Darshan Thoogudeepa: ದರ್ಶನ್ ತೂಗುದೀಪ್ ‘ಕೆಜಿಎಫ್’ ಮೀರಿಸುವ ಸಿನಿಮಾ ಮಾಡ್ತಾರಾ? ಬಿದ್ದು ಬಿದ್ದು ನಗುತ್ತಿದ್ದಾರೆ ಕನ್ನಡಿಗರು!
ದರ್ಶನ್ ತೂಗುದೀಪ್ ಈಗ ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್‌ನಲ್ಲಿ ಎ-2 ಅಂದರೆ, 2ನೇ ಆರೋಪಿ ಆಗಿ ಕಂಬಿ ಎಣಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ಹೊರಗೆ ಬಂದ ತಕ್ಷಣ 'ಕೆಜಿಎಫ್' ಮೀರಿಸುವ ಸಿನಿಮಾ ಮಾಡ್ತಾರಂತೆ. ಈ ಮೂಲಕ ದರ್ಶನ್ ತೂಗುದೀಪ ಕನ್ನಡ ಸಿನಿಮಾ ರಂಗದಲ್ಲೇ ಇತಿಹಾಸ ಸೃಷ್ಟಿ ಮಾಡ್ತಾರೆ ಅಂತಾ ಒಬ್ಬರು ಹೇಳಿದ್ದರು, ಹಾಗಾದ್ರೆ ದರ್ಶನ್ ತೂಗುದೀಪ್ ನಿಜವಾಗೂ 'ಕೆಜಿಎಫ್' ಸ್ಟಾರ್ ಯಶ್‌ನ ಹಿಂದೆ ಹಾಕ್ತಾರಾ? ಇದೀಗ ಕನ್ನಡಿಗರು ಬಿದ್ದು ಬಿದ್ದು ನಗ್ತಿರೋದು ಏಕೆ?
'ಕೆಜಿಎಫ್' ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಈ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಸಿನಿಮಾ ರಂಗದಲ್ಲೇ ದೊಡ್ಡ ಸೌಂಡ್‌ನ ಮಾಡಿತ್ತು. ಹೀಗಿದ್ದಾಗ ರಾಕಿಂಗ್ ಸ್ಟಾರ್ ಯಶ್ ಅವರು ಪ್ಯಾನ್ ಇಂಡಿಯಾ ಮಾತ್ರ ಅಲ್ಲ, ಇದೀಗ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿದ್ದಾರೆ. ಅಲ್ಲದೆ 'ಕೆಜಿಎಫ್' ಸಿನಿಮಾ ಮೂಲಕ ಕನ್ನಡ ನಾಡಿನ ನಟ ಯಶ್ ಅವರು ಇದೀಗ 'ರಾಕಿಭಾಯ್' ಆಗಿ ಫೇಮಸ್ ಆಗಿದ್ದಾರೆ. ಹೀಗಿದ್ದಾಗ ಸಂಜನಾ ಗಲ್ರಾಣಿ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿ ಮಾಡಿದ್ದು, ಈಗ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ & 'ಕೆಜಿಎಫ್' ತಿಕ್ಕಾಟ ಜೋರಾಗಿದೆ!

ದರ್ಶನ್ ತೂಗುದೀಪ್ & 'ಕೆಜಿಎಫ್' ಫೈಟ್?
ಸಂಜನಾ ಗಲ್ರಾಣಿ ನೀಡಿರುವ ಅದೊಂದು ಹೇಳಿಕೆ ಇದೀಗ ದೊಡ್ಡ ಸಂಚಲನಕ್ಕೆ ಕಾರಣವೂ ಆಗಿದೆ, ಅಲ್ಲದೆ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟಿ ಸಂಜನಾ ಗಲ್ರಾಣಿ ಮಾತು ಕೇಳಿ ಕನ್ನಡಿಗರು ಬಿದ್ದು ಬಿದ್ದು ನಗುತ್ತಿದ್ದಾರೆ. ನಟಿ ಸಂಜನಾ ಗಲ್ರಾಣಿ ಇತ್ರೀಚೆಗೆ ದರ್ಶನ್ ತೂಗುದೀಪ್ ಬಗ್ಗೆ ಮಾತನಾಡುವ ಸಮಯದಲ್ಲಿ, ದರ್ಶನ್ ತೂಗುದೀಪ್ ಅವರು ಜೈಲಿನ ಸಂಕಷ್ಟದಿಂದ ಹೊರಗೆ ಬಂದು 'ಕೆಜಿಎಫ್' ಮೀರಿಸುವ ಸಿನಿಮಾ ಮಾಡಲಿದ್ದಾರೆ ಎಂದಿದ್ದರು ಸಂಜನಾ. ಇದೇ ಮಾತು ಇದೀಗ ಟ್ರೋಲ್ ಆಗುತ್ತಿದ್ದು, ಸಂಜನಾ ಗಲ್ರಾಣಿ ಮಾತಿಗೆ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ!
'ಕೆಜಿಎಫ್' ರೀತಿಯ ಮತ್ತೊಂದು...
ಕನ್ನಡದಲ್ಲಿ 'ಕೆಜಿಎಫ್' ರೀತಿಯ ಮತ್ತೊಂದು ಸಿನಿಮಾ ಬರೋದಕ್ಕೆ ಸಾಧ್ಯ ಇಲ್ಲ, ಆದರೆ ಇಲ್ಲಿ ಕೆಲವರು ಓಲೈಕೆ ಮಾತಿಗೆ 'ಕೆಜಿಎಫ್' ಸಿನಿಮಾ ಮುಂದೆ ತರುತ್ತಿದ್ದಾರೆ. ಆದರೆ ಇದು ಮಾತಿಗಷ್ಟೇ ಚಂದ ಅಂತಾ ಹೇಳ್ತಿದ್ದಾರೆ ನೆಟ್ಟಿಗರು. ಅಲ್ಲದೆ ಇಂತಹ ಸಿನಿಮಾ ಮಾಡೋಕೆ ಧಮ್ ಬೇಕೋಲೇ ಅಂತಾನೂ ರೇಗಿಸುತ್ತಿದ್ದಾರೆ. ಹೀಗಾಗಿ ಸಂಜನಾ ಗಲ್ರಾಣಿ ನೀಡಿರುವ ಆ ಹೇಳಿಕೆ ವೈರಲ್ ಆಗುತ್ತಿದ್ದು, ಕನ್ನಡ ನಾಡಿನ ಜನ ಯಶ್ ಪರ ಬ್ಯಾಟ್ ಬೀಸುತ್ತಿದ್ದಾರೆ.












Click it and Unblock the Notifications