವೆ. ಇದರಲ್ಲೊಂದಾದ ಅಂತಾರಾಷ್ಟ್ರೀಯ ಪುಟ್ಬಾಲ್ ಆಟಗಾರರೊಬ್ಬರ ಕೈ ಗಡಿಯಾರದ ಹೇಳಿಕೆಯನ್ನು ಎಳೆತಂದಿದ್ದು, ಇದೀಗ ಇದು ಭಾರೀ ವೈರಲ್ ಆಗುತ್ತಿದೆ.
ಕ್ರಿಸ್ಟಿಯಾನೋ ರೊನಾಲ್ಡೊ ಒಬ್ಬ ಫ್ರಸಿದ್ದ ಪೋರ್ಚುಗೀಸ್ ಫುಟ್ಬಾಲ್ ಆಟಗಾರರಾಗಿದ್ದಾರೆ. ಇವರು ಕ್ರೀಡಾಂಗಣಕ್ಕೆ ಕಾಲಿಟ್ಟರೆ ಸಾಕು ಎದುರಾಳಿಗಳಿಗೆ ನಡುಕ ಶುರು ಗ್ಯಾರಂಟಿ. ಅಷ್ಟರ ಮಟ್ಟಿಗೆ ತಲೆ ಉಪಯೋಗಿಸಿ ಪುಟ್ಬಾಲನ್ನು ಕಾಲಿನಲ್ಲಿ ಬುಗರಿಯಂತೆ ಆಟ ಆಡಿಸುತ್ತಿದ್ದರು. ಕ್ರೀಡಾಂಗಣದಲ್ಲಿ ಇವರ ಬಳಿಗೆ ಬಾಲ್ ಹೋತೆಂದರೆ ಮುಗಿತು ಅದು ಗೋಲ್ ಫಿಕ್ಸ್ ಎನ್ನುವ ಲೆಕ್ಕಾಚಾರದಲ್ಲಿ ಎದುರಾಳಿ ತಂಡದವರ ತಲೆಗೆ ಬಂದುಬಿಡುತ್ತದೆ. ಅಲ್ಲದೆ, ಅವರು ಹೊಡೆಯುವ ಗೋಲ್ ತಡೆಯಬೇಕೆಂದರೆ ಕಷ್ಟಸಾಧ್ಯ.

ಇವರು ಆರಂಭದಲ್ಲಿ ತುಂಬಾ ಬಡಕುಟುಂಬದಿಂದ ಬೆಳೆದು ಬಂದವರಾಗಿದ್ದು, ಪುಟ್ಬಾಲ್ ಕ್ರೀಡೆಯಲ್ಲಿ ಇಡೀ ಜಗತ್ತೇ ತನ್ನ ಕಡೆ ತಿರುಗಿ ನೋಡುವಂತೆ ಮಾಡುತ್ತಾರೆ. ಅಲ್ಲದೆ, ಇತಿಹಾಸದ ಪುಟಗಳಲ್ಲಿಯೂ ಇವರ ಸಾಧನೆಗಳ ಸರಮಾಲೆಯೇ ಮೂಡಿವೆ. ಕ್ರೀಡೆ ಅಷ್ಟೇ ಅಲ್ಲದೆ, ಇವರು ಬಹುತೇಕ ಅನಾಥ ಹಾಗೂ ಬಡಮಕ್ಕಳಿಗೂ ಆಸರೆಯಾಗಿದ್ದಾರೆ. ಈ ಮೂಲಕ ಸಾಧನೆ ಮಾಡಬೇಕೆಂದವರಿಗೆ ಉತ್ತಮ ಆದರ್ಶವಾಗಿದ್ದಾರೆ.
ಆಗ ಕಡುಬಡತನ, ಈಗ ಕೋಟಿ.. ಕೋಟಿ ಶ್ರೀಮಂತನಾಗಿದ್ದರೂ ಕೂಡ ರೊನಾಲ್ಡೊ ಅವರಿಗೆ ಸ್ವಲ್ಪನೂ ದುರಹಂಕಾರವೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಬ್ಬರು ಸ್ವಲ್ಪಮಟ್ಟಿಗೆ ಬೆಳೆದರೆ ಸಾಕು ದುರಹಂಕಾರದ ಮಾತುಗಳು, ಬೇರೆಯವನ್ನು ನಿಂದಿಸುವ ಕೆಲಸವನ್ನು ಮಾಡುತ್ತಾರೆ. ಅದರಲ್ಲೂ, ಕೆಲವು ರಾಜಕಾರಣಿಗಳ ಮಕ್ಕಳು ಮತ್ತು ಸೆಲೆಬ್ರೆಟಿಗಳು. ಈ ಸಾಲಿಗೆ ನಟ ದರ್ಶನ್ ಕೂಡ ಸೇರಿದ್ದಾರೆ.
ಸಾಮಾನ್ಯವಾಗಿ ಇಂಟರ್‌ವ್ಯೂವ್‌ಗಳಲ್ಲಿ ತಾವು ನಡೆದುಬಂದ ಹಾದಿ ಹಾಗೂ ಮುಂದಿನ ಸಾಧನೆಗಳ ಬಗ್ಗೆ ಹೇಳಿಕೊಳ್ಳವುದನ್ನು ನೋಡಿದ್ದೇವೆ. ಆದರೆ ಕೆಲವೊಬ್ಬರು ಬೇರೆಯವರನ್ನು ಹೋಲಿಕೆ ಮಾಡಿಕೊಂಡು ಮಾತನಾಡುವ ಕೆಲಸವನ್ನು ಮಾಡುತ್ತಾರೆ.
ಕೆಲವು ವರ್ಷಗಳ ಹಿಂದೆಯಷ್ಟೇ, ನಟ ದರ್ಶನ್ ಅವರು ಇಂಟರ್‌ವ್ಯೂವ್‌ವೊಂದರಲ್ಲಿ ಮಾತನಾಡುತ್ತಾ ರೊನಾಲ್ಡೊ ಅವರ ಕೈಗಡಿಯಾರದ ವಿಚಾರವನ್ನು ತೆಗೆಯುತ್ತಾರೆ. ಈ ವಿಚಾರಗಳೆಲ್ಲ ಇದೀಗ ಮುನ್ನಲೆಗೆ ಬರಲು ಕಾರಣವೇ ರೇಣುಕಾಸ್ವಾಮಿ ಹತ್ಯೆ.
ರೊನಾಲ್ಡೋ ಅವರು ಅವರದ್ದೇ ಆದ ಘನತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ನಟ ದರ್ಶನ್ ಅವರಿಗೆ ಹೋಲಿಕೆ ಮಾಡಿಕೊಳ್ಳುವ ಯೋಗ್ಯತೆಯಿಲ್ಲ ಎಂದು ಹೇಳುತ್ತಿದ್ದಾರೆ. ಹಾಗೇ ನೋಡಿದರೆ ರೊನಾಲ್ಡೋ ದರ್ಶನ್‌ಗಿಂತ ನೂರು ಪಟ್ಟು ಶ್ರೀಮಂತ ವ್ಯಕ್ತಿ. ಆದರೂ ಅವರು ಯಾರ ಬಳಿಯಾದರೂ ಮಾತನಾಡುವಾಗ ಸೌಮ್ಯತೆಯಿಂದ ಮಾತನಾಡುತ್ತಾರೆ. ಆದ್ದರಿಂದ ಅವರಿಗೆ ನೀವು ಹೋಲಿಕೆ ಮಾಡಿಕೊಳ್ಳಬೇಡಿ ಅಂತಲೂ ದರ್ಶನ್‌ಗೆ ನೆಟ್ಟಿಗರು ಹಾಗೂ ರೊನಾಲ್ಡೊ ಅಭಿಮಾನಿಗಳು ಹೇಳುತ್ತಿದ್ದಾರೆ. ಅಷ್ಟಕ್ಕೂ ದರ್ಶನ್ ಏನು ಹೇಳಿದ್ದರು ಎಂದು ಇಲ್ಲಿ ತಿಳಿಯಿರಿ.
"ಕ್ರಿಸ್ಟಿಯಾನೋ ರೊನಾಲ್ಡೊದೊಂದು ಇಂಟರ್‌ವ್ಯೂವ್ ನೋಡ್ತಿದ್ದೆ, ಈ ವೇಳೆ ಮುಂದುಗಡೆ ಕುಳಿತವನು ಒಬ್ಬನು ಕೇಳ್ತಾನೆ, ನೀವು ಬಡಕುಟುಂಬದಿಂದ ಬಂದಿದ್ದಿರಂತೆ, ಆದರೆ ಇವತ್ತು ಐಷಾರಾಮಿ ಗಾಡಿಲಿ ಓಡಾಡ್ತಿದ್ದೀರ. ಈತರ ವಾಚ್ ಕಟ್ತೀರ, ಇದು ಎಷ್ಟು ಬೆಲೆ ಬಾಳುತ್ತದೆ ಎಂದು. ಆಗ ಸ್ಲಿಪ್ಪರ್ ಶಾಟ್ ಹೊಡೆದ ರೀತಿ ರೊನಾಲ್ಡೊ ಉತ್ತರ ನೀಡುತ್ತಾರೆ," ಎಂದು ದರ್ಶನ್ ಹೇಳುತ್ತಾನೆ.
"ಈ ಬ್ರಿಲಿಯನ್ಸ್‌ನಿಂದ ನಾವು ಕಲಿತುಕೊಳ್ಳುತ್ತೇವೆ. ನೀನು ಕಟ್ಟಿರೋ ವಾಚಲ್ಲಿ ಅದೇ ಟೈಮ್, ನಾನು ಕಟ್ಟಿರೋ ವಾಚಲ್ಲೂ ಅದೇ ಟೈಂ. ಆದರೆ, ನಾನು ಕಟ್ಟಿರೋ ವಾಚ್ ನನ್ ಟೈಂ ಹೇಗಿದೆ ಎಂದು ತೋರಿಸುತ್ತದೆ. ನೀನು ಕಟ್ಟಿರೋ ವಾಚ್ ನಿನ್ ಟೈಂ ಹೇಗಿದೆ ಎಂದು ತೋರಿಸುತ್ತದೆ. ಎರಡೂ ಒಂದೇ ಟೈಂ ಹೇ.. ಆದರೆ ನನ್ ಟೈಂ ಹೇಳುತ್ತದೆ ನಾನ್ ಹೇಗಿದ್ದೀನಿ ಅಂತಾ," ರೊನಾಲ್ಡೊ ಹೇಳಿದ್ದಾರೆ ಎಂದು ಹೇಳುತ್ತಾ ಎದುರಿಗೆ ಕುಳಿತವರಿಗೆ ಅವಮಾನ ಮಾಡುತ್ತಾರೆ.
-
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
‘ಲವ್ ಮಾಕ್ಟೇಲ್ 3’ ಕಥೆ ವಿವಾದ ಸುಖಾಂತ್ಯ: ಫಿಲ್ಮ್ ಚೇಂಬರ್ ಸಭೆಯಲ್ಲಿ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ ಸಂಧಾನ ಯಶಸ್ವಿ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.









Click it and Unblock the Notifications