ಇತ್ತೀಚೆಗೆ ಶುರುವಾದ ಧಾರಾವಾಹಿ ಮುಕ್ತಾಯ: ರಾಮಾಚಾರಿನಾ?
ಬಿಗ್‌ಬಾಸ್ ಬಳಿಕ ಇತ್ತೀಚೆಗೆ ಶುರುವಾದ ಧಾರಾವಾಹಿಯೊಂದು ಮುಕ್ತಾಯಗೊಳ್ಳಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಸೀರಿಯಲ್ ಇತ್ತೀಚಿಗಷ್ಟೇ ಶುರುವಾಗಿತ್ತು. ಧಾರಾವಾಹಿಯ ಕತೆ ತುಂಬಾ ಚೆನ್ನಾಗಿ ಇದೆ ಅಂದುಕೊಳ್ಳಲಾಗಿತ್ತು. ಆರಂಭದಲ್ಲಿ ಇದು ಚೆನ್ನಾಗಿದೆ ನೋಡಬಹುದು ಅನಿಸಿದರೂ ಇತ್ತೀಚಿಗೆ ಈ ಧಾರಾವಾಹಿ ಮುಗಿಯಲಿದೆ ಎನ್ನುವ ಗಾಸಿಪ್ ಶುರುವಾಗಿದೆ. ಹಾಗಾದರೆ ಆ ಧಾರಾವಾಹಿ ಯಾವುದು? ಯಾಕೆ ಮುಗಿಯಲಿದೆ?
ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿ ಹೊಸ ಹೊಸ ಧಾರಾವಾಹಿಗಳನ್ನು ನೀಡಿ ವೀಕ್ಷಕರನ್ನು ಮನರಂಜಿಸುತ್ತಿದೆ. ಕಲರ್ಸ್ ಕನ್ನಡದಲ್ಲಿ ಹಲವಾರು ಧಾರಾವಾಹಿಗಳು ಐದು ವರ್ಷಕ್ಕಿಂತ ಹೆಚ್ಚು ಪ್ರಸಾರವಾಗಿವೆ. ಇನ್ನೂ ಕೆಲ ಧಾರಾವಾಹಿಗಳು ಪ್ರಸಾರ ಆಗಿ ಕೆಲವೇ ತಿಂಗಳಲ್ಲಿ ಮುಕ್ತಾಯ ಆಗಿದ್ದು ಇದೆ.

ಜನರು ಧಾರಾವಾಹಿಗಳನ್ನು ಹೇಗೆ ವೀಕ್ಷಿಸುತ್ತಾರೆ? ಟಿಆರ್‌ಪಿ ಎಷ್ಟಿರುತ್ತದೆ? ಇದೆಲ್ಲದರ ಆಧಾರದ ಮೇಲೆ ಧಾರಾವಾಹಿಗಳು ಪ್ರಸಾರ ಆಗುತ್ತವೆ. ಟಿಆರ್‌ಪಿ ತುಂಬಾ ಕಡಿಮೆ ಇರುವ ಧಾರಾವಾಹಿಗಳನ್ನು ತುಂಬಾ ದಿನ ಮುಂದುವರೆಸಲು ಆಗುವುದಿಲ್ಲ. ಯಾಕೆಂದರೆ ಇಂತಹ ಧಾರಾವಾಹಿಗಳನ್ನು ಕಡಿಮೆ ಸಂಖ್ಯೆಯಲ್ಲಿ ಜನ ವೀಕ್ಷಣೆ ಮಾಡುತ್ತಾರೆ.
ಇನ್ನೂ ಟಿಆರ್‌ಪಿ ತುಂಬಾ ಚೆನ್ನಾಗಿದೆ ಅಂದರೆ ಧಾರಾವಾಹಿಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರಸಾರವಾಗುತ್ತವೆ. ಹೀಗಾಗಿ ಧಾರಾವಾಹಿ ಮುಗಿಬೇಕಾ ಅಥವಾ ಮುಂದುವರೆಯಬೇಕಾ ಅನ್ನೋದನ್ನು ನಿರ್ಧರಿಸುವುದು ಟಿಆರ್‌ಪಿ ಆಗಿರುತ್ತದೆ. ಇತ್ತೀಚಿಗಷ್ಟೇ 'ಲಕ್ಷ್ಮೀ ಬಾರಮ್ಮ' ಸೀರೀಯಲ್ ಮುಕ್ತಾಯವಾಗಿದೆ. ಅದರೊಂದಿಗೆ ಶುರುವಾದ ಭಾಗ್ಯಲಕ್ಷ್ಮೀ ಧಾರಾವಾಹಿ ಇನ್ನೂ ಕೂಡ ಮುಂದುವರೆದಿದೆ.

ಹೊಸ ಧಾರಾವಾಹಿ 'ಮುದ್ದು ಸೊಸೆ' ಈಗಾಗಲೇ ಆರಂಭವಾಗಿದೆ. ಆದರೆ ಈಗ ಮತ್ತೊಂದು ಸೀರಿಯಲ್ ಶೀಘ್ರದಲ್ಲೇ ಮುಕ್ತಾಯ ಆಗಲಿದೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಪ್ರಕಾರ 'ವಧು' ಸೀರಿಯಲ್ ಶೀಘ್ರದಲ್ಲೇ ಮುಕ್ತಾಯವಾಗುತ್ತದೆ ಎನ್ನಲಾಗುತ್ತಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಜೊತೆಗೆ ಈ ಸೀರಿಯಲ್ ತಂಡದಿಂದಲೂ ಹೆಚ್ಚಿನ ಮಾಹಿತಿ ಕೂಡ ಲಭ್ಯವಾಗಿಲ್ಲ. ಆದರೆ ವಧು ಅನ್ನೋ ವಿಚ್ಚೇದನ ಲಾಯರ್ ಸುತ್ತ ಸುತ್ತುವ ಕಥೆ ಇರುವ 'ವಧು' ಧಾರಾವಾಹಿ ಮುಕ್ತಾಯವಾಗಲಿದೆ. ಸಾರ್ಥಕ್ ಎನ್ನುವ ಶ್ರೀಮಂತ ವ್ಯಕ್ತಿಯ ವಿಚ್ಚೇದನ ಮಾಡಿಸುವ ಕೇಸ್ ಎತ್ತಿಕೊಂಡಿರುವ ಲಾಯರ್ ವಧುಗೆ ಆತನ ಪತ್ನಿ ಪ್ರಿಯಾಂಕಾಳಿಂದ ಏನೆಲ್ಲಾ ಸಮಸ್ಯೆ ಬರುತ್ತದೆ ಅನ್ನೋದು ಧಾರಾವಾಹಿ ಕಥೆಯಾಗಿದೆ.
ಸೇಡು ತೀರಿಸಿಕೊಳ್ಳಲು ಸಾರ್ಥಕ್‌ನನ್ನು ಮದುವೆ ಆಗಿರುವ ಪ್ರಿಯಾಂಕಾ ಇದೀಗ ವಿಚ್ಚೇದನ ಪಡೆದು ಸಾರ್ಥಕ್ ಆಸ್ತಿ ತಾನೇ ಪಡೆದುಕೊಳ್ಳುವ ಪ್ಲ್ಯಾನ್ ಮಾಡಿರುತ್ತಾಳೆ. ಆದರೆ ಇದಕ್ಕೆ ಅಡ್ಡಲಾಗಿ ನಿಂತಿರುವುದು ಲಾಯರ್ ವಧುವಿನ ಲೈಫ್ ಹಾಳು ಮಾಡಲು ಪ್ರಿಯಾಂಕಾ ಎಲ್ಲಾ ರೀತಿಯ ಪ್ಲ್ಯಾನ್ ಮಾಡುತ್ತಾಳೆ. ಇದು ವಧು ಧಾರಾವಾಹಿಯ ಕಥೆಯಾಗಿದೆ.
ಈ ಗಾಸಿಪ್ ಸಂದರ್ಭದಲ್ಲೇ 'ನಂದಗೋಕುಲ' ಧಾರಾವಾಹಿ ಪ್ರೋಮೋ ಕೂಡ ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಪ್ರಸಾರಕ್ಕಾಗಿ ವಧು ಸೀರಿಯಲ್ ಮುಕ್ತಾಯವಾಗುತ್ತಿದೆ ಅಂತಲೂ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದ ಎಬಿಗ್‌ಬಾಸ್ ಮುಗಿದ ಬಳಿಕ ಹಲವಾರು ಹೊಸ ಧಾರಾವಾಹಿಗಳು ಪ್ರಸಾರ ಆದವು. ಮೊದಲು ಇದ್ದ ಧಾರಾವಾಹಿಗಳ ಪ್ರಸಾರದ ಸಮಯದಲ್ಲಿ ಬದಲಾವಣೆಗಳು ಆದವು. ಹೀಗಾಗಿ ರಾಮಾಚಾರಿ ಹಾಗೂ ವಧು ಸೀರಿಯಲ್ ಟಿಆರ್‌ಪಿ ನೆಲಕ್ಕಚ್ಚಿದೆ. ರಾಮಾಚಾರಿಗೆ ಹೋಲಿಸಿದರೆ ವಧು ಧಾರಾವಾಹಿಯ ಟಿಆರ್‌ಪಿ ತುಂಬಾ ಕಡಿಮೆ ಇದ್ದು ಇದು ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಈ ಗಾಸಿಪ್‌ಗೆ ಮತ್ತೊಂದು ಕಾರಣ ವಧು ಧಾರಾವಾಹಿಯ ಬರವಣಿಗೆಗಾರ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಜಿಯೋ ಸ್ಟುಡಿಯೋಸ್ ಕನ್ನಡ ವಿಭಾಗಕ್ಕೆ ಮುಖ್ಯಸ್ಥರಾಗಿದ್ದಾರೆ ಎನ್ನಲಾಗುತ್ತಿದೆ. ಬೇರೆ ವಾಹಿನಿಗೆ ಹೆಡ್ ಆದವರ ಧಾರಾವಾಹಿ ಪ್ರಸಾರ ಆಗುವುದು ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ವಧು ಶೀಘ್ರದಲ್ಲೇ ಮುಗಿಯಲಿದೆ ಎನ್ನಲಾಗುತ್ತಿದೆ. ನಿಜವಾಗಲೂ ವಧು ಮುಕ್ತಾಯವಾಗುತ್ತಾ ಅಥವಾ ಇದು ಕೇವಲ ಗಾಸಿಪ್ ಆಗಿದಿಯಾ ಅನ್ನೋದನ್ನು ಕಾದು ನೋಡಬೇಕಿದೆ.
-
Pizza 4P's ಬೆಂಗಳೂರಲ್ಲಿ ಶಾಂತಿಗಾಗಿ ಪಿಜ್ಜಾ ಎಂದಾಯ್ತು: ಜಪಾನ್ ಪಿಜ್ಜಾ ಸಂಸ್ಥೆ ಹೇಳಿದ್ದೇನು - ಕನ್ನಡಿಗರು ಏನಂದ್ರು -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications