Puttakkana Makkalu: ಸುಳ್ಳು ಹೇಳಿ ಪುಟ್ಟಕ್ಕನ ಮಕ್ಕಳು ಬಿಟ್ಟು ಬಿಗ್‌ ಬಾಸ್‌ಗೆ ಹೋದ ಹಂಸ ವಿರುದ್ಧ ದೂರು

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಜಿ ಪಾತ್ರದಲ್ಲಿ ನಟಿಸುತ್ತಿದ್ದ ಹಂಸ ನಮಗೆ ಹೇಳದೆ ಬಿಗ್‌ ಬಾಸ್‌ಗೆ ಹೋಗಿದ್ದಾರೆ. ಅವರು ನಮಗೆ ಹೇಳಲೇ ಇಲ್ಲ. ಅವರ ವಿರುದ್ಧ ಪ್ರೊಡ್ಯೂಸರ್‌ ಅಸೋಸಿಯೇಶನ್‌ಗೆ, ಕನ್ನಡ ಟೆಲಿವಿಷನ್‌ ಅಸೋಸಿಯೇಶನ್‌ಗೆ ದೂರು ಕೊಟ್ಟಿದ್ದೇವೆ ಎಂದು ನಿರ್ದೇಶಕ ಆರೂರು ಜಗದೀಶ್‌ ತಿಳಿಸಿದ್ದಾರೆ.

ಈ ಬಗ್ಗೆ ಪಂಚಮಿ ಟಾಕ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, ನನಗೆ ಹಂಸ ಅವರಿಂದ ಫೋನ್‌ ಬಂದಿತ್ತು. ನಾನು ನೆಲವತ್ತು ದಿನ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ಹೋಗುತ್ತಿದ್ದೇನೆ ಅಂದರು. ಆಗ ನಮಗೆ ಪೋಷಕ ನಟ- ನಟಿಯರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಶೂಟಿಂಗ್‌ ಮಾಡುತ್ತಾರಾ..? ಅದು ನೆಲವತೈದು ದಿನ ಅಂತಾ ಅನಿಸಿತು. ಆದರೂ ಸರಿ ಮೇಡಂ ಹೋಗಿ ಬನ್ನಿ ನಾನು ತಂಡಕ್ಕೆ ಹೇಳುತ್ತೇನೆ ಅಂತಾ ಹೇಳಿದ್ದೆ ಎಂದರು.

Complaint Against Actress Hamsa Who Left Puttakkana Makkalu Serial For Bigg Boss

ಆಮೇಲೆ ನೋಡಿದರೆ ಬಿಗ್‌ ಬಾಸ್‌ ಪ್ರೋಮೋದಲ್ಲಿ ಇವರು ಇದ್ದಾರೆ. ನನಗೆ ಏನಿದು ಅನಿಸಿಬಿಡ್ತು. ಸಾಮಾನ್ಯವಾಗಿ ಸಿನಿಮಾಗೆ ಹೋದರೆ ಸಂಜೆ ವೇಳೆ ಶೂಟಿಂಗ್‌ಗೆ ಕರಿಬಹುದು. ವಿದೇಶಕ್ಕೆ ಹೋದರೂ ಸಹ ಮಧ್ಯ ಬರಬಹುದು. ಅಲ್ಲಿ ಎರಡು ದಿನ ಶೂಟಿಂಗ್‌ ಮಾಡಬಹುದು. ಊಮಾಶ್ರೀ ಅವರನ್ನು ನೋಡಿ, ಸಿನಿಮಾ ಮಾಡುತ್ತಿದ್ದರೂ, ರಾಜಕೀಯದಲ್ಲಿ ಇದ್ದರೂ, ನಮ್ಮ ಧಾರಾವಾಹಿ ಮಾಡಿಕೊಡುತ್ತಿದ್ದಾರೆ. ಅದು ಕಲಾವಿದರಿಗೆ ಇರುವ ನೈತಿಕತೆ ಎಂದು ಹೇಳಿದರು.

ಬಿಗ್‌ ಬಾಸ್‌ಗೆ ಹೋಗುತ್ತಿದ್ದೇನೆ ಅಂತಾ ಹಂಸ ಹೇಳಲೇ ಇಲ್ಲ. ಅದಾದಮೇಲೆ ನಾವು ಅವರ ವಿರುದ್ಧ ಪ್ರೊಡ್ಯೂಸರ್‌ ಅಸೋಸಿಯೇಶನ್‌ಗೆ, ಕನ್ನಡ ಟೆಲಿವಿಷನ್‌ ಅಸೋಸಿಯೇಶನ್‌ಗೆ ದೂರು ಕೊಟ್ಟಿದ್ದೇವೆ. ಆದರೆ ಅವರು ಏನು ನಿರ್ಧಾರ ತೆಗೆದುಕೊಂಡರು ಗೊತ್ತಾಗಲಿಲ್ಲ. ಆದರೆ ಕಲಾವಿದರಿಗೆ ನೈತಿಕತೆ ಬೇಕು. ಬಿಗ್‌ ಬಾಸ್‌ನಂತೆ ಪುಟ್ಟಕ್ಕನ ಮಕ್ಕಳು ಕೂಡ ಒಂದು ಪ್ರಾಜೆಕ್ಟ್‌. ಹೋಗುವವನ್ನು ನಾವು ತಡೆಯಲ್ಲ..ಹೋಗುವವರು ಹೋಗಿ ಆದರೆ ತಂಡಕ್ಕೆ ಹೇಳಿ ಹೋಗಿ ಎಂದರು.

Complaint Against Actress Hamsa Who Left Puttakkana Makkalu Serial For Bigg Boss

ಒಂದು ನೈತಿಕತೆ ಇಟ್ಟುಕೊಳ್ಳಿ. ಯಾಕೆಂದರೆ ಮತ್ತೆ ಸಿಕ್ಕೇ ಸಿಗುತ್ತೇವೆ. ಆಗ ಮುಖ ಕೊಟ್ಟು ಮಾತನಾಡುವ ರೀತಿ ಇರಬೇಕು. ಈ ರೀತಿಯ ವರ್ತನೆ ಕಲಾವಿದರಿಗೆ ಒಳ್ಳೆಯದಲ್ಲ. ಇಲ್ಲಿ ಹೋಗುವವರನ್ನು ಯಾರೂ ತಡೆಯುವುದಿಲ್ಲ. ತಡೆಯುವ ಹಕ್ಕು ಕೂಡ ಇಲ್ಲ. ಆದರೆ ತಂಡಕ್ಕೆ ಹೇಳಿ ಬಿಡಿಸಿಕೊಂಡು ಹೋಗಿ ಎಂದು ನಿರ್ದೇಶಕ ಆರೂರು ಜಗದೀಶ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+