ಉಪಾಧ್ಯಕ್ಷ ಸಿನಿಮಾ ಡೈಲಾಗ್ ಅನ್ನು ಬಟ್ಲರ್ ಇಂಗ್ಲೀಷ್‌ನಲ್ಲಿ ಹೇಳಿದ ಚಿಕ್ಕಣ್ಣ
ಚಿಕ್ಕಣ್ಣ ಎಲ್ಲಿ ಇರ್ತಾರೋ ಅಲ್ಲಿ ಕಾಮಿಡಿ ಇದ್ದೇ ಇರುತ್ತದೆ. ಸ್ಯಾಂಡಲ್‌ವುಡ್‌ನಲ್ಲಿ ಅದ್ಭುತ ಹಾಸ್ಯಕಲಾವಿದನಾಗಿ ಮಿಂಚಿದ ಚಿಕ್ಕಣ್ಣ ಈಗ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಂದಹಾಗೆ ಉಪಾಧ್ಯಕ್ಷ ಸಿನಿಮಾ ನಿರೀಕ್ಷೆಯಂತೆ ಮೂಡಿ ಬಂದಿದೆ. ಜನ ಕೂಡ ಉಪಾಧ್ಯಕ್ಷನ ನಟನೆಗೆ ಫಿದಾ ಆಗಿದ್ದಾರೆ.
ಇಂದಿಗೂ ಹಾಸ್ಯನಟ ಚಿಕ್ಕಣ್ಣ ಸಿನಿಮಾ ಅದ್ಭುತ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಯಾಗಿ ಧಾರವಾಹಿಯಲ್ಲಿ ನಟಿಯಾಗಿರುವ ಮಲೈಕಾ ಹೀರೋಯಿನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅಭಿಮಾನಿಗಳು ಚಿಕ್ಕಣ್ಣ ಹಾಗೂ ನಟಿ ಮಲೈಕಾ ಅವರಿಗೆ ಸಾಕಷ್ಟು ಕಾಮಿಡಿ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ಚೀಟಿ ಮೂಲಕ ಕೇಳಲಾದ ಪ್ರಶ್ನೆಗಳಿಗೆ ಚಿಕ್ಕಣ್ಣ ಭರ್ಜರಿಯಾಗಿ ನಗಿಸಿದ್ದಾರೆ.

ಉಪಾಧ್ಯಕ್ಷ ಸಿನಿಮಾ ಡೈಲಾಗ್ ಅನ್ನು ಬಟ್ಲರ್ ಇಂಗ್ಲೀಷ್‌ನಲ್ಲಿ ಹೇಳಬೇಕು ಎಂದು ಮೆಟ್ರೋಸಾಗ ಅವರು ಹೇಳಿದ ಪ್ರಶ್ನೆಗೆ ಚಿಕ್ಕಣ್ಣ ಸಖತ್ ಕಾಮಿಡಿ ಮಾಡಿದ್ದಾರೆ. ಮೆಟ್ರೋಸಾಗ ಅವರು ಹೇಳಿದ ಕಾಮಿಡಿ ಪ್ರಶ್ನೆಗಳನ್ನ ಮಲೈಕಾ ಅವರು ಚಿಕ್ಕಣ್ಣ ಅವರಿಗೆ ಕೇಳುತ್ತಾರೆ. ಇದಕ್ಕೆ ಉತ್ತರವನ್ನು ಚಿಕ್ಕಣ್ಣ ನೀಡುತ್ತಾರೆ.
ಪ್ರಶ್ನೆ 1: ಬಾಲ್ಯದಲ್ಲಿರುವ ಯಾವುದಾದರೊಂದು ಅಭ್ಯಾಸ ಈಗಲೂ ಇದಿಯಾ?
ಚಿಕ್ಕಣ್ಣ ಉತ್ತರ: ನನಗೆ ಚೈಲ್ಡ್‌ಹುಡ್ಡೇ ನೆನಪಿಲ್ಲ ಇನ್ನೂ ಹ್ಯಾಬಿಟ್ ಎಲ್ಲಿ ನೆನಪಿರುತ್ತೆ..? ಚೈಲ್ಡ್‌ವುಡ್ ಅಲ್ಲಿ ಆತರ ಯಾವುದು ಹ್ಯಾಬಿಟ್ ಇರಲಿಲ್ಲ ಇಗಲೂ ಇಲ್ಲ. ಊಟ ಮಾಡುವುದು ಒಂದು ಇತ್ತು ಈಗ್ಲೂ ಊಟ ಮಾಡ್ತೀನಿ. ಆಗಲೂ ಹುಸಿರಾಡೋ ಹ್ಯಾಬಿಟ್ ಇತ್ತು ಈಗ್ಲೂ ಉಸಿರಾಡ್ತಾಯಿದಿನಿ. ಆಗ ಒಳ್ಳೆ ಗಾಳಿ ಉಸಿರಾಡ್ತಾಯಿದ್ದೆ. ಈಗ ಕೆಟ್ಟ ಗಾಳಿ ಉಸಿರಾಡ್ತಾಯಿದಿನಿ ಅಂತ ತಮ್ಮದೇ ಸ್ಟೈಲ್‌ನಲ್ಲಿ ಹೇಳುವ ಮೂಲಕ ಚಿಕ್ಕಣ್ಣ ಕಾಮಿಡಿ ಮಾಡಿದ್ದಾರೆ.
ಇದೇ ಪ್ರಶ್ನೆಯನ್ನು ಮಲೈಕಾಗೆ ಕೇಳಿದ ಚಿಕ್ಕಣ್ಣ:
ಇದೇ ಪ್ರಶ್ನೆಯನ್ನು ಚಿಕ್ಕಣ್ಣ ಮಲೈಕಾ ಅವರಿಗೆ ಕೇಳುತ್ತಾರೆ. ಆಗ ಮಲೈಕಾ ಉತ್ತರಿಸಿ- ಬೆಳಿಗ್ಗೆ ಎದ್ದು ಸ್ನಾನ ಮಾಡಿ ಪೂಜೆ ಮಾಡೋದು. ಇದನ್ನು ನಾನು ಆಗಲೂ ಮಾಡ್ತಾಯಿದ್ದೆ. ಈಗಲೂ ಮಾಡುತ್ತೇನೆ. ಇನ್ನೂ ವಿಚಿತ್ರ ಅಭ್ಯಾಸಗಳು ಇದಿಯಾ ಅಂತ ಕೇಳಿದಾಗ ಮಲೈಕಾ ಯೋಚನೆ ಮಾಡ್ತಾರೆ. ಆಗ ಚಿಕ್ಕಣ್ಣ ಮಾಡೋದೆಲ್ಲಾ ಅದೇನಾ ಅಂತಾ ಮಲೈಕಾ ಕಾಲೆಳೆಯುತ್ತಾರೆ.

ಮಲೈಕಾ ಅವರು ನಾನು ತುಂಬಾ ಕಾಲೇಜ್‌ಗೆ ಬಂಕ್ ಆಕ್ತಿದ್ದೆ ಅಂತಾರೆ. ಆಗ ಚಿಕ್ಕಣ್ಣ ಮತ್ತೆ ಕಾಲೆಳೆಯುತ್ತಾ ಈಗ್ಲೂ ಉಗಿದು ಓಡ್ಸಿದ್ರಾ? ಆಗ ಮಲೈಕಾ ಉಗಿದು ಏನು ಓಡ್ಸಿಲ್ಲಾ. ಓದು ಕಂಪ್ಲೀಟ್ ಮಾಡಿ ಬಂದಿದ್ದೇನೆ. ಏನು ಅರ್ಧಮರ್ಧ ಎಜುಕೇಷನ್ ಮಾಡಿದಿನಿ ಅನ್ಕೊಂಡುಬಿಟ್ರಾ? ಬಿಇ ಸಿವಿಲ್ ಇಂಜಿನೀಯರಿಂಗ್ ಕಂಪ್ಲೀಟ್ ಮಾಡಿ ಬಂದಿದಿನಿ. 2020 ಔಟ್ ಬ್ಯಾಚ್ ನಾನು ಅಂತಾರೆ. ಆಗ ಚಿಕ್ಕಣ್ಣ, ಹಾಗಾದರೆ ಮಾರ್ಕ್ಸ್ ಕಾರ್ಡ್ ತೋರ್ಸಿ ಅಂತ ಮಲೈಕಾಗೆ ಕಾಲೆಳೆಯುತ್ತಾರೆ. ಆಗ ಮಲೈಕಾ ನಾನು ಮಾರ್ಕ್ಸ್ ತೆಗೆದುಕೊಂಡಿಲ್ಲ ಅಂತ ಗೊತ್ತು ನಿಮ್ಗೆ ಅದ್ಕೆ ಕೇಳ್ತಾಯಿದಿರಾ..? ನಾನು ಇನ್ನೂ ಮಾರ್ಕ್ಸ್ ಕಾರ್ಡ್ ತಗೊಂಡಿಲ್ಲ. ಡಿಗ್ರಿ ಮಾರ್ಕ್ಸ್ ಕಾರ್ಡ್ ಇದೆ ಅಂತ ನಗಾಡಿಕೊಂಡು ಹೇಳ್ತಾರೆ. ಇದರ ಬಳಿಕ ರೋದೇ ಚಿಕ್ಕಣ್ಣನ ಬಟ್ಲರ್ ಇಂಗ್ಲಿಷ್ ಕಾಮಿಡಿ...
ಪ್ರಶ್ನೆ 2. ಉಪಾಧ್ಯಕ್ಷ ಸಿನಿಮಾ ಡೈಲಾಗ್ ಅನ್ನು ಬಟ್ಲರ್ ಇಂಗ್ಲೀಷ್‌ನಲ್ಲಿ ಹೇಳಿ
ಚಿಕ್ಕಣ್ಣ ಉತ್ತರ: ಹೇ... ಹೆಣ್ಣಿನ ಬಗ್ಗೆ ನಿಮ್ಗೆ ಏನಾದ್ರು ಗೊತ್ತೆನ್ರೋ? ನೀವು ತಾಳಿ ಕಟ್ಟಿದಿರಾ ಅನ್ನೋ ಉದ್ದೇಶಕ್ಕೆ ತಂಗಾಳಿತರ ಇದಾಳೆ... ತಿರುಗಿ ಬಿದ್ರೆ ಬಿರುಗಾಳಿ... ಇದು ಉಪಾಧ್ಯಕ್ಷ ಸಿನಿಮಾದ ಡೈಲಾಗ್. ಇದನ್ನು ಬಟ್ಲರ್ ಇಂಗ್ಲಿಷ್‌ನಲ್ಲಿ ಚಿಕ್ಕಣ್ಣ ಹೇಳ್ತಾರೆ.
ಹೇ ಯೂ ನೋ ಅಬೌಟ್ ಉಮೆನ್..? ಆ... ಯು ನೋ ಇಂಪಾರ್ಟ್‌ಟೆಂಟ್ ಆಫ್ ದ ಉಮೆನ್, ಉಮೆನ್ ಇಸ್ ಎ ಕೂಲ್ ಏರ್..ಇನ್ ಕೇಸ್ ಆಫ್ ಫಯರ್ ಅಲ್ಲ.... ಇನ್ ಕೇಸ್ ಆಫ್ ನಿವರ್ಸ್ ಶಿ ಈಸ್ ದೇ ಆರ್ ಫಯರ್... ಬಿರುಗಾಳಿಗೆ ಏನಂತಾರೆ ಇಂಗ್ಲಿಷ್‌ನಲ್ಲಿ ಅಂತ ಮಲೈಕಾನ ಚಿಕ್ಕಣ್ಣ ಕೇಳುತ್ತಾರೆ. ತಕ್ಷಣ ಮಲೈಕಾ ಕೂಡ ಬಿರುಗಾಳಿಗೆ ಏನ್ ಅಂತಾರೆ ನನಗೂ ಗೊತ್ತಿಲ್ಲ ಅಂತಾರೆ. ಆಗ ಚಿಕ್ಕಣ್ಣ ನೀವು ನಮ್ ಸ್ಕೂಲೇ ಅಂತ ಕಾಮಿಡಿ ಮಾಡ್ತಾರೆ.
ಒಟ್ಟಿನಲ್ಲಿ ಚಿಕ್ಕಣ್ಣ ಚಿಕ್ಕ ಚಿಕ್ಕ ಕಾಮಿಡಿಗಳು ಇವತ್ತು ಅವರನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಅವರ ಹಾಸ್ಯ ಪ್ರಜ್ಞೆಗೆ ಅಭಿಮಾಣಿಗಳು ತಲೆ ಭಾಗಿದ್ದಾರೆ. ಹೊಟ್ಟೆನೋವಾಗುವಷ್ಟು ನಕ್ಕು ಚಿಕ್ಕಣ್ಣ ಹಾಸ್ಯವನ್ನು ಮೆಚ್ಚಿಕೊಂಡಿರುವುದಂತೂ ಸುಳ್ಳಲಲ್ಲ.












Click it and Unblock the Notifications