Darshan Need Counselling: ದರ್ಶನ್‌ಗೆ ಈ ಸಮಸ್ಯೆ ಇದೆ, ಕೂಡಲೇ ಕೌನ್ಸಲಿಂಗ್ ಮಾಡಿಸಿ- ಮನೋವೈದ್ಯೆ ಚಂದ್ರಿಕಾ
ಬೆಂಗಳೂರು ಜೂನ್ 22: ನಟ ದರ್ಶನ್ ಈಗ ಕೊಲೆ ಪ್ರಕರಣದ ಆರೋಪಿ. ದರ್ಶನ್ ಯಾಕೆ ಹೀಗಾದರು ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತಿದೆ. ದರ್ಶನ್ ಅವರು ಕೊಲೆ ಹಂತಕ್ಕೆ ಹೋಗಲು ಅವರಿಗಿರುವ ಕೋಪವೇ ಕಾರಣ ಎಂದು ಹೇಳಲಾಗುತ್ತಿದೆ.
ಹೌದು.. ಸಣ್ಣ ಪುಟ್ಟ್ ವಿಚಾರಕ್ಕೆ ದರ್ಶನ್ ಸಿಕ್ಕಾಪಟ್ಟಿ ಕೋಪ ಮಾಡಿಕೊಳ್ಳುತ್ತಿದ್ದರು. ಅವರು ಶೂಟಿಂಗ್ ಸೆಟ್‌ಗಳಲ್ಲಿ ಕೋಪಗೊಳ್ಳುತ್ತಿದ್ದ್ ರೀತಿ ಸೂಕ್ಷ್ಮವಾಗಿ ಗಮನಿಸಿದ ಮನೋವೈದ್ಯರು ದರ್ಶನ್ ಅವರಿಗೆ ಇರುವ ಸಮಸ್ಯೆಯ ಬಗ್ಗೆ ವಿವರವಾಗಿ ಹೇಳಿಕೊಂಡಿದ್ದಾರೆ. ನಟ ದರ್ಶನ್ ಮನಸ್ಥಿತಿ ತುಂಬಾ ಕೆಟ್ಟದಾಗಿದೆ. ಅವರು ತುಂಬಾ ಕೋಪಗೊಳ್ಳುತ್ತಾರೆ. ಅವರಿಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ಮನೋವೈದ್ಯೆಯಾದ ಚಂದ್ರಿಕಾ ಅವರು ಈ ಹಿಂದೆಯೇ ಹೇಳಿದ್ದರು.

ದರ್ಶನ್‌ಗೆ ಕೋಪ ಜಾಸ್ತಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ಇವರಿಗಿರುವ ಅತಿರೇಕದ ಕೋಪವೇ ಈ ಕೊಲೆಗೆ ಕಾರಣ ಎಂದು ಚಂದ್ರಕಾ ಅವರು ಹೇಳಿದ್ದಾರೆ. ಈ ಹಿಂದೆ ದರ್ಶನ್ ಅವರಿಗೆ ಕೌನ್ಸಿಂಗ್ ಅಗತ್ಯವಿದೆ ಎಂದು ನಾನು ಹೇಳಿದ್ದೆ, ಅವರಿಗೆ ಸಣ್ಣಪುಟ್ಟ ವಿಚಾರಕ್ಕೆ ವಿಪರೀತ ಕೋಪ ಬರುತ್ತಿದ್ದುದ್ದನ್ನ ನಾನು ವಿಡಿಯೋದಲ್ಲಿ ಗಮನಿಸಿದ್ದೆ. ಅವರಿಗೆ ಚಿಕಿತ್ಸೆ ನೀಡದೇ ಇದ್ದರೆ ಮುಂದೆ ದೊಡ್ಡ ಅಪಾಯಗಳು ಆಗಬಹುದು ಎಂದು ನಾನು ಮೊದಲೇ ಹೇಳಿದ್ದೆ ಆದರೆ ಅದನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಚಂದ್ರಿಕಾ ಹೇಳಿದ್ದಾರೆ.
ದರ್ಶನ್‌ಗೆ ನೆಗೆಟಿವ್ ಥಾಟ್ ಅಧಿಕ
'ಕಳೆದ ಜನವರಿ-ಫೆಬ್ರವರಿಯಲ್ಲಿ ದರ್ಶನ್ ಅವರ ವಿಡಿಯೋ ನೋಡಿದೆ. ಅವರಲ್ಲಿ ಸಾಕಷ್ಟು ನೆಗೆಟಿವ್ ಥಾಟ್ ಇತ್ತು. ಚಿತ್ರರಂಗದಲ್ಲಿ ಗೊತ್ತಿದ್ದವರಿಗೆ ಮೆಸೇಜ್ ಮಾಡಿ, ದರ್ಶನ್ ಕೌನ್ಸಿಂಗ್ ಮಾಡಿಸಿ' ಎಂದು ಹೇಳಿದ್ದೆ. ಯಾವುದೇ ಒಬ್ಬ ಮನುಷ್ಯನಲ್ಲಿ ಒಂದು ಸಲ ವಿವಾದ ಹುಟ್ಟಿಕೊಳ್ಳಬಹುದು. ಆದರೆ ದರ್ಶನ್ ವಿಚಾರದಲ್ಲಿ ಪದೇ ಪದೇ ವಿವಾದ ಹುಟ್ಟಿಕೊಳ್ಳುತ್ತಲೇ ಇತ್ತು. ಅವರಿಗೆ ಮಾತು ಮಾತಲ್ಲೇ ಕೋಪ ಬರ್ತಾಯಿತ್ತು. ಇದು ಸಾಮಾನ್ಯ ಗುಣವಲ್ಲ. ಒತ್ತಡ, ಅವರ ಯೋಚನೆ ನೆಗೆಟಿವ್ ಥಾಟ್ ಇವೆಲ್ಲವನ್ನೂ ನೋಡಿದಾಗ ಅವರು ಸಾಮಾನ್ಯವಾಗಿಲ್ಲ ಅಂತ ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ.
ದರ್ಶನ್ ಅವರೊಂದಿಗೆ ಹೇಗಿರಬೇಕು?
ನೆಗೆಟಿವ್ ಥಾಟ್‌ಗೆ ರಿಯಾಕ್ಟ್ ಮಾಡ್ಬಾರ್ದು. ಮಾಡಿದರೆ ಅದು ಹೇಗೆ ಬೇಕಾದರೂ ರಿಪ್ಲೈ ನೀಡಬಹುದು. ಅವರು ಏನು ಮಾತಾಡುತ್ತಾರೆ ಅನ್ನೋದು ಕೂಡ ಅವರಿಗೆ ಗೊತ್ತಾಗೋದಿಲ್ಲ. ಅವರು ಏನು ಮಾಡಿದರೂ ಆ ಒಂದು ಕ್ಷಣ ಕೋಪ ಅವರನ್ನೇ ಮರೆಸಿಬಿಡುತ್ತದೆ. ಈ ರೀತಿಯ ಸಮಸ್ಯೆ ದರ್ಶನ್ ಅವರಿಗೆ ಇದೆ.

ಇದನ್ನು ತಡೆಯಬೇಕು ಅಂತ ನಾನು ಅಂದುಕೊಂಡೆ. ಅವರ ಶೂಟಿಂಗ್ ಸಹಪಾಠಿಗಳೊಂದಿಗೂ ನಾನು ಮಾತನಾಡಿ ಹೇಳಿದ್ದೆ. ಆದರೆ ಅದನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಿಲ್ಲ. ಅದರ ಪರಿಣಾಮವೇ ಈ ಕೊಲೆ ಅನಿಸುತ್ತದೆ. ಕೋಪ ಮನಷ್ಯನನ್ನು ಒಂದು ಕ್ಷಣ ಏನು ಬೇಕಾದರೂ ಮಾಡಿಬಿಡಬಹುದು. ಮನುಷ್ಯನಲ್ಲಿ ಎಲ್ಲಾ ಗುಣಗಳು ಇರುತ್ತವೆ. ಅವು ಎಷ್ಟಮಟ್ಟಿಗೆ ಇರಬೇಕೋ ಅಷ್ಟೇ ಇರಬೇಕು. ಆದರೆ ದರ್ಶನ್‌ಗೆ ಕೋಪ ಜಾಸ್ತಿ ಇದೆ. ಇದು ಉತ್ತಮ ಲಕ್ಷಣವಲ್ಲ. ಇದಕ್ಕೆ ಕೌನ್ಸಲಿಂಗ್ ಅತ್ಯಗತ್ಯ.
ಯಾಕೆಂದರೆ ಈ ರೀತಿಯ ವ್ಯಕ್ತಿಗಳೊಂದಿಗೆ ಹೇಗೆ ಮಾತನಾಡಬೇಕು, ಹೇಗೆ ಅವರನ್ನು ಈ ಸಮಸ್ಯೆಯಿಂದ ದೂರ ಮಾಡಬೇಕು ಅನ್ನೋದನ್ನು ಒಬ್ಬ ಮನೋವೈದ್ಯರಿಗೆ ಮಾತ್ರ ತಿಳಿದಿರುತ್ತದೆ. ಹೀಗಾಗಿ ಅವರಿಗೆ ಕೌನ್ಸಲಿಂಗ್ ಅವಶ್ಯಕವಾಗಿದೆ ಎಂದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಕೋಪ ಬಂದು ಅವರು ಅವರಿಗೇ ಗೊತ್ತಿಲ್ಲದಂತೆ ಹೇಗೆ ಬೇಕಾದರೂ ವರ್ತಿಸಬಹುದು. ಇದು ತುಂಬಾ ಗಂಭೀರವಾಗಬಹುದು ಎಂದು ಚಂದ್ರಿಕಾ ಅವರು ಹೇಳಿದರು.












Click it and Unblock the Notifications