Actor Darshan: ಕೊನೆಗೂ ಈಡೇರಿತು ನಟ ದರ್ಶನ್-ಪವಿತ್ರಾ ಗೌಡ ಆಸೆ, ಏನದು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಅವರು ಜಾಮೀನು ಪಡೆದು ಹೊರಬಂದಿದ್ದಾರೆ. ಇಂದು ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ಇದ್ದಿದ್ದರಿಂದ ಪವಿತ್ರಾಗೌಡ ಹಾಗೂ ನಟ ದರ್ಶನ್ ಅವರು ಮುಖಾಮುಖಿಯಾಗಿದ್ದರು. ಹಲವು ತಿಂಗಳುಗಳ ನಂತರ ಇಬ್ಬರೂ ಎದುರುಬದುರಾಗಿದ್ದರು. ಸದ್ಯ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಆಸೆ ಕೊನೆಗೂ ಈಡೇರಿದೆ.
ದರ್ಶನ್ ಅವರು ಜಾಮೀನು ಸಿಕ್ಕ ಬಳಿಕ ಮೈಸೂರಿಗೆ ತೆರಳಲು ಅನುಮತಿ ಕೋರಿದ್ದರು. ಅದರಂತೆ ಕೋರ್ಟ್ ಕೂಡ ಜನವರಿ ಮೊದಲ ವಾರದವರೆಗೆ ಮೈಸೂರಿನಲ್ಲಿರಲು ದರ್ಶನ್ ಅವರಿಗೆ ಅನುಮತಿ ಕೊಟ್ಟಿತ್ತು. ಆದರೆ, ದರ್ಶನ್ ಅವರಿಗೆ ನೀಡಿದ ಗಡುವು ಮುಕ್ತಾಯವಾಗಿ ಹಲವು ದಿನಗಳಾದ ಕಾರಣ ಬೆಂಗಳೂರಿಗೆ ಮತ್ತೆ ವಾಪಸ್ ಬರಲು ಬಿಲ್‌ಕುಲ್ ಇಷ್ಟವೇ ಇರಲಿಲ್ಲ.

ಹಾಗಾಗಿ ಮತ್ತಷ್ಟು ದಿನ ಮೈಸೂರಿನಲ್ಲೇ ಇರಬೇಕು ಎಂದು ದರ್ಶನ್ ನಿರ್ಧರಿಸಿದ್ದರು. ಇದಕ್ಕಾಗಿ ಕೋರ್ಟ್ ಮುಂದೆ ಮತ್ತೆ ಗಡುವು ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಪರ ವಕೀಲರು ಈ ಬಗ್ಗೆ ಕೋರ್ಟ್‌ನಲ್ಲಿ ಮನವಿ ಮಾಡಿದ್ದು, ಇದಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ ದರ್ಶನ್ ಅವರು ಮತ್ತೆ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ಗೆ ತೆರಳಲಿದ್ದಾರೆ.
ನಟ ದರ್ಶನ್ ಅವರಿಗೆ ಜನವರಿ 12ರಿಂದ 17ರವರೆಗೆ ಮೈಸೂರಿನಲ್ಲಿರಲು ಕೋರ್ಟ್ ಅನುವು ಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ದರ್ಶನ್ ಅವರು ರಿಲೀಫ್ ಆಗಿದ್ದು, ಮತ್ತೆ ಫಾರ್ಮ್‌ಹೌಸ್‌ನಲ್ಲಿ ಜಾಲಿ ಜೀವನಕ್ಕೆ ಜಾರಲಿದ್ದಾರೆ. ಇನ್ನೇನು ಸಂಕ್ರಾಂತಿ ಕೂಡ ಹತ್ತಿರ ಬರುತ್ತಿರುವುದರಿಂದ ಈ ಬಾರಿಯ ಹಬ್ಬವನ್ನು ದರ್ಶನ್ ಹಾಗೂ ಅವರ ಕುಟುಂಬ ಫಾರ್ಮ್‌ಹೌಸ್‌ನಲ್ಲೇ ಆಚರಿಸಲಿದೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರು ಸಕ್ರಾಂತಿ ಹಬ್ಬವನ್ನ ಹೆಚ್ಚಾಗಿ ಮೈಸೂರಿನಲ್ಲೇ ಆಚರಿಸುತ್ತಿದ್ದರು. ಈ ಬಾರಿಯೂ ಅವರ ಆಸೆ ಈಡೇರಿದಂತಾಗಿದೆ.
ಪವಿತ್ರಾ ಗೌಡ ಆಸೆ ಏನು?: ಅತ್ತ ದರ್ಶನ್ ಅವರು ಮೈಸೂರಿನಲ್ಲಿರಲು ಅವಕಾಶ ಕೇಳಿದರೆ, ಇತ್ತ ಪವಿತ್ರಾಗೌಡ ಅವರು ಹೊರರಾಜ್ಯಕ್ಕೆ ಹೋಗಲು ಕೋರ್ಟ್ ಬಳಿ ಅನುಮತಿ ಕೇಳಿದರು. ದೆಹಲಿ ಹಾಗೂ ಮುಂಬೈಗೆ ತೆರಳಲು ಪವಿತ್ರಾ ಅನುಮತಿ ಕೇಳಿದ್ದರು. ಹೊರರಾಜ್ಯಗಳಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡಲು ಹಾಗೂ ವ್ಯವಹಾರದ ಉದ್ದೇಶಕ್ಕಾಗಿ ಒಂದು ತಿಂಗಳು ಅನುಮತಿ ನೀಡುವಂತೆ ಕೋರಿದ್ದರು.

57ನೇ ಸಿಸಿಹೆಚ್ ನ್ಯಾಯಾಧೀಶರ ಮುಂದೆ ಹೊರ ರಾಜ್ಯಕ್ಕೆ ಹೋಗಲು ಅನುಮತಿ ನೀಡಬೇಕೆಂದು ಪವಿತ್ರಾ ಗೌಡ ಪರ ವಕೀಲರು ಮನವಿ ಮಾಡಿದರು. ಅದರಂತೆ ಕೋರ್ಟ್ ಪವಿತ್ರಾ ಗೌಡ ಅವರಿಗೂ ಹೊರರಾಜ್ಯಕ್ಕೆ ತೆರಳಲು ಗ್ರೀನ್‌ಸಿಗ್ನಲ್ ನೀಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಪವಿತ್ರಾ ಗೌಡ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳಿಗೂ ಕೋರ್ಟ್ ಈ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆ ಎಲ್ಲ ಆರೋಪಿಗಳಿಗೆ ಕೋರ್ಟ್ ಷರತ್ತುಗಳನ್ನು ವಿಧಿಸಿತ್ತು. ಆರೋಪಿಗಳಿಗೆ ಬೆಂಗಳೂರು ಬಿಟ್ಟು ಹೊರಹೋಗದಂತೆ ಸೂಚನೆ ನೀಡಿತ್ತು. ಆದರೂ ಅನುಮತಿ ಪಡೆದು ದರ್ಶನ್ ಮೈಸೂರಿಗೆ ಹೋಗಿದ್ದರು.

ಇನ್ನು ಈ ಕೇಸ್‌ನ ಪ್ರತಿ ವಿಚಾರಣೆ ವೇಳೆಯೂ ಎಲ್ಲ ಆರೋಪಿಗಳು ಹಾಜರಾಗುವಂತೆ ಕೋರ್ಟ್ ತಿಳಿಸಿತ್ತು. ಆ ಷರತ್ತಿನಂತೆ ಇಂದು ಎಲ್ಲ ಆರೋಪಿಗಳು 57ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾಗಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ನಡೆಸಿದ ಕೋರ್ಟ್ ಫೆಬ್ರವರಿ 25ಕ್ಕೆ ಮುಂದಿನ ವಿಚಾರಣೆಯನ್ನ ಮುಂದೂಡಿದೆ.












Click it and Unblock the Notifications