Kaatera: ನಾನು ಡಾ. ರಾಜ್‌ ಕುಮಾರ್ ಕಾಲಿನ ಧೂಳಿಗೂ ಸಮವಲ್ಲ: ಚಾಲೆಂಜಿಂಗ್ ಸ್ಟಾರ್ ದರ್ಶನ್

ಬಾಕ್ಸ್‌ ಆಫೀಸ್ ಸುಲ್ತಾನ್ ದರ್ಶನ್ ಮತ್ತೆ ಹಳೆ ಚಾರ್ಮ್‌ಗೆ ಮರಳಿದ್ದಾರೆ, ಕಾಟೇರ 2023ರ ದೊಡ್ಡ ಹಿಟ್ ಸಿನಿಮಾ ಆಗಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. 4 ದಿನಗಳಲ್ಲಿ 70 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದ್ದು, ಶತಕೋಟಿ ಸಿನಿಮಾ ಆಗುವತ್ತ ಮುನ್ನುಗ್ಗುತ್ತಿದೆ.

ದೊಡ್ಡ ಮಟ್ಟದ ಯಶಸ್ಸಿನ ನಂತರ ಚಿತ್ರತಂಡ ಸಕ್ಸಸ್ ಮೀಟ್ ಮಾಡಿದೆ. ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ದರ್ಶನ್‌ರನ್ನು ಡಾ. ರಾಜ್‌ಕುಮಾರ್ ಅವರಿಗೆ ಹೋಲಿಕೆ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಹೋಲಿಕೆ ಮಾಡದಂತೆ ಮನವಿ ಮಾಡಿದ್ದಾರೆ.

 Darshan at Kaatera Success Meet: Dr. Rajkumar is a Legend Dont Comapre

ನಾನು ರಾಜ್‌ಕುಮಾರ್ ಅವರ ಕಾಲಿನ ಧೂಳಿಗೂ ಸಮವಲ್ಲ, ಅವರಿಗೆ ನನ್ನನ್ನು ಹೋಲಿಸಬೇಡಿ, ಅವರು ಮಾಡಿರುವ 0.5 ಅಷ್ಟು ಕೂಡ ನಾವು ಮಾಡಲು ಆಗಲ್ಲ ಎಂದು ಹೇಳಿದ್ದಾರೆ. ದರ್ಶನ್ ಹಿರಿಯ ನಟ ಡಾ. ರಾಜ್‌ಕುಮಾರ್ ಅವರಿಗೆ ಗೌರವ ನೀಡಿರುವುದಕ್ಕೆ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.

ಹೋಲಿಕೆ ಮಾಡಲು ಆ ಒಂದು ಸೀನ್‌ ಕಾರಣ

ಅಷ್ಟಕ್ಕೂ ಕಾಟೇರ ಸಿನಿಮಾಗೂ, ದರ್ಶನ್‌ರನ್ನು ರಾಜ್‌ಕುಮಾರ್ ಅವರಿಗೆ ಹೋಲಿಕೆ ಮಾಡುವುದಕ್ಕೂ ಒಂದು ಲಿಂಕ್ ಇದೆ. ಕಾಟೇರ ಸಿನಿಮಾದ ಒಂದು ದೃಶ್ಯದಲ್ಲಿ ದರ್ಶನ್‌ ಡಾ. ರಾಜ್‌ಕುಮಾರ್ ಸಿನಿಮಾದ ಒಂದು ದೃಶ್ಯವನ್ನು ಅಭಿನಯಿಸಿದ್ದಾರೆ. ಈ ದೃಶ್ಯದಲ್ಲಿ ದರ್ಶನ್ ಅಭಿನಯ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದು, ರಾಜ್‌ಕುಮಾರ್ ಅವರಂತೆ ನಟನೆ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಟೇರ ಸೂಪರ್ ಹಿಟ್!

ವರ್ಷಾಂತ್ಯದಲ್ಲಿ ಚಂದನವನಕ್ಕೆ ದರ್ಶನ್ ದೊಡ್ಡ ಉಡುಗೊರೆ ಕೊಟ್ಟಿದ್ದಾರೆ. ಕಾಟೇರ ದೊಡ್ಡಮಟ್ಟದಲ್ಲಿ ಹಿಟ್ ಆಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆಯುತ್ತಿದೆ. ಈಗಾಗಲೇ 70 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದ್ದು, ಒಂದು ವಾರದಲ್ಲೇ 100 ಕೋಟಿ ರೂಪಾಯಿಗೂ ಗಳಿಕೆ ಮಾಡುವ ಲೆಕ್ಕಾಚಾರ ಮಾಡಲಾಗಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೆ ಗೋವಾ, ತಮಿಳುನಾಡು, ಆಂಧ್ರದಲ್ಲಿ ಕೂಡ ಕಾಟೇರನ ಅಬ್ಬರ ಜೋರಾಗಿದೆ. ಈಗ ಚಿತ್ರತಂಡ ವಿದೇಶದಲ್ಲಿ ಕೂಡ ಬಿಡುಗಡೆಗೆ ಸಜ್ಜಾಗಿದೆ. ಜನವರಿ 5ರಂದು ದುಬೈನಲ್ಲಿ ಕಾಟೇರ ಬಿಡುಗಡೆಯಾಗುತ್ತಿದೆ. ಕೆನಡಾ, ಯುಕೆ, ಅಮೆರಿಕದಲ್ಲಿ ಕೂಡ ಕಾಟೇರ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕನ್ನಡದಲ್ಲಿ ಮಾತ್ರ ಕಾಟೇರ ಬಿಡುಗಡೆಯಾಗಿದ್ದು, ಇನ್ನು ಒಂದು ತಿಂಗಳಲ್ಲಿ ತೆಲುಗು, ತಮಿಳು, ಹಿಂದಿಯಲ್ಲಿ ಕೂಡ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+