Darshan Thoogudeepa: ವಿಜಯಲಕ್ಷ್ಮೀ & ದರ್ಶನ್ ತೂಗುದೀಪ್ ಲವ್ ಸ್ಟೋರಿ! ಪವಿತ್ರಾ ಗೌಡ ಎಂಟ್ರಿ ಹೇಗಾಯ್ತು?
ದರ್ಶನ್ ತೂಗುದೀಪ್ ವೈಯಕ್ತಿಕ ಬದುಕು ಹಾಳಾಗಿ ಹೋಗಿದ್ದು, 2011 ರಿಂದ ಕೂಡ ನೆಮ್ಮದಿ ಇಲ್ಲದೆ ದರ್ಶನ್ ತೂಗುದೀಪ್ ಪರದಾಡುತ್ತಿದ್ದಾರೆ. 2011 ರಲ್ಲಿ ತಮ್ಮ ಹೆಂಡತಿ ವಿಜಯಲಕ್ಷ್ಮೀ ದರ್ಶನ್ ನೀಡಿದ್ದ ದೂರು ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದಿದ್ದ ದರ್ಶನ್ ತೂಗುದೀಪ್, ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿದ್ದಾರೆ. ಇಂತಹ ಸಮಯದಲ್ಲಿ ಏನೇ ಆದರೂ ವಿಜಯಲಕ್ಷ್ಮೀ ದರ್ಶನ್ ಅವರು ತಮ್ಮ ಗಂಡನನ್ನು ಬಿಟ್ಟುಕೊಡದೆ ಹೋರಾಡುತ್ತಿದ್ದಾರೆ. ಹಾಗಾದ್ರೆ, ವಿಜಯಲಕ್ಷ್ಮೀ & ದರ್ಶನ್ ತೂಗುದೀಪ್ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಪವಿತ್ರಾ ಗೌಡ ಎಂಟ್ರಿ ಹೇಗಾಯ್ತು?
ಕರಿಯ, ಕಲಾಸಿಪಾಳ್ಯ, ಗಜ, ಸಂಗೊಳ್ಳಿ ರಾಯಣ್ಣ, ರಾಬರ್ಟ್, ಕಾಟೇರ.. ಹೀಗೆ ದರ್ಶನ್ ತೂಗುದೀಪ್ ಅವರು ಕೋಟ್ಯಂತರ ಅಭಿಮಾನಿಗಳಿಗೆ ಸಿನಿಮಾಗಳ ಹಬ್ಬವನ್ನೇ ಮುಂದಿಟ್ಟು ತಮ್ಮ ನಟನಾ ತಾಕತ್ತು ತೋರಿಸಿದ್ದಾರೆ. ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿದ್ದ ದರ್ಶನ್ ತೂಗುದೀಪ್ ಅವರ ಜೀವನ ತುಂಬಾ ಚನ್ನಾಗಿ ಇತ್ತು. ಆದರೆ ದರ್ಶನ್ ತೂಗುದೀಪ್ ಅವರ ವೈಯಕ್ತಿಕ ಜೀವನವೇ ಅವರಿಗೆ ಮುಳುವಾಗಿ ಹೋಯಿತು ಎಂಬ ಆರೋಪ ಇದೆ. ಈ ಪೈಕಿ 2008ಕ್ಕೂ ಹಿಂದೆ ದರ್ಶನ್ ತೂಗುದೀಪ್ & ಅವರ ಹೆಂಡತಿ ವಿಜಯಲಕ್ಷ್ಮೀ ದರ್ಶನ್‌ರ ನಡುವೆ ಸಣ್ಣಪುಟ್ಟ ಗಲಾಟೆ ಆಗಿದ್ದವು. ಆದರೆ ಯಾವಾಗ 2011 ರಲ್ಲಿ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರೋ, ಆ ನಂತರವೇ ಬಿರುಗಾಳಿ ಎದ್ದಿತ್ತು!

ವಿಜಯಲಕ್ಷ್ಮೀ & ದರ್ಶನ್ ಲವ್ ಸ್ಟೋರಿ!
ದರ್ಶನ್ ತೂಗುದೀಪ್ ಮತ್ತು ವಿಜಯಲಕ್ಷ್ಮೀ ದರ್ಶನ್ ಅವರು ಸಂಬಂಧಿಕರು. ಹೀಗಿದ್ದಾಗಲೇ ಅವರು ಕೆಲಸ ಮಾಡುವ ಜಾಗದಲ್ಲೇ ಲವ್ ಆಗಿರುತ್ತದೆ. ಆ ನಂತರ ಇಬ್ಬರೂ ಮದುವೆಯನ್ನ ಕೂಡ ಆಗುತ್ತಾರೆ. ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದ ದರ್ಶನ್ ತೂಗುದೀಪ್ ಮತ್ತು ವಿಜಯಲಕ್ಷ್ಮೀ ದರ್ಶನ್ ಅವರ ವೈವಾಹಿಕ ಜೀವನ ಆರಂಭದಲ್ಲಿ ಚನ್ನಾಗಿಯೇ ಇತ್ತು. ಆದ್ರೆ ಬರುತ್ತಾ ಬರುತ್ತಾ ಅವರ ಜೀವನದಲ್ಲಿ ಬಿರುಗಾಳಿ ಎದ್ದಿತ್ತು.
ಹೀಗೆ ನೋಡ ನೋಡುತ್ತಲೇ, ದರ್ಶನ್ ತೂಗುದೀಪ್ ಮತ್ತು ವಿಜಯಲಕ್ಷ್ಮೀ ದರ್ಶನ್ ಜಗಳ ಆಡಲು ಶುರು ಮಾಡಿಬಿಟ್ಟರು. ಮತ್ತೆ ಈ ಜಗಳವೇ ಕೊನೆಗೆ ದರ್ಶನ್ ತೂಗುದೀಪ್ ಅವರನ್ನ 2011 ರಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗುವಂತೆ ಮಾಡಿಬಿಟ್ಟಿತ್ತು. ತಮ್ಮ ಸ್ವಂತ ಹೆಂಡತಿ ವಿಜಲಕ್ಷ್ಮೀ ಮೇಲೆ ದರ್ಶನ್ ತೂಗುದೀಪ್ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಕೊನೆಗೆ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದು ಪರದಾಡಿಬಿಟ್ಟರು ದರ್ಶನ್ ತೂಗುದೀಪ್.
ಪವಿತ್ರಾ ಗೌಡ ಎಂಟ್ರಿ ಹೇಗಾಯ್ತು?
ದರ್ಶನ್ ತೂಗುದೀಪ್ & ವಿಜಯಲಕ್ಷ್ಮೀ ದರ್ಶನ್ ಜಗಳ ಆಡುತ್ತಾ, ಕಿತ್ತಾಟವು ಕೂಡ ಜೋರು ಜೋರಾಗಿದ್ದ ಸಮಯದಲ್ಲೇ ದರ್ಶನ್ ತೂಗುದೀಪ್ ಬಾಳಿಗೆ ಬೇರೆ ಒಬ್ಬರು ಹೆಣ್ಣಿನ ಎಂಟ್ರಿಯು ಆಗಿತ್ತು. ಆ ಮಹಿಳೆ ಬೇರೆ ಯಾರೂ ಅಲ್ಲ, ಆಗಲೇ ಮದುವೆ ಆಗಿದ್ದ ಪವಿತ್ರಾ ಗೌಡ ನಟ ದರ್ಶನ್ ತೂಗುದೀಪ್ ಬಾಳಿಗೆ ಎಂಟ್ರಿ ಆಗುತ್ತಾರೆ. 2014 ರಲ್ಲಿ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ಪರಿಚಯ ಆಗಿತ್ತು. ಆ ನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದರು ಎಂಬ ಆರೋಪ ಕೂಡ ಇದೆ. ಹೀಗೆ ಪವಿತ್ರಾ ಗೌಡ 2014 ರಲ್ಲಿ ದರ್ಶನ್ ತೂಗುದೀಪ್ ಬಾಳಿಗೆ ಎಂಟ್ರಿ ಕೊಟ್ಟ ನಂತರ, ನಮ್ಮ ಬಾಸ್ ಜೀವನವೇ ಹಾಳಾಗಿ ಹೋಯ್ತು ಅನ್ನೋದು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಆರೋಪವಾಗಿದೆ.












Click it and Unblock the Notifications