Darshan Thoogudeepa: ರೇಣುಕಾಸ್ವಾಮಿ ಈಗ ದೆವ್ವ? ಪಟ್ಟಣಗೆರೆ ಶೆಡ್ & ಹೆಣ ಎಸೆದ ಜಾಗದಲ್ಲಿ ಚೀರಾಟ ಮತ್ತು ಕಿರುಚಾಟ?

ದರ್ಶನ್ ತೂಗುದೀಪ್ ಸೇರಿದಂತೆ ಅವರ ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬಾತ ಸಾಯುವ ರೀತಿ ಹೊಡೆದು, ರೇಣುಕಾಸ್ವಾಮಿ ಕೊಲೆ ಮಾಡಿ ಮೋರಿ ಅಂದ್ರೆ ಚರಂಡಿ ಬಳಿ ಎಸೆದು ಹೋದ ಆರೋಪ ಇತ್ತು. ಇದೇ ಆರೋಪದ ಕಾರಣಕ್ಕೆ ಇದೀಗ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವಂತೆ ಆಗಿದೆ. ಹೀಗಿದ್ದಾಗ ರೇಣುಕಾಸ್ವಾಮಿ ಆತ್ಮದ ಕಾಟ ಜೋರಾಗಿದ್ದು, ಹಲ್ಲೆ ನಡೆಸಿದ್ದ ಪಟ್ಟಣಗೆರೆ ಶೆಡ್ ಹಾಗೂ ಹೆಣ ಎಸೆದ ಮೋರಿ ಪಕ್ಕದ ಜಾಗದಲ್ಲಿ ದೆವ್ವದ ಕಿರುಚಾಟ & ಅರಚಾಟ ಕೇಳಿಬರುತ್ತಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ!

ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ತೀವ್ರ ರೀತಿ ಹಲ್ಲೆ ಮಾಡಿ, ಎತ್ತಿ ಎತ್ತಿ ಬಿಸಾಡಿ, ಮರ್ಮಾಂಗದ ಸಿಪ್ಪೆ ಸುಲಿದು, ಸಿಗರೇಟ್ & ಇತರ ವಸ್ತುಗಳ ಬಳಸಿ ಬರೆ ಹಾಕಿ, ತಲೆ ಮೇಲೆ ತೂತು ಮಾಡಿ, ಮರ್ಮಾಂಗಕ್ಕೆ ಜಾಡಿಸಿ ಒದ್ದು, ಕರೆಂಟ್ ಶಾಕ್ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದೆ ಎನ್ನುವ ಆರೋಪ ಇದೆ. ಹೀಗಿದ್ದಾಗ ರೇಣುಕಾಸ್ವಾಮಿ ಆತ್ಮ ಇದೀಗ ಹೆಣ ಸಿಕ್ಕಿರುವ ಜಾಗದಲ್ಲಿ ಸುತ್ತಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಹೇಳುತ್ತಿರುವುದು ಏನು? ಮುಂದೆ ಓದಿ.

Darshan Thoogudeepa And Renuka Swamy News Update

ಕೊಲೆಯಾದ ರೇಣುಕಾಸ್ವಾಮಿ ಈಗ ದೆವ್ವ?

ದರ್ಶನ್ ತೂಗುದೀಪ್ ನೆಮ್ಮದಿಯಾಗಿ ಇದ್ದ ಜೀವನ ಹಾಳು ಮಾಡಿಕೊಂಡು ಇದೀಗ ಜೈಲಿನ ನರಕಕ್ಕೆ ಬಿದ್ದಂತೆ ಆಗಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಕಂಬಿ ಎಣಿಸುತ್ತಿರುವ ಈ ನಟನಿಗೆ ಸಾಲು ಸಾಲು ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಒಂದೊಂದು ಸಿನಿಮಾಗೆ ಕೂಡ ಕೋಟಿ ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂಬ ಮಾತು ಕೂಡ ಇತ್ತು. ಇಂತಹ ಡಿ-ಬಾಸ್ ಈಗ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿದ್ದು, ದರ್ಶನ್ ಅವರ ಸಿನಿಮಾಗಳು ನಿಂತು ಹೋಗಲಿವೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಇದು ಬಿಡಿ, ಮತ್ತೆ ಒಂದು ಕಡೆ ರೇಣುಕಾಸ್ವಾಮಿ ಆತ್ಮ ದೆವ್ವವಾಗಿ ಇದೀಗ ಕಾಟ ಕೊಡಲು ಶುರು ಮಾಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ದೆವ್ವ ಆಗಿದ್ದಾನಾ ರೇಣುಕಾಸ್ವಾಮಿ?

ಹೌದು, ರೇಣುಕಾಸ್ವಾಮಿ ಕೊಲೆ ನಡೆದ ಜಾಗ ಪಟ್ಟಣಗೆರೆ ಶೆಡ್ & ರೇಣುಕಾಸ್ವಾಮಿ ಕೊಲೆ ಆಗಿ ನಂತರ ಹೆಣವಾಗಿ ಸಿಕ್ಕಿದ್ದ ಜಾಗ ಮೋರಿ ಬಳಿ ಇದೀಗ ಆತ್ಮದ ಅರಚಾಟ & ಕಿರುಚಾಟ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ರೇಣುಕಾಸ್ವಾಮಿ ಹೆಣ ಸಿಕ್ಕ ಜಾಗದಲ್ಲಿ ಯಾರೋ ಜೋರಾಗಿ ಅಳುತ್ತಾ ಮತ್ತು ನರಳಾಡುತ್ತಾ ಇರುವಂತೆ ಸದ್ದು ಕೇಳಿಬರುತ್ತಿದೆ. ಹೀಗಾಗಿ ನಾವು ಆ ಜಾಗದಲ್ಲಿ ರಾತ್ರಿ ವೇಳೆ ಓಡಾಡುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಹಾಗೇ ಮತ್ತೊಂದು ಕಡೆ ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ಶೆಡ್ ಒಳಗೆ ಕೂಡ ಆತ್ಮದ ಕೂಗಾಟ ಜೋರಾಗಿ ಇದೆಯಂತೆ!

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+