Vijayalakshmi Darshan: ದರ್ಶನ್ ಫ್ಯಾನ್ಸ್ಗೆ ಹೆಣ್ಣುಮಕ್ಕಳನ್ನ ಗೌರವಿಸುವುದು ಹೇಗೆಂದು ಗೊತ್ತಿದೆ: ವಿಜಯಲಕ್ಷ್ಮಿ
ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿದ್ದು, ಅವರು ನಟಿಸಿರುವ "ಡೆವಿಲ್" ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಡಿಬಾಸ್ ಅಭಿಮಾನಿಗಳು ಈ ಸಿನಿಮಾವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮೆರೆಸುತ್ತಿದ್ದಾರೆ. ಇದರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಮೊದಲ ಬಾರಿಗೆ ಸಂದರ್ಶನ ನೀಡಿ ಅಚ್ಚರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಡೆವಿಲ್ ಸಿನಿಮಾ, ಡಿಬಾಸ್ ಅಭಿಮಾನಿಗಳ ಮೇಲಿನ ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಜೊತೆಗೆ ಮಾಧ್ಯಮಗಳಿಗೂ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಡಿ ಕಂಪನಿ ಯುಟ್ಯೂಬ್ ಚಾನೆಲ್ಗೆ ವಿಜಯಲಕ್ಷ್ಮಿ ದರ್ಶನ್ ಸಂದರ್ಶನ ನೀಡಿದ್ದು, ಡೆವಿಲ್ ಸಿನಿಮಾ ನಾಯಕಿ ರಚನಾ ರೈ ಸಂದರ್ಶನ ನಡೆಸಿಕೊಟ್ಟಿದ್ದಾರೆ. ಈ ಸಂದರ್ಶನದ ತುಣುಕನ್ನು ಡಿ ಕಂಪನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ವಿಜಯಲಕ್ಷ್ಮಿ ಅವರು ಡೆವಿಲ್ ಸಿನಿಮಾದ ಸಕ್ಸಸ್, ಜೈಲಿನಲ್ಲಿ ದರ್ಶನ್ ಅವರ ಸ್ಥಿತಿ, ಡಿಬಾಸ್ ಅಭಿಮಾನಿಗಳು, ನೆಗೆಟಿವ್ ಮಾತುಗಳ ಬಗ್ಗೆ ಉಲ್ಲೇಖಿಸಿದ್ದಾರೆ.

'ಡೆವಿಲ್ ಸಕ್ಸಸ್ ನೋಡಿ ನನಗೆ ತುಂಬಾನೇ ಖುಷಿ ಆಗ್ತಿದೆ. ದರ್ಶನ್ ಇಲ್ಲದಿದ್ದರೂ ಅವರ ಅಭಿಮಾನಿಗಳು ಸಿನಿಮಾನ, ದರ್ಶನ್ನ ತಲೆ ಮೇಲೆ ಇಟ್ಟುಕೊಂಡು ಮೆರೆಸುತ್ತಾರೆ ಅನ್ನೋದಕ್ಕೆ ಇದೊಂದು ಸಾಕ್ಷಿ. ಡೆವಿಲ್ ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ದರ್ಶನ್ ಮತ್ತೆ ಜೈಲಿಗೆ ಹೋಗ್ತಾರೆ, ಈ ತರ ಆಗುತ್ತೆ ಅಂತ ಗೊತ್ತೂ ಇರಲಿಲ್ಲ. ಇದನ್ನು ನಾವು ನಿರೀಕ್ಷೆಯೂ ಮಾಡಿರಲಿಲ್ಲ' ಎಂದಿದ್ದಾರೆ ವಿಜಯಲಕ್ಷ್ಮಿ.
'12 ಗಂಟೆಗೆ ದರ್ಶನ್ ಫೋನ್ ಮಾಡಿದ್ರು'
'ದರ್ಶನ್ ಈ ವೃತ್ತಿಯನ್ನ ದೇವರಿಗಿಂತ ಜಾಸ್ತಿ ಪೂಜಿಸುತ್ತಾರೆ. ನೀನು ಪದೇ ಪದೇ ಹುಟ್ಟಿ ಬರಬೇಕು ಈ ಋಣ ತೀರಿಸೋಕೆ ಅಂತೆಲ್ಲ ಅಂತಾರೆ. ವಾರದಲ್ಲಿ ಅವರು ನನಗೆ ಎರಡು ಸಲ ಫೋನ್ ಮಾಡ್ತಾರೆ. ಆ ದಿನ 12 ಗಂಟೆಗೆ ಫೋನ್ ಮಾಡಿದ್ರು. ಆಗ ಅವರು ಮೊದಲು ಕೇಳುವುದೇ ವಿಜಿ ಸಿನಿಮಾ ಹೇಗಿದೆ? ಸಿನಿಮಾ ನೋಡಿ ಜನ ಮಜಾ ಮಾಡ್ತಿದ್ದಾರಾ? ಸಿನಿಮಾ ಹೇಗೆ ಬಂದಿದೆ? ನಿರ್ಮಾಪಕರು ಖುಷಿನಾ? ಅಂತ ಕೇಳಿದ್ರು' ಎಂದಿದ್ದಾರೆ.
ಮಾಸ್ ಗು ಸೈ, ಕ್ಲಾಸ್ ಗೂ ಸೈ! ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ಅವರು ನಮ್ಮ ಡಿ ಕಂಪನಿ ಯುಟ್ಯೂಬ್ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನದ ಸಣ್ಣ ಝಲಕ್ ಇಲ್ಲಿದೆ! ಸಂಪೂರ್ಣ ಎಪಿಸೋಡ್ ನಾಳೆ ಬಿಡುಗಡೆಯಾಗಲಿದೆ
— D Company(R)Official (@Dcompany171) December 13, 2025
@dasadarshan @vijayaananth2 pic.twitter.com/3to1RN4vza
'ಇನ್ನು ನನ್ನ ಬಗ್ಗೆ ನೆಗೆಟಿವ್ ಮಾತನಾಡಿದ್ರೆ ನನ್ನ ಮೇಲೆ ಯಾವುದೇ ಪರಿಣಾಮ ಬೀರಲ್ಲ, ನನ್ನ ಮಗ ವಿನೀಶ್ ಬಗ್ಗೆ ಮಾತನಾಡಿದ್ರೂ ಪರಿಣಾಮ ಬೀರಲ್ಲ. ಶೇ 90ರಷ್ಟು ಜನ ನಮಗೆ ಪ್ರೀತಿ ತೋರಿಸ್ತಾರೆ ಅಂದ ಮೇಲೆ ಅಷ್ಟು ಸಾಕು! ನೆಗೆಟಿವ್ ಕಾಮೆಂಟ್ಗಳನ್ನು ನಾನು ಓದುವುದೂ ಇಲ್ಲ. ನಾನು ಅದಕ್ಕೆಲ್ಲ ಕೇರ್ ಕೂಡ ಮಾಡಲ್ಲ' ಎಂದು ಹೇಳಿದ್ದಾರೆ.
'ಅನಕ್ಷರಸ್ಥರು' ಎಂದವರಿಗೆ ಟಾಂಗ್
'ಹೆಣ್ಣುಮಕ್ಕಳನ್ನು ಗೌರವಿಸುವುದು ಹೇಗೆ ಎನ್ನುವುದು ದರ್ಶನ್ ಫ್ಯಾನ್ಸ್ಗೆ ಗೊತ್ತಿದೆ' ಎಂದು ವಿಜಯಲಕ್ಷ್ಮಿ ತಿರುಗೇಟು ನೀಡಿದ್ದಾರೆ. 'ಇನ್ನು ದರ್ಶನ್ ಹಾಗು ಅವರ ಫ್ಯಾನ್ಸ್ನ ಟಾರ್ಗೆಟ್ ಮಾಡುತ್ತಿರುವ ವಿಚಾರದ ಬಗ್ಗೆ ಮಾತನಾಡಿರುವ ಅವರು, ನಮ್ಮ ಸೆಲೆಬ್ರಿಟೀಸ್ ಹತ್ತಿರ ಹಣ ಸಂಗ್ರಹಿಸಿ, ಒಂದು ಸ್ಕೂಲ್ ತೆರೆಯೋಣ. ಯಾರೆಲ್ಲ ಅವರನ್ನ ಅನ್ಎಜುಕೇಟೆಡ್ ಅಂತಿದ್ದಾರಲ್ಲ? ಅವರನ್ನೇ ಆ ಶಾಲೆಗೆ ಕರೆಸಿ, ಇವರನ್ನು ಎಜುಕೇಟ್ ಮಾಡಿ ಅಂತ ಹೇಳೋಣ' ಎಂದು ಟಾಂಗ್ ಕೊಟ್ಟಿದ್ದಾರೆ. 'ಮೀಡಿಯಾಗಳಿಗೆ ನನ್ನ ಮನವಿ ಏನಂದ್ರೆ, ನೀವು ಸುದ್ದಿ ಮಾಡುವಾಗ ಅದರ ಬಗ್ಗೆ ಯೋಚಿಸಿ, ಆ ಸುದ್ದಿ ನಿಜಾನಾ? ಅಂತ ಪರಿಶೀಲಿಸಿ ಸುದ್ದಿ ಪ್ರಸಾರ ಮಾಡಿ' ಎಂದು ವಿಜಯಲಕ್ಷ್ಮಿ ಕಿವಿಮಾತು ಹೇಳಿದ್ದಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್












Click it and Unblock the Notifications