Dali Dhananjay: ನಾನು ಬಿರಿಯಾನಿ ತಿಂದಿದ್ದಲ್ಲ, ರಾಜಕಾರಣಿಗಳು ಎಷ್ಟೆಷ್ಟು ಹಣ ತಿಂತಿದ್ದಾರೆ ಅಂತ ಪ್ರಶ್ನಿಸಲಿ: ಡಾಲಿ ಧನಂಜಯ್

ನಟ ಡಾಲಿ ಧನಂಜಯ್‌ ಇತ್ತೀಚೆಗೆ ಬಿರಿಯಾನಿ ತಿಂದ ವಿಡಿಯೋ ವೈರಲ್‌ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೆಲವರು ಇದನ್ನು ಸಮುದಾಯದ ದೃಷ್ಟಿಯಿಂದ ಟೀಕಿಸಿ, ಲಿಂಗಾಯತರು ಮಾಂಸ ತಿನ್ನುತ್ತಾರಾ? ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದ್ದರು. ಈ ಬಗ್ಗೆ ನಟ ಡಾಲಿ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಬಿರಿಯಾನಿ ಸೇವನೆ ಬಗ್ಗೆ ಟೀಕಿಸಿದವರಿಗೆ ನೇರವಾಗಿ ಪ್ರಶ್ನೆ ಮಾಡಿರುವ ನಟ, 'ನಾನು ಬಿರಿಯಾನಿ ತಿಂದಿದ್ದಕ್ಕಿಂತ ರಾಜಕಾರಣಿಗಳು ಎಷ್ಟೆಷ್ಟು ತಿಂತಿದ್ದಾರೆ ಅನ್ನೋದನ್ನ ಜನ ಪ್ರಶ್ನೆ ಮಾಡಲಿ' ಎಂದಿದ್ದಾರೆ.

ಬಿರಿಯಾನಿ ವಿವಾದದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಡಾಲಿ, 'ಪಕ್ಷಾತೀತವಾಗಿ ಸಾವಿರಾರು ಕೋಟಿ ಲೂಟಿ ಮಾಡಿದವರೆಲ್ಲ ಇಂದು ಆರಾಮಾಗಿ ಇದ್ದಾರೆ. ಆದರೆ ಜನ ಅದನ್ನೆಲ್ಲ ಪ್ರಶ್ನೆ ಮಾಡೋದನ್ನೇ ನಿಲ್ಲಿಸಿದ್ದಾರೆ. ಈಗ ನಾನು ಬಿರಿಯಾನಿ ತಿಂದಿದ್ದಕ್ಕಿಂತ ನಾಯಕರು ಎಷ್ಟೆಷ್ಟು ಲೂಟಿ ಮಾಡಿ ತಿಂತಿದ್ದಾರೆ ಅನ್ನೋದನ್ನ ಜನ ಪ್ರಶ್ನೆ ಮಾಡಬೇಕಲ್ಲವೇ? ನಾವು ಯಾರಿಗೆ ವೋಟ್‌ ಹಾಕಿದ್ದೀವಿ? ಏನ್‌ ಆಗ್ತಿದೆ, ಏನ್‌ ಆಗ್ತಿಲ್ಲ? ಅಂತ ಪಕ್ಷಾತೀತವಾಗಿ ಜನ ಪ್ರಶ್ನೆ ಮಾಡಬೇಕು. ಅದನ್ನು ಬಿಟ್ಟು ಸೋಷಿಯಲ್‌ ಮೀಡಿಯಾಗಳಲ್ಲಿ ನಾವೇ ಸಪೋರ್ಟ್‌ ಮಾಡಿಕೊಂಡಿದ್ರೆ ಏನಾಗುತ್ತೆ?' ಎಂದು ಗಂಭೀರವಾದ ಪ್ರಶ್ನೆ ಮುಂದಿಟ್ಟಿದ್ದಾರೆ.

Dali Dhananjay

'ಜಾತಿ ಇರಲ್ಲ ಅಂದುಕೊಳ್ತಿದ್ದೆ'

'ನಾವೆಲ್ಲ ಚಿಕ್ಕಂದಿನಲ್ಲಿ ಮುಂದೆ ಈ ರೀತಿ ಜಾತಿ ವ್ಯವಸ್ಥೆ ಅನ್ನೋದೆಲ್ಲ ಸಮಾಜದಲ್ಲಿ ಇರೋದಿಲ್ಲ ಅಂದುಕೊಳ್ಳುತ್ತಿದ್ವಿ. ಆದರೆ ಈಗ ನಡೆಯುತ್ತಿರೋದೆಲ್ಲ ನೋಡಿದಾಗ, ಅದು ನಿಜಕ್ಕೂ ಹೋಗಿದೆಯಾ? ಅನಿಸುತ್ತೆ. ಸೋಷಿಯಲ್‌ ಮೀಡಿಯಾದಲ್ಲಿ, ನಗರಗಳಲ್ಲಿ ಕುಳಿತು ಇದೆಲ್ಲ ಈಗ ಇಲ್ಲ ಅಂತ ಮಾತನಾಡುವುದು ಸುಲಭ. ಒಂದು ಊಟದ ವಿಚಾರಕ್ಕೇ ಇಷ್ಟೆಲ್ಲ ಆಗುತ್ತೆ ಅಂದ್ರೆ, ವಾಸ್ತವದಲ್ಲಿ ಅದೆಲ್ಲವೂ ಹೋಗಿಲ್ಲ ಅಲ್ವಾ?' ಎಂದಿದ್ದಾರೆ.

'ಫೇಕ್‌ ಅಕೌಂಟ್‌ಗಳ ಸ್ಯಾಡಿಸಂ'

'ನನ್ನ ಕುಟುಂಬದವರಿಗೆ ಈ ವಿಚಾರಗಳಿಂದ ಮೊದ ಮೊದಲಿಗೆ ಬೇಜಾರಾಗಿತ್ತು. ಈಗ ಅವರಿಗೂ ನಾನು ಇದನ್ನೆಲ್ಲ ಅರ್ಥ ಮಾಡಿಸಿದ್ದೀನಿ. ಸಾರ್ವಜನಿಕ ಜೀವನದಲ್ಲಿದ್ದಾಗ ಎಲ್ಲರಿಗೂ ಇದೆಲ್ಲ ಸಹಜ. ಇನ್ನು ಸೋಷಿಯಲ್‌ ಮೀಡಿಯಾ ನೋಡಿದ್ರೆ ಫೇಕ್‌ ಅಕೌಂಟ್‌ಗಳಿಂದ ಯಾರನ್ನೂ ಟ್ರೋಲ್‌ ಮಾಡುವುದು ಬಿಡುತ್ತಿಲ್ಲ. ಫೇಕ್‌ ಅಕೌಂಟ್‌ ಬಳಸಿ ಈ ರೀತಿ ಮಾಡುವುದು ನಿಜಕ್ಕೂ ಒಂದು ಸ್ಯಾಡಿಸಂ. ಅಲ್ಲಿ ಯಾರು ಏನು ಬೇಕಾದ್ರೂ ಹಾಕಬಹುದು. ಯಾವ ಲೆಜೆಂಡ್‌ಗಳನ್ನೂ ಅವರು ಬಿಡುತ್ತಿಲ್ಲ' ಎಂದು ಡಾಲಿ ಖಂಡಿಸಿದ್ದಾರೆ.

'ಮೊದಲೆಲ್ಲ ಬರೆದು, ಯೋಚಿಸಿ, ತಿದ್ದಿ ಪೋಸ್ಟ್‌ ಮಾಡ್ತಿದ್ರು. ಈಗ ಹಾಗಿಲ್ಲ, ತಕ್ಷಣವೇ ಪೋಸ್ಟ್‌ ಮಾಡ್ತಾರೆ. ಅದು ಸರಿಯೋ ತಪ್ಪೋ ಯೋಚಿಸದೆ ಪೋಸ್ಟ್‌ ಮಾಡಿಬಿಡ್ತಾರೆ. ಫೇಕ್‌ ಅಕೌಂಟ್‌ಗಳನ್ನ ತೆಗೆದರೆ ಅರ್ಧ ಸಮಸ್ಯೆ ಪರಿಹಾರವಾಗುತ್ತೆ. ಈ ವಿಚಾರದ ಬಗ್ಗೆ ಅಧಿಕಾರದಲ್ಲಿರುವ ಹಾಗೂ ನಮ್ಮನ್ನು ಆಳುತ್ತಿರುವವರನ್ನೇ ಪ್ರಶ್ನಿಸಬೇಕು. ನಾವು ಅವರನ್ನ ಪ್ರಶ್ನೆ ಮಾಡುವುದೇ ಇಲ್ಲ. ನಾವೆಲ್ಲರೂ ಅವರ ಕಡೆ, ಇವರ ಕಡೆ ಅಂತ ಇಬ್ಭಾಗ ಆಗಿದ್ದೇವೆ. ಅವರಿಗೇ ಸಪೋರ್ಟ್‌ ಮಾಡುತ್ತಿರುವುದು ನಿಜಕ್ಕೂ ದುರಂತ' ಎಂದಿದ್ದಾರೆ. ಅಲ್ಲದೆ ಈ ಹಿಂದೆಯೂ ನಾನು ಅನೇಕ ಬಾರಿ ಬಿರಿಯಾನಿ ತಿಂದಿದ್ದೇನೆ ಎಂದೂ ಡಾಲಿ ಧನಂಜಯ್‌ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+