Darshan Fan Death : ನೆಚ್ಚಿನ ನಟನ ಬಂಧನಕ್ಕೆ ಮನನೊಂದು ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡ ದರ್ಶನ್ ಅಭಿಮಾನಿ
ಬೆಂಗಳೂರು, ಜೂನ್. 17: ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರ ಜೊತೆಗೆ ಪವಿತ್ರಾ ಗೌಡ ಸೇರಿದಂತೆ ಅನೇಕ ಆರೋಪಿಗಳು ಇದ್ದಾರೆ. ಆದರೆ, ನಟ ದರ್ಶನ್ ಮಾಡಿರುವುದು ತಪ್ಪು, ಸರಿ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಚರ್ಚೆಯಾಗುತ್ತಿದೆ.
ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಬಿಟ್ಟುಕೊಡುತ್ತಿಲ್ಲ. ತಮ್ಮ ನಟ ಪೊಲೀಸ್ ಠಾಣೆಯಲ್ಲಿ ಇರುವುದನ್ನು ಸಹಿಸುತ್ತಿಲ್ಲ. ದುಃಖದಲ್ಲಿರುವ ಹಲವು ಅಭಿಮಾನಿಗಳು ಕಾಮೆಂಟ್‌ಗಳು, ಪೋಸ್ಟ್‌ಗಳ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ. ಇದರ ಜೊತೆಗೆ ಕೆಲವು ಅಭಿಮಾನಿಗಳು ಅತಿರೇಕಕ್ಕೆ ಹೋಗುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ಹೊರ ಬಂದಿದೆ.

ಚನ್ನಪಟ್ಟಣದಲ್ಲಿ ದರ್ಶನ್ ಅಭಿಮಾನಿ ಸಾವು!
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರೋದರಿಂದ ಬೇಸರಗೊಂಡಿದ್ದ ಚನ್ನಪಟ್ಟಣದ ಅಭಿಮಾನಿ ಭೈರೇಶ್ ಎಂಬುವವರು ಮೋರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಟಿವಿ9 ವರದಿ ತಿಳಿಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ತಹೆಚ್ಚಿನ ನಿಖೆ ನಡೆಸುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿರುವುದಕ್ಕೆ ಪೊಲೀಸ್ ಠಾಣೆ ಎದುರಿನಲ್ಲಿ ಅಭಿಮಾನಿಗಳು ಘೋಷಣೆ ಕೂಗುತ್ತಾ ಓಡಾಡುತ್ತಿದ್ದಾರೆ. ಆದರೆ, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮಾಳೆದೊಡ್ಡಿಯಲ್ಲಿ ಒಬ್ಬ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಬಂಧನದಿಂದಾಗಿ ಎರಡು ಮೂರು ದಿನಗಳಿಂದ ತುಂಬಾ ಬೇಸರದಲ್ಲಿದ್ದ ಅವರು ಅನ್ನ ನೀರು ಕೂಡ ಬಿಟ್ಟಿದ್ದರು. ಈಗ ಮೃತಪಟ್ಟಿದ್ದಾರೆ.
ಭೈರೇಶ್ ನಟ ದರ್ಶನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಮೋರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಇದು ಆತ್ಮಹತ್ಯೆಯೋ ಇಲ್ಲ ಆಕಸ್ಮಿಕ ಸಾವು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಊಟ ನೀರು ಬಿಟ್ಟಿದ್ದ ಕಾರಣ ಸುಸ್ತಾಗಿ ಮೋರಿಗೆ ಬಿದ್ದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮತ್ತಷ್ಟು ಮಾಹಿತಿ ಸಿಗಬೇಕಿದೆ.
(ಸೂಚನೆ: ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು. Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected])












Click it and Unblock the Notifications