Darshan: ಸಂಕ್ರಾಂತಿಯಂದೇ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ದರ್ಶನ್, ಪೋಸ್ಟ್‌ನಲ್ಲಿ ಏನಿದೆ ?
ನಟ ದರ್ಶನ್ ಬರೋಬ್ಬರಿ 8 ತಿಂಗಳ ನಂತರ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು. 2025ರ ವರ್ಷದ ಮೊದಲ ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ನಟ ದರ್ಶನ್ ಸಿಹಿಸುದ್ದಿಯನ್ನು ಕೊಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಇದೇ ಮೊದಲ ಬಾರಿ ಇನ್ಸ್‌ಟಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮತ್ತೆ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ದರ್ಶನ್ ಅವರ ಸಂಕ್ರಾಂತಿ ವಿಶ್‌ಗೆ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೂರ್ಯ ಪಥ ಬದಲಾದಂತೆ ದರ್ಶನ್ ಬಾಳಲ್ಲೂ ಒಳ್ಳೆಯದು ನಡೆಯಲಿ ಅಂತ ಅವರ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಹಾಗಾದರೆ ದರ್ಶನ್ ಮಾಡಿದ ಪೋಸ್ಟ್ ಏನು ಎನ್ನುವ ವಿವರ ಇಲ್ಲಿದೆ.

ನಟ ದರ್ಶನ್ ಬರೋಬ್ಬರಿ 8 ತಿಂಗಳಾದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು. ಸಂಕ್ರಾಂತಿ ಸಂಭ್ರಮದ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಇಷ್ಟದ ಕುದುರೆ ಜೊತೆಗೆ ನಿಂತಿರುವ ಫೋಟೋವನ್ನ ಶೇರ್ ಮಾಡಿಕೊಂಡು ಫ್ಯಾನ್ಸ್‌ಗೆ ಸಂದೇಶ ಕೊಟ್ಟಿದ್ದಾರೆ.
ಮಕರ ಸಂಕ್ರಾಂತಿ ವಿಶ್ ಮಾಡಿದ ದರ್ಶನ್: ನಟ ದರ್ಶನ್ ಅವರು ಸಂಕ್ರಾಂತಿ ಹಬ್ಬದ ಶುಭಾಯಶ ತಿಳಿಸಿದ್ದಾರೆ. ನಾಡಿನ ಸಮಸ್ತ ಜನರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆನ್ನುವ ಗಾಳಿಪಟಗಳು ಎತ್ತರಕ್ಕೆ ಹಾರಲಿ. ಸಮೃದ್ಧಿ ಹಾಗೂ ಸಂತೋಷವನ್ನು ತರಲಿ. ಎಳ್ಳುಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ.. ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶುಭಕೋರಿದ್ದಾರೆ.
ದರ್ಶನ್ ಫ್ಯಾನ್ಸ್ ಫಿದಾ: ಇನ್ನು ನಟ ದರ್ಶನ್ ಅವರು ಮಕರ ಸಂಕ್ರಾಂತಿಗೆ ವಿಶ್ ಪೋಸ್ಟ್‌ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ದರ್ಶನ್ ಅವರು ಪೋಸ್ಟ್ ಮಾಡುತ್ತಿದ್ದಂತೆಯೇ ಅವರ ಫ್ಯಾನ್ಸ್‌ಗಳು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನಿಮ್ಮ ಜೀವನದಲ್ಲಿ ಕಹಿ ಘಟನೆಗಳು ಹೋಗಿ ಸಿಹಿ ಜೀವನ ಆರಂಭವಾಗಲಿ ಅಂತ ಡಿ ಫ್ಯಾನ್ಸ್ ಶುಭಕೋರಿದ್ದಾರೆ. ನಿಮ್ಮ ಡೆವಿಲ್ ಸಿನಿಮಾಗೋಸ್ಕರ ಕಾಯುತ್ತಿದ್ದೇವೆ. ಇನ್ನು ಕೆಲವರು ಇನ್ಸಾಟ್‌ಗ್ರಾಮ್‌ಗೆ ಕಳೆ ಬಂತು ಅಂತ ಹೇಳುತ್ತಿದ್ದಾರೆ.
ಕೆಲವೇ ನಿಮಿಷದಲ್ಲಿ ಲಕ್ಷ ಲಕ್ಷ ರೀಚ್: ಇನ್ನು ನಟ ದರ್ಶನ್ ವಿಶ್ ಮಾಡಿ ಪೋಸ್ಟ್ ಮಾಡುತ್ತಿದ್ದಂತೆಯೆ ಕೆಲವೇ ನಿಮಿಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಈ ಪೋಸ್ಟ್ ಲೈಕ್ ಮಾಡಿದ್ದು. ಸಾವಿರಾರು ಜನ ಕಮೆಂಟ್ ಮಾಡಿದ್ದಾರೆ. ಕಮೆಂಟ್‌ನಲ್ಲಿ ಒಳ್ಳೆಯದಾಗಲಿ.. ಜೈಡಿಬಾಸ್ ಎನ್ನುವ ಕಮೆಂಟ್‌ಗಳು ಹೆಚ್ಚಾಗಿ ಇವೆ.
ಫೋಟೋ ನೋಡಿ ಖುಷಿ ಪಟ್ಟ ಫ್ಯಾನ್ಸ್: ದರ್ಶನ್ ಅವರ ಫೋಟೋ ನೋಡಿ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ. ದರ್ಶನ್ ಅವರನ್ನು ತುಂಬಾ ದಿನಗಳ ನಂತರ ಈ ರೀತಿ ನೋಡುತ್ತಿದ್ದೇವೆ. ಈ ತರ ನೋಡೋಕೆ ಖುಷಿ ಆಗುತ್ತಿದೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾಗೆ ಬಂದ ದರ್ಶನ್: ದರ್ಶನ್ ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ಇಲ್ಲಿಯ ವರೆಗೆ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಇದೀಗ ಸಂಕ್ರಾಂತಿ ಸಂಭ್ರಮದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು ಅಭಿಮಾನಿಗಳಲ್ಲಿ ಸಂತೋಷವನ್ನು ಉಂಟು ಮಾಡಿದೆ.












Click it and Unblock the Notifications