10 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಭವಿಷ್ಯ... Darshan Thoogudeepa

ರೇಣುಕಾಸ್ವಾಮಿ ವಿಚಾರದಲ್ಲಿ ಮತ್ತೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಭಾರಿ ದೊಡ್ಡ ಆಘಾತವೇ ಎದುರಾಗಿದ್ದು, ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಹಾಗೂ ಪವಿತ್ರಾ ಗೌಡ ಆರೋಗ್ಯ ಏರುಪೇರು ಆಗುವ ಸುದ್ದಿ ಸಿಗುತ್ತಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್ ಸಂಬಂಧ ಇಂದು ಮಾನ್ಯ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಅವರು ಸೇರಿ ಒಟ್ಟು 7 ಆರೋಪಿಗಳ ಜಾಮೀನು ರದ್ದು ಬಗ್ಗೆ ಭಾರಿ ಮಹತ್ವದ ವಿಚಾರಣೆ ಇಂದು ನಡೆಯಿತು. ಹೀಗಿದ್ದಾಗಲೇ, 10 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಭವಿಷ್ಯ...

ಕನ್ನಡ ಸಿನಿಮಾ ರಂಗಕ್ಕೆ 100 ವರ್ಷಗಳ ಇತಿಹಾಸ ಇದ್ದು, ಇಂತಹ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಭಾರಿ ಸಂಚಲನ ಸೃಷ್ಟಿ ಆಗುತ್ತಿದೆ. ಜಗತ್ತಿನಾದ್ಯಂತ ಹೆಸರನ್ನು ಮಾಡಿರುವ ನಮ್ಮ ಇಂಡಸ್ಟ್ರಿಗೆ ಕಷ್ಟ ಎದುರಾಗ್ತಿದೆ. ಹೌದು, ಕನ್ನಡ ಸಿನಿಮಾ ರಂಗದಲ್ಲಿ ಇದೀಗ ದೊಡ್ಡ ದೊಡ್ಡ ಅನಾಹುತ ನಡೆದು ಹೋಗುತ್ತಿದೆ... ಅದ್ರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಕೆಟ್ಟ ಕೆಟ್ಟದಾಗಿ ಅಶ್ಲೀಲ ಸಂದೇಶವನ್ನ ಕಳುಹಿಸಿದ್ದ ಅನ್ನೋ ಆರೋಪ ಹಿನ್ನೆಲೆ ಭೀಕರ ಘಟನೆ ನಡೆದಿತ್ತು. ಅದು ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯ ಕೊಲೆಯಲ್ಲಿ ಅನ್ನೋ ಆರೋಪ ಕೇಳಿ ಬಂದಿತ್ತು...

Darshan Thoogudeepa And Pavithra Gowda Got Good News For 10 Days

ರೇಣುಕಾಸ್ವಾಮಿ ಹೆಣ ಬೆಂಗಳೂರಿನ ಬೀದಿಯಲ್ಲಿ ನಾಯಿಗಳು ಎಳೆದಾಡುವ ಸಮಯದಲ್ಲಿ ಪತ್ತೆಯಾಗಿತ್ತು. ಅಷ್ಟಕ್ಕೂ ಸರಿಯಾಗಿ 1 ವರ್ಷ 1 ತಿಂಗಳ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಬೆಂಗಳೂರಲ್ಲಿ ಹೆಣವಾಗಿ ಸಿಕ್ಕಿದ್ದ. ಈ ಕೊಲೆ ಕೇಸ್ ಇಂಡಿಯಾ ಮಾತ್ರವಲ್ಲ ಇಡೀ ಪ್ರಪಂಚದಲ್ಲಿ ಸದ್ದು ಮಾಡಿದೆ. ಈ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದು ರಿಲೀಸ್ ಆಗಿ & ಬಳ್ಳಾರಿ ಜೈಲಿಂದ ಹೊರಗೆ ಬಂದಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇಂದು ಭಾರಿ ದೊಡ್ಡ ಆಘಾತ...

ಪವಿತ್ರಾ ಗೌಡ ಅವರು ಡಿ-ಬಾಸ್...

ಅಂದಹಾಗೆ, ಪವಿತ್ರಾ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್‌ರ ಜೊತೆ 10 ವರ್ಷಗಳಿಂದಲೂ ಸ್ನೇಹ ಕಾಪಾಡಿಕೊಂಡು ಬಂದಿದ್ದರು. ಆದರೆ ರೇಣುಕಾಸ್ವಾಮಿ ತಮಗೆ ಕೆಟ್ಟ ಕೆಟ್ಟದಾಗಿ ಫೋಟೋ ಕಳಿಸಿ, ಅಶ್ಲೀಲ ಮೆಸೇಜ್ ಮಾಡುತ್ತಿದ್ದಾನೆ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ವಿಷಯ ತಿಳಿದ ನಂತರ ಘೋರ ಘಟನೆ ನಡೆದಿತ್ತು ಎಂಬ ಆರೋಪ ಮಾಡಲಾಗಿತ್ತು. ನಂತರ ರೇಣುಕಾಸ್ವಾಮಿ ಭೀಕರವಾಗಿ ಕೊಲೆಯಾದ ಎಂಬ ಭಾರಿ ಗಂಭೀರ ಆರೋಪ ಮಾಡಿ, ಡಿ-ಬಾಸ್ ದರ್ಶನ್ ತೂಗುದೀಪ್‌ & ಪವಿತ್ರಾ ಗೌಡ ಅವರು ಸೇರಿ ಎಲ್ಲಾ ಆರೋಪಿಗಳನ್ನ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಜಾಮೀನು ಪಡೆದು ರಿಲೀಸ್ ಆಗಿ ಬಂದಿರುವ 7 ಆರೋಪಿಗಳಿಗೆ ಇದೀಗ ಮತ್ತೆ ಜೈಲಿಗೆ ಹೋಗುವ ಭಯ ಕಾಡುತ್ತಿದೆ... ಹೀಗಿದ್ದಾಗಲೇ, 10 ದಿನಗಳ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಭವಿಷ್ಯ...

ಡಿ-ಬಾಸ್ ದರ್ಶನ್ ಅವರಿಗೆ ಮಹತ್ವದ...

ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಅವರು ಸೇರಿ, ಒಟ್ಟಾರೆ 7 ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು ನಟ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಅವರು ಸೇರಿ ಒಟ್ಟು 7 ಆರೋಪಿಗಳ ಜಾಮೀನು ರದ್ದು ಮಾಡುವ ಬಗ್ಗೆ ತನ್ನ ಮಹತ್ವದ ಆದೇಶ ಕಾಯ್ದಿರಿಸಿದೆ. ಇನ್ನು 10 ದಿನಗಳ ಒಳಗಾಗಿ ಈ ಬಗ್ಗೆ ತೀರ್ಪು ಹೊರ ಬೀಳಲಿದ್ದು, ಅಕಸ್ಮಾತ್ ಈ ತೀರ್ಪಿನಲ್ಲಿ ಜಾಮೀನು ರದ್ದು ಮಾಡಿದರೆ ಮತ್ತೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಅವರು ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಜೈಲು ಸೇರುವುದು ಅನಿವಾರ್ಯ ಆಗಲಿದೆ. ಹೀಗಾಗಿಯೇ ಈ ಮುಂದಿನ 10 ದಿನಗಳು ಸಾಕಷ್ಟು ಮಹತ್ವದ ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+