Darshan Thoogudeepa: ದರ್ಶನ್ ತೂಗುದೀಪ್ & ನಿಕಿತಾ ತುಕ್ರಾಲ್ ನಡುವೆ ಅಂತಹ ಸಂಬಂಧ ಏನಿತ್ತು?
ದರ್ಶನ್ ತೂಗುದೀಪ್ ಅವರು ಪವಿತ್ರಾ ಗೌಡ ಕಾರಣಕ್ಕೆ ಈಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರುವ ಪರಿಸ್ಥಿತಿ ಬಂದಿದೆ. ಆದರೆ ಪವಿತ್ರಾ ಗೌಡ ಅವರಿಗೂ ಮೊದಲು ನಟ ದರ್ಶನ್ ತೂಗುದೀಪ್ & ನಿಕಿತಾ ತುಕ್ರಾಲ್ ನಡುವೆ ಏನ್ ಆಗಿತ್ತು ಗೊತ್ತಾ? ದರ್ಶನ್ ತೂಗುದೀಪ್‌ರ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದ ನಿಕಿತಾ ತುಕ್ರಾಲ್ ಕೊನೆಗೆ ಏನಾದರು? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.
ದರ್ಶನ್ ತೂಗುದೀಪ್ ಹೆಸರಿಗೆ ಒಂದು ಹವಾ ಇತ್ತು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ನಟ ನೂರಾರು ಕೋಟಿ ರೂಪಾಯಿ ಸಂಪಾದನೆ ಮಾಡಬಲ್ಲ ಸಿನಿಮಾಗಳನ್ನ ತೆಗೆಯುತ್ತಿದ್ದ ಕೂಡ. ಹೀಗಾಗಿ ದರ್ಶನ್ ತೂಗುದೀಪ್ ಸಿನಿಮಾ ರಿಲೀಸ್ ಆಗುತ್ತೆ ಅಂದ್ರೆ ಕೋಟಿ ಕೋಟಿ ಫ್ಯಾನ್ಸ್ ಕಾಯುತ್ತಾ ಕೂರುತಿದ್ದರು. ಆದರೆ ಈಗ ದರ್ಶನ್ ತೂಗುದೀಪ್ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಇಂತಹ ನಟನ ಜೊತೆಗೆ ನಿಕಿತಾ ತುಕ್ರಾಲ್ ಕೂಡ ಸಂಬಂಧ ಹೊಂದಿ, ತಮ್ಮ ಜೀವನ ಹಾಳುಮಾಡಿಕೊಂಡರು ಎಂಬ ಆರೋಪ ಕೇಳಿಬಂದಿತ್ತು. ಹಾಗಾದ್ರೆ ಇಬ್ಬರ ನಡುವೆ ಅಂತಹ ಆತ್ಮೀಯತೆ ಏನಿತ್ತು? ಮುಂದೆ ಓದಿ.

ದರ್ಶನ್ ಸಹವಾಸ ಮಾಡಿ ನಿಖಿತಾ...
ದರ್ಶನ್ ತೂಗುದೀಪ್ ಅವರಷ್ಟೇ ನಿಕಿತಾ ತುಕ್ರಾಲ್ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ದೊಡ್ಡ ಖದರ್ ಸೃಷ್ಟಿ ಮಾಡಿದ್ದರು. ಕನ್ನಡದ ವಂಶಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ & ಯೋಧ ಸೇರಿದಂತೆ ಹಲವು ಸಿನಿಮಾಗಳಲ್ಲಿ ಹವಾ ಎಬ್ಬಿಸಿದ್ದ ನಟಿ ಇವರು. ಅದ್ರಲ್ಲೂ ಈ ನಟಿ ದರ್ಶನ್ ತೂಗುದೀಪ್ ಅವರ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂಬ ಬಗ್ಗೆ ಗಂಭೀರ ಆರೋಪ ಕೇಳಿಬಂತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ & ಯೋಧ ಸಿನಿಮಾಗಳಲ್ಲಿ ದರ್ಶನ್ ಅವರು ಮತ್ತು ನಿಖಿತಾ ಮಿಂಚಿದ್ದರು. ಹೀಗಿದ್ದಾಗಲೇ ಇಬ್ಬರ ನಡುವೆ ಸಂಬಂಧ ಇದೆ ಅನ್ನೋ ಗಾಸಿಪ್ ಕೂಡ ಹರಡಿ ದೊಡ್ಡ ಸದ್ದು ಮಾಡಿತ್ತು.
ನಿಕಿತಾ ತುಕ್ರಾಲ್ ಮದುವೆ ಆಗಿದ್ದು ಯಾರನ್ನ?
ದರ್ಶನ್ ತೂಗುದೀಪ್ ಅವರ ಹೆಂಡತಿ ವಿಜಯಲಕ್ಷ್ಮೀ ಅವರು, ನಿಕಿತಾ ತುಕ್ರಾಲ್ ವಿರುದ್ಧ ಸಿಟ್ಟಾದರು. ಹೀಗಿದ್ದಾಗ ದರ್ಶನ್ ತೂಗುದೀಪ್ & ನಿಕಿತಾ ತುಕ್ರಾಲ್ ಸಂಬಂಧದ ವಿಚಾರದಲ್ಲಿ ಚಲನಚಿತ್ರ ಮಂಡಳಿ ಕೂಡ ಮಧ್ಯಪ್ರವೇಶ ಮಾಡಿ ಸಂಚಲನ ಸೃಷ್ಟಿಯಾಗಿತ್ತು. ಕೊನೆಗೂ ನಿಕಿತಾ ತುಕ್ರಾಲ್ 3 ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಿಂದಲೇ ಬ್ಯಾನ್ ಆಗಿದ್ದರು. ಹೀಗೆ ಪರದಾಡಿದ ನಿಕಿತಾ ತುಕ್ರಾಲ್ ಅವರು ಕೊನೆಗೆ ಉದ್ಯಮಿ ಒಬ್ಬರನ್ನ ಮದುವೆ ಆದರು. ಈ ಇಬ್ಬರ ಮದುವೆ 2017 ರಲ್ಲಿ ನಡೆಯಿತು. ಆದರೆ ಯಾವುದೋ ಅನಗತ್ಯ ಕಾರಣಕ್ಕೆ ನಿಖಿತಾ ಅವರು ತಮ್ಮ ಸಿನಿಮಾ ಭವಿಷ್ಯವನ್ನೇ ಕಳೆದುಕೊಂಡರು.
ಸಖತ್ ಬ್ಯುಸಿಯಾಗಿದ್ದ ನಿಕಿತಾ ತುಕ್ರಾಲ್
ನಿಕಿತಾ ತುಕ್ರಾಲ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅದೆಷ್ಟು ಬ್ಯುಸಿಯಾಗಿದ್ದರು ಅಂದ್ರೆ, ಆ ಸಮಯಕ್ಕೇ ನಿಕಿತಾ ತುಕ್ರಾಲ್ ಅವರ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ಲೈನ್ ನಿಂತು ಮನವಿ ಮಾಡುತ್ತಿದ್ರು. ಹೀಗಿದ್ದಾಗ ಒಂದರ ಹಿಂದೆ ಒಂದರಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು ನಿಕಿತಾ ತುಕ್ರಾಲ್. ಸಿನಿಮಾ ಜೀವನದಲ್ಲಿ ಸಖತ್ ಆಗಿಯೇ ಮಿಂಚು ಹರಿಸಿದ್ದ ನಿಕಿತಾ ತುಕ್ರಾಲ್ ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಮಾತ್ರ ನರಳಾಡಿದ್ದರು. ಅದರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಬ್ಯಾನ್ ಆಗುವ ಶಿಕ್ಷೆ ಅನುಭವಿಸಿ, ಕೊನೆಗೆ ಸಿನಿಮಾ ರಂಗವನ್ನೇ ಬಿಟ್ಟು ಹೋಗಬೇಕಾಯಿತು ದರ್ಶನ್ ತೂಗುದೀಪ್ ಅವರ ಆಪ್ತ ಗೆಳತಿ ನಿಕಿತಾ ತುಕ್ರಾಲ್.
ದರ್ಶನ್ & ಜೈಲು ಸಿಬ್ಬಂದಿ ಕಿತ್ತಾಟ?
ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರು ಇದ್ದಾರೆ. ಈ ರೀತಿ ವಿಐಪಿ ಸೆಲ್ ಅಂದ್ರೆ ಪ್ರಮುಖ ವ್ಯಕ್ತಿಗಳ ಜೈಲಿನ ಕೋಣೆಗಳ ಬಳಿ ಯಾವುದೇ ಖೈದಿ & ವ್ಯಕ್ತಿಗಳನ್ನ ಸುಳಿಯಲು ಕೂಡ ಬಿಡುವುದಿಲ್ಲ. ಆದರೆ ನಟ ದರ್ಶನ್ ಅವರು ಮಾತ್ರ ಇಲ್ಲಿ ಕೊಲೆ ಆರೋಪಿ ಆಗಿ ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿ ಇದ್ದರೂ, ಜೈಲಿನ ಕೋಣೆ ಬಿಟ್ಟು ಹೊರಬಂದು ಓಡಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ, ದರ್ಶನ್ ಅವರಿಗೆ ಈ ಬಗ್ಗೆ ಬುದ್ಧಿ ಹೇಳಲು ಪರಪ್ಪನ ಅಗ್ರಹಾರದ ಜೈಲು ಸಿಬ್ಬಂದಿ ಮುಂದೆ ಬಂದರೆ ದರ್ಶನ್ ಏನ್ ಹೇಳುತ್ತಿದ್ದಾರಂತೆ ಗೊತ್ತಾ?
ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ!
ದರ್ಶನ್ ತೂಗುದೀಪ್ ಅವರು ಜೈಲಿಂದ ರಿಲೀಸ್ ಆಗಿ ಹೊರಗೆ ಬರುವವರೆಗು ಕನ್ನಡದ ಬೇರೆ ಯಾವುದೇ ಹೀರೋಗಳ ಸಿನಿಮಾ ನೋಡಬಾರದು ಎಂದು ಆಗ್ರಹಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಹೀಗಿದ್ದಾಗಲೇ, ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನ್ಮಾ ರಿಲೀಸ್‌ಗೆ ರೆಡಿಯಾಗಿದೆ. ಅದ್ರಲ್ಲೂ 'ಮಾರ್ಟಿನ್' ಟ್ರೇಲರ್ ರಿಲೀಸ್ ಆಗಿದ್ದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಏನು ಹೇಳ್ತಿದ್ದಾರೆ ಗೊತ್ತಾ? ಮಾರ್ಟಿನ್ ಟ್ರೇಲರ್ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ, ಕಮೆಂಟ್ ಏನು?? ಮುಂದೆ ಓದಿ.
ಫೈಟಿಂಗ್ ಬಲು ಜೋರು ಗುರೂ!
'ಆ್ಯಕ್ಷನ್ ಪ್ರಿನ್ಸ್' ಎಂಬ ಬಿರುದು ಪಡೆದ ಧ್ರುವ ಸರ್ಜಾರ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್. ಈ ಕಾರಣಕ್ಕೆ 'ಮಾರ್ಟಿನ್' ಸಿನಿಮಾ ನೋಡಲು ಕೋಟ್ಯಂತರ ಫ್ಯಾನ್ಸ್ ಹಾಗೂ ಕನ್ನಡಿಗರು ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಧ್ರುವ ಸರ್ಜಾ ಅವರ ಸಿನಿಮಾ 'ಮಾರ್ಟಿನ್' ಟ್ರೇಲರ್ ನೋಡಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ಜತೆಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ 'ಮಾರ್ಟಿನ್' ಟ್ರೇಲರ್ ಅತ್ಯಂತ ಕೆಟ್ಟ ಟ್ರೇಲರ್ ಅಂತಾ ಆರೋಪ ಮಾಡುತ್ತಿದ್ದಾರೆ. ಇದು ದರ್ಶನ್ ಫ್ಯಾನ್ಸ್ vs ಧ್ರುವ ಸರ್ಜಾ ಎಂಬ ರೀತಿ ವಾತಾವರಣ ಸೃಷ್ಟಿಸಿದೆ. ಅಲ್ದೆ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಜಗಳ ಶುರುವಾಗುವ ಮುನ್ಸೂಚನೆ ನೀಡುತ್ತಿದೆ.












Click it and Unblock the Notifications