Darshan Pavitra Age Difference: 14 ವರ್ಷ ಚಿಕ್ಕವಳಾದ ಪವಿತ್ರಾಗೆ ದರ್ಶನ್ ಮೇಲೆ ಲವ್: ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆ
ದರ್ಶನ್.... ದಾಸ... ಡಿ ಬಾಸ್... ಚಾಲೆಂಜಿಂಗ್ ಸ್ಟಾರ್.... ಹೀಗೆ ಒಂದಾ ಎರಡಾ... ಕನ್ನಡ ನಟ ದರ್ಶನ್ ತೂಗದೀಪ ಅವರಿಗೆ ಹೆಸರುಗಳಿರುವುದಕ್ಕಿಂತ ವಿವಾದಗಳೇ ಹೆಚ್ಚಾಗಿ ಇವೆ. ಈ ವಿವಾದಾತ್ಮಕ ನಟ ಸದ್ಯ ಕೊಲೆ ಪ್ರಕರಣದಲ್ಲಿ ಪೊಲೀಸ್ ಬಂಧನದಲ್ಲಿದ್ದಾರೆ. ಕರ್ನಾಟಕದ ಸಿನಿಮಾ ನಟ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವುದು ಇದೇ ಮೊದಲು.
ಹೀಗಾಗಿ ಇದು ದೇಶದೆಲ್ಲೆಡೆ ಭಾರೀ ಸುದ್ದಿಯಾಗಿದೆ. ಅದ್ರಲ್ಲೂ ಈ ಕೊಲೆ ನಡೆದಿರುವುದು ಒಬ್ಬ ಮಹಿಳೆಗಾಗಿ ಎನ್ನುವುದು ಅಚ್ಚರಿಯನ್ನು ತಂದಿದೆ. ಸಾಮಾನ್ಯವಾಗಿ ಕಾಲೇಜಿನಲ್ಲಿ ಒಂದು ಹುಡುಗಿಗಾಗಿ ಇಬ್ಬರು ಯುವಕರ ನಡುವೆ ಜಗಳಗಳಾಗುವುದು, ಕೊಲೆಯಾಗಿರುವ ಘಟನೆಗಳನ್ನು ನಾವು ಕೇಳಿದ್ದೇವೆ. ಆದರಿಲ್ಲಿ ಒಬ್ಬ ಖ್ಯಾತ ನಟ ಪ್ರೇಯಸಿಗಾಗಿ ಅಮಾಯಕ ಜೀವವನ್ನು ಬಲಿ ತೆಗೆದುಕೊಂಡಿದ್ದಾನೆ.

ಪ್ರೀತಿ ಕುರುಡು. ಪ್ರೀತಿಗಾಗಿ ಒಬ್ಬ ವ್ಯಕ್ತಿ ಯಾವ ಹಂತಕ್ಕೂ ಹೋಗಬಲ್ಲನು ಎನ್ನುವುದಕ್ಕೆ ನಟ ದರ್ಶನ್ ಅವರ ಪ್ರಕರಣವೇ ಸಾಕ್ಷಿ. ವಿವಾಹಿತನಾದ ದರ್ಶನ್ ಅವರು ವಿವಾಹಿತೆಯಾದ ನಟಿ ಪವಿತ್ರಾ ಗೌಡ ಅವರ ಪ್ರೀತಿಯಲ್ಲಿ ಬಿದ್ದಿದ್ದರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಪ್ರಯೋಜನವಾಗಿರಲಿಲ್ಲ.
ಆದರೆ ತನಗಿಂತ 14 ವರ್ಷ ಚಿಕ್ಕವಳಾದ ಪವಿತ್ರಾ ಗೌಡ ಅವರನ್ನು ದರ್ಶನ್ ಒಪ್ಪಿಕೊಂಡಿದ್ದರು. ಅವರೊಂದಿಗೆ ಅತ್ಯಂತ ಆತ್ಮೀಯವಾಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದರು. ಇದು ಭಾರೀ ಸುದ್ದಿ ಕೂಡ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹುಟ್ಟುಹಬ್ಬದಂದೆ ಪವಿತ್ರಾ ಗೌಡ ತಮ್ಮಿಬ್ಬರ ನಡುವಿನ ಪ್ರೀತಿ ಬಗ್ಗೆ ರಿವೀಲ್ ಮಾಡಿದ್ದರು.
ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರತಿಕ್ರಿಯೆ ನೀಡಿ ಪವಿತ್ರಾಗೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಇದ್ಯಾವುದಕ್ಕೂ ದರ್ಶನ್ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಪವಿತ್ರಾ ಗೌಡ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾ ಎನ್ನುವ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ದರ್ಶನ್ ಮತ್ತು ಆತನ ಗ್ಯಾಂಗ್ ಕೊಲೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಾಕಷ್ಟು ಸಾಕ್ಷಿಗಳು ಪೊಲೀಸರಿಗೆ ಲಭ್ಯವಾಗಿವೆ.

ಪವಿತ್ರಾ ಗೌಡ ಒಬ್ಬ ನಟಿಯಾಗಿರುವುದರಿಂದ ಯಾವುದೋ ಒಂದು ಖಾಸಗಿ ಕಾರ್ಯಕ್ರಮದಲ್ಲಿ ಸ್ನೇಹಿತರ ಮೂಲಕ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ನಂತರ ದರ್ಶನ್ ಶೂಟಿಂಗ್ ಸೆಟ್‌ಗಳಲ್ಲಿ ಒಟ್ಟಿಗೆ ಇಬ್ಬರು ಕಾಣಿಸಿಕೊಂಡಿದ್ದರು. ಅದಾದ ಬಳಿಕ ಇಬ್ಬರು ಪ್ರೇಮ ಸಂಬಂಧದಲ್ಲಿ ಇದ್ದಾರೆನ್ನುವ ಗುಮಾನಿಗಳು ಹಬ್ಬಿದ್ದವು. ಆದರೆ ಪವಿತ್ರಾ ಗೌಡ ಅವರೇ ದರ್ಶನ್ ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡಾಗ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿರುವುದು ಖಚಿತವಾಗಿತ್ತು.
ಇದರಿಂದಾಗಿ ದರ್ಶನ್‌ನ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿ ಎನ್ನುವುದು ಗೊತ್ತಾಗಿದೆ. ಪವಿತ್ರಾ ಗೌಡ ದರ್ಶನ್ ಅವರೊಂದಿಗೆ ಪೋಟೋ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಮೆಂಟ್ ಬರಲು ಆರಂಭವಾಗಿವೆ. ಕೆಲವರು ಈ ಸಂಬಂಧಕ್ಕೆ ವಿರೋಧ ಕೂಡ ವ್ಯಕ್ತಪಡಿಸಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.
33 ವರ್ಷ ವಯಸ್ಸಿನವರಾದ ಪವಿತ್ರಾ ಗೌಡ 47 ವರ್ಷ ವಯಸ್ಸಿನ ನಟ ದರ್ಶನ್ ಅವರನ್ನು ಹೇಗೆ ಪ್ರೀತಿ ಮಾಡುತ್ತಾರೆ. ಇವರಿಬ್ಬರ ಮಧ್ಯೆ ಬರೋಬ್ಬರಿ 14 ವರ್ಷಗಳ ಅಂತರವಿದೆ. ಪವಿತ್ರಾ ಗೌಡ ಅವರು ದರ್ಶನ್ಗಿಂತ 14 ವರ್ಷ ಚಿಕ್ಕವರು. ಅಲ್ಲದೆ ಪವಿತ್ರಾ ಗೌಡ ಅವರು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದಾರೆ. ಅವರಿಗೆ ಒಂದು ಹೆಣ್ಣು ಮಗು ಕೂಡ ಇದೆ. ದರ್ಶನ್ ಅವರಿಗೂ ಒಂದು ಗಂಡು ಮಗು ಇದೆ. ದರ್ಶನ್ ಹೆಂಡತಿ ಮಗು ಜೊತೆಗೆ ಚೆನ್ನಾಗಿ ಸಂಸಾರ ನಡೆಸುತ್ತಿರುವಾಗ ಪವಿತ್ರಾ ದರ್ಶನ್ ಜೀವನ ಹಾಳು ಮಾಡಿದ್ದಾರೆಂದು ಕಾಮೆಂಟ್ ಬರಲು ಶುರುವಾಗಿದೆ.

ಈ ವಿಚಾರವಾಗಿ ಪವಿತ್ರಾ ಅವರಿಗೆ ಕೆಲ ಅಶ್ಲೀಲವಾಗಿ ಕಾಮೆಂಟ್ ಕೂಡ ಬಂದಿವೆ. ಹೀಗೆ ಕಾಮೆಂಟ್ ಮಾಡಿದವರಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೂಡ ಒಬ್ಬರು. ತಮಗೆ ಕೆಟ್ಟದಾಗಿ ಮೆಸೇಜ್ ಬಂದಿರುವ ಬಗ್ಗೆ ಪವಿತ್ರಾ ಗೌಡ ದರ್ಶನ್‌ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ದರ್ಶನ್ ತಮ್ಮ ಗ್ಯಾಂಗ್ ಕಳುಹಿಸಿ ರೇಣುಕಾಸ್ವಾಮಿ ಅವರನ್ನು ಪತ್ತೆ ಮಾಡಿಸಿ ಹಲ್ಲೆ ಮಾಡಿದ್ದಾರೆ. ಹೀಗಾಗಿ ರೇಣುಕಾಸ್ವಾಮಿ ಸಾವನ್ನಪ್ಪಿದ್ದು ಈ ಕೇಸ್‌ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿದೆ.
ದರ್ಶನ್ ಬಂಧನದ ಬಳಿಕ ಪವಿತ್ರಾ ಗೌಡ ಅವರನ್ನು ಬನಬಂದಂತೆ ಜನ ನಿಂದಿಸುತ್ತಿದ್ದಾರೆ. ವಿವಾಹವಾಗಿ ಒಂದು ಮಗು ಇರುವ ಪವಿತ್ರಾ ಗೌಡಗೇ ಇದೆಲ್ಲಾ ಬೇಕಿತ್ತಾ? ತಾನಾಯ್ತು ತನ್ನ ಸಂಸಾರ ಆಯ್ತು ಅಂತ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ತಾನು ತನ್ನ ಸಂಸಾರ ಹಾಳು ಮಾಡಿಕೊಳ್ಳುವುದಲ್ಲದೆ ಒಬ್ಬ ಖ್ಯಾತ ನಟನ ಹೆಸರನ್ನೂ ಹಾಳು ಮಾಡಿದ್ಲು ಅಂತ ದರ್ಶನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಈ ಇಡೀ ಘಟನೆಯಿಂದ ಸಿನಿಮಾರಂಗ ತಲೆ ತಗ್ಗಿಸುವಂತಾಗಿದೆ. ಮತ್ತೊಬ್ಬರಿಗೆ ಮಾದರಿಯಾಗಿರಬೇಕಾಗಿದ್ದ ನಟನ ಜೀವನ ಹೀಗಾಯಿತಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದೆ. ಅಭಿಮಾನಿಗಳು, ಸಂಬಂಧಿಕರು, ಆಪ್ತರು ದರ್ಶನ್ ಮೇಲಿರುವ ಆರೋಪಗಳಿಗೆ ಪವಿತ್ರಾ ಗೌಡ ಅವರೇ ಕಾರಣ ಎಂದು ದೂರುತ್ತಿದ್ದಾರೆ.
-
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ











Click it and Unblock the Notifications