ನಾನು ಯಶ್ ತರ ಬೆಳಿಯಲ್ಲ: ಸೀತಾರಾಮ ನಟ ಗಗನ್ ಹೀಗಂದಿದ್ದೇಕೆ?
ಸೀತಾರಾಮ ಸೀರಿಯಲ್ ಖ್ಯಾತಿಯ ನಟ ಗಗನ್ ಚಿನ್ನಪ್ಪ ಅವರು ಇತ್ತೀಚಿನ ಸಂದರ್ಶನಗಳಲ್ಲಿ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ನಟರ ಬಗ್ಗೆ ಮಾತನಾಡಿರುವ ಅವರು ಯಾರಿಗೂ ಕಾಂಪೆಟೇಶನ್ ಕೊಡಲು ಹೋಗಬೇಡಿ ಎಂದಿದ್ದಾರೆ. ಸೆಟ್‌ನಲ್ಲಿ ಕೂಡ ಬೇರೆಯವರು ಹೇಳೋದನ್ನ ಕೇಳಿ. ನಾನು ಯಾವುದೇ ಆಕ್ಟಿಂಗ್ ಕ್ಲಾಸ್‌ಗೆ ಹೋಗಿಲ್ಲ, ನನಗೆ ಯಾವುದೇ ಆಕ್ಟಿಂಗ್ ಅನುಭವ ಇರಲಿಲ್ಲ ಎಂದು ಗಗನ್ ಹೇಳಿದ್ದಾರೆ.
ನಾನು ಜಿಮ್‌ಗೆ ಹೋಗುತ್ತಿದ್ದೆ. ಅದೇ ಜಿಮ್‌ಗೆ ದರ್ಶನ್ ಸರ್ ಕೂಡ ವರ್ಕೌಟ್ ಮಾಡಲು ಬರ್ತಿದ್ರು. ಒಂದು ಟೈಮಲ್ಲಿ ನಾವೆಲ್ಲ ಸಖತ್ ಕ್ಲೋಸ್ ಇದ್ವಿ, ಅವರ ಬಿಟಿಎಂ ಮನೆಗೆಲ್ಲ ಹೋಗಿ ಬಂದಿದ್ದೆ. ಅವರು ಒಂದು ಪಕ್ಷಿ ಸಾಕಿದ್ರು, ಅದನ್ನು ನನ್ನ ಮೇಲೆ ಛೂ ಬಿಡೋರು, ಆಗ ನಾನಿನ್ನೂ ಚಿಕ್ಕವನು, ಸಿಕ್ಕಾಪಟ್ಟೆ ತರ್ಲೆ ಆಗಿದ್ದೆ ಎಂದು ದರ್ಶನ್ ಅವರೊಂದಿಗಿನ ನಂಟನ್ನು ಬಿಚ್ಚಿಟ್ಟಿದ್ದಾರೆ.

ನಾನು ಸ್ಕೂಲ್‌ನಲ್ಲಿರಬೇಕಾದರೆ ನಟ ದರ್ಶನ್ ಸರ್ ಗೊತ್ತಿದ್ರು, ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರು ಕೂಡ ನನಗೆ ಪರಿಚಯ. ನಮ್ಮ ತೋಟದಲ್ಲಿ ಬೆಳೆಯುವ ಹಣ್ಣುಗಳೆಲ್ಲ ಅವರ ಮನೆಗೆ ಹೋಗುತ್ತೆ. ಅವರು ಕೂಡ ಕೊಡಗಿನ ಪೊನ್ನಂಪೇಟೆಯವರು. ಹಾಗಾಗಿ ಆಂಟಿ ಜೊತೆ ನಾವೆಲ್ಲ ಕೂರ್ಗಿ ಭಾಷೆಯಲ್ಲೇ ಮಾತನಾಡುತ್ತೇವೆ. ಅವರು ನನಗೆ ತುಂಬಾ ಕ್ಲೋಸ್ ಎಂದಿದ್ದಾರೆ ಗಗನ್ ಚಿನ್ನಪ್ಪ.
ದರ್ಶನ್ ತಾಯಿ ನನಗೆ ದೊಡ್ಡ ಅಭಿಮಾನಿ
ಇನ್ನು ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರೊಂದಿಗೆ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡ್ತೀನಿ. ಅವರು ನನಗೆ ತುಂಬಾ ದೊಡ್ಡ ಫ್ಯಾನ್, ಅವರು ನನ್ನನ್ನ ಮಗ ಎಂದುಕೊಂಡೇ ಮಾತನಾಡಿಸುತ್ತಿದ್ರು, ನಾನು ಚಿಕ್ಕವಯಸ್ಸಿನಲ್ಲೇ ಇಂಡಸ್ಟ್ರಿಯ ಮಕ್ಕಳೊಂದಿಗೆ ಬೆಳೆದೆ. ದಿಗಂತ್, ಜೈಜಗದೀಶ್ ಮಕ್ಕಳು ಅವರೆಲ್ಲ ನನ್ನ ಫ್ರೆಂಡ್ಸ್. ಆದ್ರೆ ನಾನು ಅವರ ಯಾರ ಸಹಾಯದಿಂದಲೂ ಇಂಡಸ್ಟ್ರಿಗೆ ಬರಲಿಲ್ಲ, ನನ್ನ ಶ್ರಮದಿಂದಲೇ ಇಂದು ಈ ಮಟ್ಟಕ್ಕೆ ಬಂದಿದ್ದೀನಿ ಎಂದು ಗಗನ್ ಹೇಳಿದ್ದಾರೆ.
ನನಗೆ ಯಶ್ ತರಾನೇ ಆಗಬೇಕು ಅಂತಲ್ಲ, ಅವರಂತೆ ವಿಶನ್ ಇದೆ. ಎಲ್ಲಿಗೆ ಗುರಿ ತಲುಪಬೇಕು ಅನ್ನೋದಿದೆ. ಆದರೆ ಯ ತರಾನೇ ಬೆಳೀಬೇಕು ಅಂತಿಲ್ಲ, ನಾನು ಯಾರಿಗೂ ಕಾಪಿ ಆಗಲು ಇಷ್ಟವಿಲ್ಲ. ಯಾಕಂದ್ರೆ ಅವರೆಲ್ಲ ಒರಿಜನಲ್. ಯಶ್, ದರ್ಶನ್, ಸುದೀಪ್ ಅವರನ್ನು ಯಾರೂ ರೀಪ್ಲೇಸ್ ಮಾಡಲು ಸಾಧ್ಯವೇ ಇಲ್ಲ. ನಾನು ಹೊಸಬರಿಗೂ ಅದನ್ನೇ ಹೇಳ್ತೀನಿ, ಯಾರಿಗೂ ಕಾಂಪಿಟೇಷನ್ ಕೊಡಲು ಹೋಗಬೇಡಿ.
ಸೆಟ್‌ನಲ್ಲಿ ಕೂಡ ಬೇರೆಯವರು ಹೇಳೋದನ್ನ ಕೇಳಿ. ನಾನು ಯಾವುದೇ ಆಕ್ಟಿಂಗ್ ಕ್ಲಾಸ್‌ಗೆ ಹೋಗಿಲ್ಲ, ನನಗೆ ಯಾವುದೇ ಆಕ್ಟಿಂಗ್ ಅನುಭವ ಇರಲಿಲ್ಲ ಎಂದು ಗಗನ್ ಹೇಳಿದ್ದಾರೆ. ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿರುವ ನಟ ಗಗನ್ ಚಿನ್ನಪ್ಪ ಅವರು ಈಗಾಗಲೇ ಕರ್ನಾಟಕದ ಮನೆಮಾತಾಗಿದ್ದಾರೆ. ಇತ್ತೀಚೆಗಷ್ಟೇ ಸೀತಾರಾಮ ಸೀರಿಯಲ್ ಮುಗಿಸಿರುವ ಅವರು ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಲಿದ್ದಾರೆ.












Click it and Unblock the Notifications