ದರ್ಶನ್ ಬಂಧನ: ಎಚ್‌ಡಿ ಕುಮಾರಸ್ವಾಮಿ ಹೆಸರು ಎಳೆದುತಂದ ಕಿಡಿಗೇಡಿಗಳು
ನಟ ದರ್ಶನ್ ಬಂಧನ ಪ್ರಕರಣ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಿದೆ. ಪವಿತ್ರಾ ಗೌಡ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ರೇಣುಕಾ ಸ್ವಾಮಿ ಎನ್ನುವ ಯುವಕನನ್ನು ದರ್ಶನ್ ಕೊಲೆ ಮಾಡಿಸಿದ್ದಾರೆ ಎನ್ನುವ ಆರೋಪದ ಮೇಲೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ದರ್ಶನ್ ಬಂಧನ ವಿಚಾರ ತಿಳಿದ ಬಳಿಕ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವು ಅಭಿಮಾನಿಗಳು ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ದರ್ಶನ್ ಈ ರೀತಿ ಮಾಡಿರುವುದು ಸುಳ್ಳಾಗಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಇನ್ನೂ ಕೆಲವು ಅಂಧಾಭಿಮಾನಿಗಳು ದರ್ಶನ್ ಏನೇ ಮಾಡಿದ್ರೂ ಸರಿ ಎನ್ನುವಂತೆ ಮಾತನಾಡಿದ್ದಾರೆ. ದರ್ಶನ್ ತಪ್ಪು ಮಾಡಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟಿದ್ದಾರೆ, ಅವರನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ ಎನ್ನುವಂತಹ ಪ್ರತಿಕ್ರಿಯೆ, ಕಾಮೆಂಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಬಹುದು.
ಎಚ್‌ಡಿ ಕುಮಾರಸ್ವಾಮಿ ಹೆಸರು ಉಲ್ಲೇಖ!
ಇನ್ನೂ ಕೆಲವು ಕಿಡಿಗೇಡಿಗಳು ದರ್ಶನ್ ಪ್ರಕರಣದಲ್ಲಿ ಅನಗತ್ಯವಾಗಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಹೆಸರು ಎಳೆದುತಂದಿದ್ದಾರೆ. ರಾಜಕೀಯ ದುರುದ್ಧೇಶದಿಂದ ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಮೊದಲು ಇಂತ ಸ್ಲಂ #Darshan ಅಭಿಮಾನಿಗಳನ್ನ ಅರೆಸ್ಟ್ ಮಾಡಬೇಕು ಏನ್ ಅಂತೀರಾ? ಪಾಪ ಮೊನ್ನೆ ತಾನೇ Parliament ಗೆ ಕಾಲು ಇಟ್ಟಿರೋ ಕುಮಾರಣ್ಣನ ಲಿಂಕ್ ಮಾಡ್ತಾವ್ರೆ 😊#Dboss #sandalwood pic.twitter.com/b2z6IrB4Bk
— Kfi Trends 🍿🥪 (@kfitrends45) June 11, 2024
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಟ ದರ್ಶನ್ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಕ್ಕೆ, ಎಚ್‌ಡಿ ಕುಮಾರಸ್ವಾಮಿ ಈ ರೀತಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ವಿಚಾರಕ್ಕೂ ಕುಮಾರಸ್ವಾಮಿ ಅವರಿಗೂ ಯಾವುದೇ ಸಂಬಂಧವಿಲ್ಲ, ಅವರು ತಮ್ಮ ರಾಜಕೀಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೆಚ್‌ಡಿಕೆ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ.
ದರ್ಶನ್ ಪ್ರಕರಣದಲ್ಲಿ ಸುಮ್ಮನೆ ಆಧಾರವಿಲ್ಲದೆ ಕುಮಾರಸ್ವಾಮಿ ಅವರ ಹೆಸರನ್ನು ತಂದಿರುವವರನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಲಾಗಿದೆ.












Click it and Unblock the Notifications