ನಟ ದರ್ಶನ್‌ಗೆ ಜೂನ್‌ ವೇಳೆಗೆ ಜಾಮೀನು, 2029ರೊಳಗೆ ಕೇಸ್‌ನಿಂದ ಖುಲಾಸೆ: ಖ್ಯಾತ ಜ್ಯೋತಿಷಿ ಭವಿಷ್ಯ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ತೂಗುದೀಪ ಅವರಿಗೆ ಜಾಮೀನು ಸಿಗುವ ವಿಚಾರದ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಶಾಂತ್‌ ಕಿಣಿ (Prashanth Kini) ಅಚ್ಚರಿ ಭವಿಷ್ಯ ನುಡಿದಿದ್ದಾರೆ. ದರ್ಶನ್‌ ಅವರಿಗೆ ಯಾವ ತಿಂಗಳಲ್ಲಿ ಜಾಮೀನು ಸಿಗಲಿದೆ? ಹಾಗೂ ಈ ಕೇಸ್‌ನಿಂದ ಯಾವಾಗ ಹೊರಬರುತ್ತಾರೆ? ಎಂಬ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಈ ಭವಿಷ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ದರ್ಶನ್ ಅಭಿಮಾನಿಗಳಲ್ಲಷ್ಟೇ ಅಲ್ಲ, ಸಿನಿ ಹಾಗೂ ರಾಜಕೀಯ ವಲಯದಲ್ಲಿಯೂ ಈ ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ.

ಪ್ರಶಾಂತ್‌ ಕಿಣಿ ಅವರ ಭವಿಷ್ಯದ ಪ್ರಕಾರ, ದರ್ಶನ್ ಜೀವನದಲ್ಲಿ ನಡೆಯುತ್ತಿರುವ ಈ ಕಠಿಣ ಹಂತ ದೀರ್ಘ ಕಾಲ ಮುಂದುವರಿಯುವುದಿಲ್ಲ. ಈಗಿನ ಸಂಕಷ್ಟಗಳು ಅವರ ಜೀವನದಲ್ಲಿ ದೊಡ್ಡ ತಿರುವು ತರಲಿದ್ದು, ಮುಂದೆ ನಿಧಾನವಾಗಿ ಸಕಾರಾತ್ಮಕ ಬೆಳವಣಿಗೆಗಳು ಕಾಣಿಸಿಕೊಳ್ಳಲಿವೆ ಎಂದು ಅವರು ಸೂಚಿಸಿದ್ದಾರೆ.

Darshan Bail Prediction June 2026 Astrologer Prashanth Kini

ಕೇಸ್‌ನಿಂದ ದರ್ಶನ್‌ಗೆ ಮುಕ್ತಿ

ಪ್ರಶಾಂತ್‌ ಕಿಣಿ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು, ʼʼಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾನೂನು ಹೋರಾಟದ ಭವಿಷ್ಯದ ಬಗ್ಗೆ ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದಾರೆ. 2026ರ ಜೂನ್ ತಿಂಗಳೊಳಗೆ ದರ್ಶನ್ ಅವರಿಗೆ ಜಾಮೀನು ಸಿಗಲಿದೆ. 2029ರೊಳಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಸಂಪೂರ್ಣವಾಗಿ ಖುಲಾಸೆಯಾಗಲಿದ್ದಾರೆʼʼ ಎಂದು ಭವಿಷ್ಯ ನುಡಿದಿದ್ದಾರೆ.

ಈ ಭವಿಷ್ಯ ಹೊರಬಂದ ಬಳಿಕ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷೆಯ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. "ಜೈಲಿನಿಂದ ಹೊರಬಂದು ಮತ್ತೆ ದರ್ಶನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು. "ದೇವರು, ಕಾಲ ಮತ್ತು ನ್ಯಾಯ ಒಮ್ಮೆ ದರ್ಶನ್ ಪರ ನಿಲ್ಲುತ್ತವೆ" ಎಂದು ಅಭಿಮಾನಿಗಳ ಕಾಮೆಂಟ್‌ಗಳು ಹೆಚ್ಚಾಗಿವೆ.

ಇನ್ನೊಂದೆಡೆ, ಜ್ಯೋತಿಷ್ಯದ ಭವಿಷ್ಯವನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಕೆಲವರು, "ಇದು ಕಾನೂನು ವಿಚಾರ, ಜ್ಯೋತಿಷ್ಯದಿಂದಲ್ಲ, ನ್ಯಾಯಾಲಯದಿಂದಲೇ ನಿರ್ಧಾರವಾಗಬೇಕು"ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಆದರೂ, ಪ್ರಶಾಂತ್‌ ಕಿಣಿ ಅವರ ಹಿಂದಿನ ಕೆಲವು ಭವಿಷ್ಯಗಳು ನಿಜವಾಗಿದ್ದವು ಎಂಬ ಕಾರಣಕ್ಕೆ, ಈ ಭವಿಷ್ಯಕ್ಕೂ ಹೆಚ್ಚಿನ ಗಮನ ಸೆಳೆಯುತ್ತಿದೆ.

ಪ್ರಸ್ತುತ ಜೈಲಿನಲ್ಲಿರುವ ನಟ ದರ್ಶನ್‌ ಅವರ ಜಾಮೀನು ಅರ್ಜಿ ಮತ್ತು ಕಾನೂನು ಪ್ರಕ್ರಿಯೆಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಅದೇ ಸಮಯದಲ್ಲಿ ಪ್ರಶಾಂತ್‌ ಕಿಣಿ ಅವರ ಈ ಅಚ್ಚರಿ ಭವಿಷ್ಯವು ದರ್ಶನ್ ಪ್ರಕರಣಕ್ಕೆ ಮತ್ತೊಂದು ಆಯಾಮವನ್ನು ನೀಡಿದೆ. ಜಾಮೀನು, ಖುಲಾಸೆ ಇವೆಲ್ಲವೂ ಯಾವಾಗ, ಹೇಗೆ ನಡೆಯಲಿದೆ? ಎಂಬುದು ಕಾನೂನಿನ ಕೈಯಲ್ಲಿದ್ದರೂ, ಈ ಭವಿಷ್ಯ ದರ್ಶನ್ ಅಭಿಮಾನಿಗಳಿಗೆ ಕನಿಷ್ಠ ಮಟ್ಟದ ಭರವಸೆ ಮತ್ತು ಧೈರ್ಯ ನೀಡಿರುವುದಂತೂ ಸತ್ಯ.

ಗಿಲ್ಲಿ ಬಿಗ್‌ಬಾಸ್‌ ಗೆಲ್ಲಲ್ಲ ಎಂದಿದ್ದ ಜ್ಯೋತಿಷಿ

ಇದೇ ಪ್ರಶಾಂತ್ ಕಿಣಿ ಅವರು ಗಿಲ್ಲಿ ನಟ ಬಿಗ್‌ಬಾಸ್‌ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಈ ಬಗ್ಗೆಯೂ ಭಾರೀ ಚರ್ಚೆಯಾಗಿತ್ತು. ಆದರೆ ಅಂತಿಮವಾಗಿ ಗಿಲ್ಲಿ ಬಿಗ್‌ಬಾಸ್‌ ವಿನ್ನರ್‌ ಆಗಿ ಹೊರಹೊಮ್ಮಿದರು. ಹೀಗಾಗಿ ದರ್ಶನ್‌ ಅವರ ಬಗ್ಗೆ ನುಡಿದಿರುವ ಭವಿಷ್ಯ ಕೂಡ ಎಷ್ಟರಮಟ್ಟಿಗೆ ನಿಜವಾಗುತ್ತೆ? ಎಂಬುದು ಸದ್ಯದಲ್ಲೇ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+